* ವಾಲ್ಮೀಕಿ ದಿನಾಚರಣೆ ಹಿನ್ನೆಲೆ 6 ಮಂದಿಗೆ ಪ್ರಶಸ್ತಿ ಘೋಷಣೆ* ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರನ್ನ ಪ್ರಶಸ್ತಿಗೆ ಆಯ್ಕೆ* ಅಧಿಕೃತವಾಗಿ ಪ್ರಕಟಿಸಿದ ಸಚಿವ ಶ್ರೀರಾಮುಲು

ಬೆಂಗಳೂರು, (ಅ.19): ವಾಲ್ಮೀಕಿ ದಿನಾಚರಣೆ ಅಂಗವಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulu) ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಸಾಧಕರನ್ನ ಗುರುತಿಸಿ ಒಟ್ಟು 6 ಮಂದಿಯನ್ನು ಪ್ರಶಸ್ತಿಗೆ (Award) ಆಯ್ಕೆ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಇನ್ನು ಈ ಬಗ್ಗೆ ಇಂದು (ಅ.19) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮುಲು, ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanthi) ಅಂಗವಾಗಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುತ್ತಿದ್ದೇವೆ. 6 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ನಾಳೆ (ಅಕ್ಟೋಬರ್ 20) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ 5 ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಪ್ರದಾನ ಮಾಡುತ್ತಿದ್ದೇವೆ ಎಂದು ರಾಮುಲು ಮಾಹಿತಿ ನೀಡಿದರು.

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಮತ್ತೊಬ್ಬ ಸ್ವಾಮೀಜಿ..!

* ಕೆ ಸಿ ನಾಗರಾಜ್ - ಸಾಮಾಜಿಕ ಕ್ಷೇತ್ರ - ತುಮಕೂರು
* ಲಕ್ಷ್ಮೀ ಗಣಪತಿ ಸಿದ್ಧಿ - ನಾಟಿ ವೈದ್ಯ ಸೇವೆ..ಉತ್ತರಕನ್ನಡ
* ಎಸ್ ಆರ್ ನಿರಂಜನ - ವಿಜ್ಞಾನ ಕ್ಷೇತ್ರ ಮೈಸೂರು
* ಭಟ್ಟಲಿ ಗೂಳೆಪ್ಪ - ಪರಿಸರ ಕ್ಷೇತ್ರ - ಬಳ್ಳಾರಿ.
* ಟಿ ಅಶ್ವಥ್ ರಾಮಯ್ಯ - ಶಿಕ್ಷಣ ಸೇವೆ ಬೆಂಗಳೂರು
* ಜಂಬಯ್ಯ ನಾಯಕ - ಪರಿಶಿಷ್ಟರ ಕಲ್ಯಾಣದ ಹೋರಾಟ ಹೊಸಪೇಟೆ

ಇದೇ ವೇಳೆ ವಾಲ್ಮೀಕಿ ಸಮುದಾಯದ ಮೀಸಲಾತಿ (Reservation) ಹೆಚ್ಚಳಕ್ಕೆ ಹೋರಾಟ ವಿಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮುಲು, ವಾಲ್ಮೀಕಿ ಸಮುದಾಯಕ್ಕೆ (Valmiki Community) ಪ್ರತ್ಯೇಕ ಸಚಿವಾಲಯ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ. ಮೀಸಲಾತಿ ಹೋರಾಟದಿಂದ ನಾನೂ ಬಂದವನು. ನಮ್ಮ ಸರ್ಕಾರದ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ. ಆದರೆ, ಉನ್ನತ ಮಟ್ಟದ ಸಮಿತಿ ವರದಿ ಬರಬೇಕಿದೆ. ನಮ್ಮ ಸರ್ಕಾರ ಇರುವಾಗಲೇ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇನ್ನು ಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿದೆ ಎಂದು ಕೆಎಸ್‌ಆರ್‌ಟಿಸಿ ಡ್ರೈವರ್ ಸ್ಟೇಟಸ್ ಹಾಕಿರುವ ವಿಚಾರಕ್ಕೆ ಶ್ರೀರಾಮುಲು ಮಾತನಾಡಿ, ಸಾರಿಗೆ ನೌಕರರಿಗೆ ವೇತನ ಸಮಸ್ಯೆ ಆಗ್ತಿಲ್ಲ. ಮೊನ್ನೆ ಸರ್ಕಾರದಿಂದ 171 ಕೋಟಿ ವೇತನ ಬಿಡುಗಡೆ ಆಗಿದೆ.. ನಾನು ಇಲಾಖೆ ಹೊಣೆ ತಗೊಂಡ ನಂತರ ಮುಷ್ಕರದ ವೇಳೆಯಲ್ಲಾದ ಅಂತರ ನಿಗಮದ ವರ್ಗಾವಣೆ, ಅಮಾನತು ರದ್ದುಪಡಿಸಿದ್ದೇನೆ. ಸ್ಟೇಟಸ್ ಹಾಕಿರುವ ಚಾಲಕನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾದ ಡಿಪೋ ಮ್ಯಾನೇಜರ್ ಗೆ ನೊಟೀಸ್ ಕೊಡಲಾಗಿದೆ. ಸ್ಪಷ್ಟೀಕರಣ ಬಂದ ನಂತರ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.