Asianet Suvarna News Asianet Suvarna News

ನಾ ಹೇಳಿದ್ದೇ ಒಂದು, ಅರ್ಥೈಯಿಸಿಕೊಂಡಿದ್ದೇ ಬೇರೆ: ಸ್ತ್ರೀಯರ ಬಗ್ಗೆ ಹೇಳಿಕೆಗೆ ಸುಧಾಕರ್ ಸ್ಪಷ್ಟನೆ

* ಸುಧಾಕರ್ ಮಹಿಳೆಯರ ಕುರಿತ ಹೇಳಿಕೆ ವಿವಾದ
* ಮಹಿಳೆಯರ ಕುರಿತ ಹೇಳಿಕೆಗೆ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ
* ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ಹೇಳಿಕೆ ನೀಡಿದ್ದ ಸುಧಾಕರ್

Minister Sudhakar Gives Clarifications about His Statement On women rbj
Author
Bengaluru, First Published Oct 11, 2021, 8:49 PM IST
  • Facebook
  • Twitter
  • Whatsapp

ಬೆಂಗಳೂರು, ಅ.11): ಆಧುನಿಕ ಮಹಿಳೆಯರು ಮದುವೆಯಾಗಲು (Modern Indian women) , ಮಕ್ಕಳನ್ನು (Children) ಪಡೆಯಲು ಇಚ್ಚಿಸುವುದಿಲ್ಲ ಎಂಬ ತಮ್ಮ ಹೇಳಿಕೆ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್ (Dr K Sudhakar) ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ಪ್ರಸ್ತುತ ದೇಶದಲ್ಲಿ ಅನೇಕ ಮಂದಿ ಆಧುನಿಕ ಮಹಿಳೆಯರು, ಒಂಟಿಯಾಗಿ ಬದುಕಲು ಇಷ್ಟಪಡುತ್ತಾರೆ. ಮದುವೆಯಾದರೂ (Marraige) ಕೂಡಾ ಮಕ್ಕಳನ್ನು  ಪಡೆಯಲು ಇಚ್ಚಿಸುವುದಿಲ್ಲ. ಬಾಡಿಗೆ ತಾಯ್ತನವನ್ನು ಬಯಸುತ್ತಾರೆ. ಈ ರೀತಿಯ ಚಿಂತನೆ ಒಳ್ಳೆಯದಲ್ಲಾ ಎಂದು ನಿಮ್ಹಾನ್ಸ್ ಸಂಸ್ಥೆಯಲ್ಲಿ ಭಾನುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ಡಾ. ಕೆ. ಸುಧಾಕರ್ ಹೇಳಿದ್ದರು. ಇದು ವಿವಾದವಾಗಿ ಮಾರ್ಪಟ್ಟಿತ್ತು. 

ಈ ಕುರಿತಂತೆ ಸೋಮವಾರ ಸ್ಪಷ್ಟನೆ ನೀಡಿರುವ ಸುಧಾಕರ್,  ಒಂಟಿ ಜೀವನ ಬಯಸುವ ಮಹಿಳೆಯರನ್ನು ಪ್ರತ್ಯೇಕಿಸುವ ಉದ್ದೇಶವಿಲ್ಲ, ಅದು ಸರ್ವೆಯೊಂದನ್ನು ಆಧರಿಸಿದೆ. ಅದರಲ್ಲಿ ಯುವ ಜನರು ಯಾವ ರೀತಿಯ ಮನೋಭಾವ ಹೊಂದಿದ್ದಾರೆ ಎಂಬುದನ್ನು ಅಂಕಿಸಂಖ್ಯೆಗಳೊಂದಿಗೆ ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

'ಸ್ತ್ರೀಯರು ಸಿಂಗಲ್ ಆಗಿರಲೇ ನೋಡ್ತಾರೆ.. ಮದುವೆಯಾದ್ರೂ ಮಕ್ಕಳು ಬೇಡ ಅಂತಾರೆ'

ತನ್ನ ಹೇಳಿಕೆಯನ್ನು ಈ ರೀತಿಯಲ್ಲಿ ಅರ್ಥೈಯಿಸಿಕೊಂಡಿರುವುದು ದುರದೃಷ್ಟಕರವಾಗಿದೆ. ಹೆಣ್ಣು ಮಗಳ ತಂದೆಯಾಗಿ, ವೈದ್ಯನಾಗಿ ಮಹಿಳೆಯರಿಗೆ ಸಂಬಂಧಿಸಿದ ಸೂಕ್ಷ್ಮತೆ ಹಾಗೂ ಅವರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳಲಾಗಲ್ಲ ಎಂಬುದು ಸಂಶೋಧನೆ ಮತ್ತು ಅಧ್ಯಯನಗಳಿಂದ ವ್ಯಾಪಕವಾಗಿ ತಿಳಿದುಬಂದಿದೆ. ಕುಟುಂಬ ಪದ್ಧತಿಯಿಂದ ವಿವಿಧ ಮಾನಸಿಕ ಒತ್ತಡದಿಂದ ಹೊರಬರಲು ಅನುಕೂಲವಾಗಲಿದೆ. ಸಂಪ್ರದಾಯಿಕ ಭಾರತೀಯ ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಒಗ್ಗಟ್ಟಿರುತ್ತದೆ. ಇದು ಮಾನಸಿಕ ಅನಾರೋಗ್ಯದಿಂದ ಹೊರಬರಲು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಪಾಶ್ಚಿಮಾತ್ಯ ಸಮಾಜದಲ್ಲಿ ಒಂಟಿತನವನ್ನು ಪ್ರೇರೆಪಿಸಿದರೆ, ಭಾರತೀಯ ಸಮಾಜ ಒಗ್ಗಟ್ಟಿನಿಂದ ಕೂಡಿದ್ದಾಗಿದ್ದು, ಸಹಕಾರ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದಲೇ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಹಾಗೂ ಏಷ್ಯಾದವರು ತಮ್ಮ ಕುಟುಂಬದವರನ್ನು ಹೆಚ್ಚಿನ ಆರೈಕೆ ಮಾಡುವುದರೊಂದಿಗೆ, ಹೆಚ್ಚಿನ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವುದಿಲ್ಲ ಎಂದಿದ್ದರೆ.

ಯು ಗೌ-ಮಿಂಟ್-ಸಿಪಿಆರ್ ಮಿಲೆನಿಯಲ್ ಸರ್ವೆ ಪ್ರಕಾರ, ಶೇ 19 ರಷ್ಟು ಮಹಿಳೆಯರು ಮದುವೆಯಾಗಲು ಅಥವಾ ಮಕ್ಕಳನ್ನು ಪಡೆಯಲು ಇಷ್ಟಪಡದಿರುವುದು ತಿಳಿದುಬಂದಿದೆ. ಇತರ ಶೇ.8 ಮಂದಿ ಮಕ್ಕಳನ್ನು ಹೊಂದಲು ಬಯಸಿದ್ದಾರೆ ಆದರೆ, ಅವರು ಮದುವೆಯಾಗಲು ಇಷ್ಟಪಟ್ಟಿಲ್ಲ ಎಂದು ಸುಧಾಕರ್ ವಿವರಿಸಿದರು.

Follow Us:
Download App:
  • android
  • ios