ಬೆಂಗಳೂರು, (ಜೂನ್. 19): ಸಿಎಂ ಬಿಎಸ್ ಯಡಿಯೂರಪ್ಪ ಗೃಹ ಕಚೇರಿ ಸೀಲ್ ಡೌನ್‌ ಬೆನ್ನಲ್ಲೇ ಇದೀಗ ಆರೋಗ್ಯ ಸಚಿವ ಬಿ ಶ್ರೀರಾಮುಲು ಸರ್ಕಾರಿ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ.

ಹೌದು..ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣದಲ್ಲಿ ಕೆಲಸ ಮಾಡಿದ್ದ ಮಹಿಳಾ ಕಾನ್ಸ್ ಟೇಬಲ್ ಅವರ ಪತಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಸಿಎಂ ಮನೆ ಬಾಗಿಲಿಗೂ ಬಂತು ಕೊರೋನಾ... ಶುರುವಾಗಿದೆ ಟೆನ್ಷನ್..ಟೆನ್ಷನ್..!

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದಂತ ಸಭೆಯೊಂದರಲ್ಲಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದಂತ ಮಹಿಳಾ ಪೇದೆಯೊಬ್ಬರ ಪತಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಸೀಲ್ ಡೌನ್ ಮಾಡಲಾಗಿತ್ತು.

ಇನ್ನ ಇದೇ ಸಚಿವ ಶ್ರೀರಾಮುಲು ಸಹ ಭಾಗವಹಿಸಿದ್ದರು. ಇದರಿಂದ ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿರುವ ಶ್ರೀರಾಮುಲು ನಿವಾಸವನ್ನ ಸೀಲ್‌ ಡೌನ್ ಮಾಡಲಾಗಿದೆ.

ಶ್ರೀರಾಮುಲು ಸಚಿವರ ಸರ್ಕಾರಿ ನಿವಾಸಕ್ಕೆ ಒಂದು ವಾರ ಕಾಲ, ಸಿಬ್ಬಂದಿ, ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಸರ್ಕಾರಿ ನಿವಾಸದ ಸಿಬ್ಬಂದಿ ಕೂಡಾ ಸ್ಥಳಾಂತರ ಮಾಡಲಾಗಿದ್ದು, ಸದ್ಯ ಯಾರು ಬರಬೇಡಿ ಎಂದು ಶ್ರೀರಾಮುಲು ಸರ್ಕಾರಿ ನಿವಾಸದಿಂದ ಕಾಲ್ಕಿತ್ತರು.

"