ಚಿಕ್ಕಮಗಳೂರು (ನ.08): ರಾಜ್ಯ ಸರ್ಕಾರ ವಿದ್ಯುತ್‌ ದರ ಏರಿಕೆ ಮಾಡಿರುವ ಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಸಮರ್ಥಿಸಿಕೊಂಡಿದ್ದಾರೆ.

ಇಲ್ಲಿ ಮಾತನಾಡಿದ ಅವರು, ಸರ್ಕಾರ ಅಂದ್ರೆ ಅಕ್ಷಯ ಪಾತ್ರೆ ಅಲ್ಲ. ಜನರಿಂದ ಬರುವ ಹಣದಿಂದಲೇ ಸರಿದೂಗಿಸಿಕೊಂಡು ಹೋಗಬೇಕು. ಸರ್ಕಾರಕ್ಕೂ ಆರ್ಥಿಕವಾಗಿ ಇತಿಮಿತಿ ಇದೆ.

8 ತಿಂಗಳಿಂದ ಸಾರಿಗೆ ವ್ಯವಸ್ಥೆಯಿಂದ ನೂರಾರು ಕೋಟಿ ರುಪಾಯಿ ನಷ್ಟವಾಗಿದೆ. ಇಂತಹ ಕಠಿಣ ಪರಿಸ್ಥಿತಿ ಇರುವುದರಿಂದ ವಿದ್ಯುತ್‌ ದರ ಏರಿಕೆ ಅನಿವಾರ್ಯ. ಜನರು ಇದಕ್ಕೆ ಸಹಕರಿಸಬೇಕು ಎಂದರು.

ಸಚಿವ ಸುಧಾಕರ್‌ಗೆ ಸಿಕ್ಕಿತು ಕೇಂದ್ರದಿಂದ ಪ್ರಶಂಸೆ ..

ಪಟಾಕಿಯ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪಟಾಕಿ ಮಾರಾಟ ನಿಷೇಧಿಸಲು ತೀರ್ಮಾನಿಸಲಾಗಿದೆ. ಇದನ್ನು ವರ್ತಕರು ಅರ್ಥ ಮಾಡಿಕೊಳ್ಳಬೇಕು. ಲಾಭಕ್ಕೋಸ್ಕರ ಕೋಟ್ಯಂತರ ಜನರ ಆರೋಗ್ಯ ನಿರ್ಲಕ್ಷಿಸುವುದು ಸರಿಯಲ್ಲ. ಆದ್ದರಿಂದ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಂಡಿದೆ ಎಂದರು.