Asianet Suvarna News

ಕೊರೋನಾ ಇನ್ನಷ್ಟು ಹರಡುವ ಮುನ್ಸೂಚನೆ, ಗ್ರಾಮೀಣ ಭಾಗಕ್ಕೆ ಹರಡದಂತೆ ಸರ್ಕಾರ ಪ್ಲಾನ್

ಕೊರೋನಾ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂಚನೆ ಇದ್ದು, ಗ್ರಾಮೀಣ ಭಾಗಕ್ಕೆ ಹರಡದಂತೆ ರಾಜ್ಯ ಸರ್ಕಾರ ಬಿಗ್ ಪ್ಲಾನ್ ಮಾಡಿದೆ.

Minister sriramulu Hints Open Hospital if-corona cases increased In Karnataka
Author
Bengaluru, First Published May 24, 2020, 5:02 PM IST
  • Facebook
  • Twitter
  • Whatsapp

ಬಳ್ಳಾರಿ, (ಮೇ.24): ರಾಜ್ಯದಲ್ಲಿ ಜೂನ್ ಮತ್ತು ಜುಲೈನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂಚನೆ ಇದೆ ಎಂದು ಸ್ವತಃ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. 

ಇಂದು (ಭಾನುವಾರ) ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂಚನೆ ಇದ್ದು, ಎಲ್ಲ ಜಿಲ್ಲೆಗಳಲ್ಲಿ ಓಪನ್ ಆಸ್ಪತ್ರೆ ಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಭಾನುವಾರವೂ ಕೊರೋನಾ ರಣಕೇಕೆ: ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಸೋಂಕಿತರಿಗೆ ಚಿಕಿತ್ಸೆ ನೀಡಲು ಮೈದಾನ, ಕ್ರೀಡಾಂಗಣದಂತಹ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂತಹ ಮುಕ್ತ ಆಸ್ಪತ್ರೆ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ  ಕಾರ್ಯಪಡೆ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು, ಗ್ರಾಮೀಣ ಭಾಗಕ್ಕೆ ಸೋಂಕು ಹರಡದಂತೆ ತಡೆಯಲು  ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಲಾಕ್‌ಡೌನ್ 4.0 ಸಡಿಲಿಸಿದ ನಂತರ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಪ್ರಸ್ತುತ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಸೋಂಕು ಹೆಚ್ಚುತ್ತಿದೆ.

ಇಷ್ಟು ದಿನ ವಿದೇಶದಿಂದ ಬಂದವರಲ್ಲಿ ಕೊರೋನಾ ದೃಢವಾಗಿತ್ತು. ಇದೀಗ ಅದು ವಲಸೆ ಕಾರ್ಮಿಕರ ಮೂಲಕ ಕೊರೋನಾ ಹಳ್ಳಿಗಳತ್ತ ದಾಪುಗಾಲಿಡುತ್ತಿದೆ.

ಹಳ್ಳಿಗಳಿಗೆ ವ್ಯಾಪಿಸುವ ಮೊದಲ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಮುಂಜಾಗ್ರತಾ ಕ್ರಮದ ಅತ್ಯವಶ್ಯಕವಾಗಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಹಳ್ಳಿಗಳಲ್ಲಿ ಕೊರೋನಾ ರಣಕೇಕೆ ಹಾಕುವುದಂತೂ ಗ್ಯಾರಂಟಿ.

Follow Us:
Download App:
  • android
  • ios