Asianet Suvarna News Asianet Suvarna News

ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿರುವುದರ ಹಿಂದೆ ಉದ್ದೇಶ ಬೇರೆ ಇರುತ್ತದೆ: ಸಚಿವ ದರ್ಶನಾಪುರ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ರೈತಪರ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟ ನಾಳೆ ಬೆಂಗಳೂರು ಬಂದ್ ಗೆ ಕರೆ ಕೊಟ್ಟಿರುವ ಬಗ್ಗೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ, ಬೆಂಗಳೂರು ಬಂದ್ ಗೆ ಕರೆ ನೀಡಿದ್ದು ಸರಿಯಲ್ಲ. ಬಂದ್ ಹಿಂದೆ ಬೇರೆ ಉದ್ದೇಶವಿದೆ ಎಂದರು.

Minister sharanabasappa darshanapur statement about cauvery dispute bengaluru bandh rav
Author
First Published Sep 25, 2023, 10:58 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಸೆ.25): ಕಾವೇರಿ ನೀರನ್ನು ತಮಿಳುನಾಡಿಗೆ 15 ದಿನಗಳ‌ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು  ಹರಿ ಬೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದು ಕಾವೇರಿ ಕೊಳ್ಳದ ರೈತರಿಗೆ ಭಾರಿ ಸಂಕಷ್ಟ ಎದುರಾಗಿದೆ. ಈಗಾಗಲೇ ಮಳೆ ಕೊರತೆಯಿಂದ ನೀರಿನ ಸಮಸ್ಯೆಯಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿ ಬಿಡಬಾರದು ಎಂದು ಕನ್ನಡಪರ, ರೈತಪರ ಹಾಗೂ ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಜೊತೆಗೆ ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಿವೆ.

ಬಂದ್ ಸರಿಯಲ್ಲ, ಅದರ ಹಿಂದೆ ಬೇರೆ ಉದ್ದೇಶ ಇರ್ತದೆ: ಸಚಿವ ಶರಣಬಸಪ್ಪ ದರ್ಶನಾಪುರ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ರೈತಪರ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟ ನಾಳೆ ಬೆಂಗಳೂರು ಬಂದ್(Bengaluru bandh) ಗೆ ಕರೆ ಕೊಟ್ಟಿರುವ ಬಗ್ಗೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ, ಬೆಂಗಳೂರು ಬಂದ್ ಗೆ ಕರೆ ನೀಡಿದ್ದು ಸರಿಯಲ್ಲ. ಬಂದ್ ನ್ನು ಹಿಂದಕ್ಕೆ ಪಡೆಯಬೇಕು. ಬಂದ್ ಹಿಂದೆ ಬೇರೆ ಉದ್ದೇಶ ಇರ್ತದೆ. ಸದ್ಯಕ್ಕೆ ಹೋರಾಟಗಾರರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ. ಮಂಡ್ಯ ಭಾಗದ ರೈತರ ಅನುಕೂಲಕ್ಕಾಗಿ ಕಾವೇರಿ ಹರಿ ಬಿಡಲಾಗುತ್ತಿದೆ ಎಂದರು.

ದಾವಣಗೆರೆ: ಜನತಾ ದರ್ಶನದಲ್ಲಿ ಹರಿದುಬಂದ ಸಮಸ್ಯೆಗಳ ಮಹಾಪೂರ!

ಬಿಜೆಪಿ ದುಡ್ಡು, ಬಂಡವಾಳಶಾಹಿ ಪರ: ಸಚಿವ ದರ್ಶನಾಪುರ

ಚೈತ್ರಾ ಕುಂದಾಪುರ ಆ್ಯಂಡ್ ಟೀಂ(Chaitra kundapur and team) ಉಡುಪಿಯ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಪ್ರಕರಣ ಸದ್ಯ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶರಣಬಸಪ್ಪ ದರ್ಶನಾಪುರ ( Sharanabasappa darshanapur ), ಬಿಜೆಪಿ ಇಗಿನದಲ್ಲ, ಮೊದಲಿನಿಂದಲೂ ಅದೇ ರೀತಿ ಇದೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಅವರೇ ಹೇಳಿದ್ದಾರೆ. ಬಿಜೆಪಿ ದುಡ್ಡಿನ ಮೇಲೆ ಇರುವಂಥದ್ದು. ಬಂಡವಾಳಶಾಹಿ ಪರವಾಗಿರುವಂಥ ಪಕ್ಷವಾಗಿದೆ. ಇದೇ ಕಾರಣಕ್ಕೆ ಜನರು 130 ಸ್ಥಾನಗಳಿಂದ 65 ಸ್ಥಾ‌ನಕ್ಕೆ ತಂದಿದ್ದಾರೆ. ಸಣ್ಣ ವಿಷಯಕ್ಕೆ ಕಡ್ಡಿಗೆ ಗುಡ್ಡ ಮಾಡೋದು, ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುವುದು, ಮಾಡಲಾರದ್ದನ್ನು ಮಾಡಿದ್ದಕ್ಕಾಗಿ ಜನ 65 ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ ಎಂದರು. 

ಇನ್ನು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸದನ್ನು ಸಚಿವ ದರ್ಶನಾಪುರ ವ್ಯಂಗ್ಯವಾಡಿದರು. ಹಿಂದೂ ಮಹಾ ಗಣಪತಿ ಅಂದ್ರೆ ಏನು..? ಮುಸ್ಲಿಂ ಗಣಪತಿ ಬೇರೆ ಇದ್ದಾನೇನು..? ಗಣಪತಿ ಅಂದ್ರೆ ಮುಗಿದೊಯ್ತು. ಹಿಂದೂ ಮಹಾಗಣಪತಿ ಅಂದ್ರೆ ಏನು ಅದರ ಅರ್ಥ ಗೊತ್ತಾಗ್ತಿಲ್ಲ. 2-3 ವರ್ಷದಿಂದ ಇದು ನಡೆಯುತ್ತಿದೆ. ನನಗೂ ಗೊತ್ತಾಗ್ತಿಲ್ಲ. ಇದರ ಹಿಂದೆ ಬಿಜೆಪಿ ಇದ್ದಾರೋ, ನಮ್ಮವ್ರು ಇದ್ದಾರೋ ಗೊತ್ತಾಗ್ತಿಲ್ಲ. ಈ ಹೆಸರಿನ ಹಿಂದಿನ ಗುಟ್ಟೇ ಗೊತ್ತಾಗುತ್ತಿಲ್ಲ. ಎಲ್ಲಾ ಸಮಾಜದವ್ರು ಒಂದೊಂದು ಗಣಪತಿ ಇದ್ದಾವೇನೋ ಎಂತಾ ನಂಗೆ ಗೊತ್ತಿಲ್ಲ ಎಂದರು.

ಸಂತೋಷ ಲಾಡ್‌ರಿಂದ ಬಳ್ಳಾರಿ ದಿವಾಳಿ; ಯತ್ನಾಳ ಹೇಳಿಕೆಗೆ ಲಾಡ್ ತಿರುಗೇಟು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮಾಜದವ್ರು ಸಿಎಂ ಆಗಬಹುದು: ಸಚಿವ ದರ್ಶನಾಪುರ

ರಾಜ್ಯದಲ್ಲಿ ಎಲ್ಲಾ ಸಮುದಾಯದವ್ರು ಸಿಎಂ ಆಗಿದ್ದಾರೆ. ಆದ್ರೆ ಇಲ್ಲಿಯವರೆಗೆ ದಲಿತರು ಮಾತ್ರ ಸಿಎಂ ಆಗಿಲ್ಲ. ಹಾಗಾಗಿ ದಲಿತರು ಸಿಎಂ ಆಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿನ್ನೆ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಚಿವ ದರ್ಶನಾಪುರ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮಾಜದವ್ರು ಸಿಎಂ ಆಗಬಹುದು. ನಾಳೆ ನಾವು, ನೀವು ಡಿಸಿಎಂ, ಸಿಎಂ ಆಗಬಹುದು. ಇದನ್ನು ಪಕ್ಷಗಳಿ ತೀರ್ಮಾನ ತಗೋಬೇಕು. ಬಿಜೆಪಿಯಲ್ಲಿ ಯಾರು ಸಿಎಂ ಆಗಬೇಕು ಅಂತಾ ನಾನು ಹೇಳಿದ್ರೆ ಆಗುತ್ತಾ.? ಆ ಪಕ್ಷದ ಹೈಕಮಾಂಡ್ ಏನಿದೆ ಅವ್ರು ತೀರ್ಮಾನ ತಗೋತಾರೆ. ಹೀಗಾಗಿ ನಾವು ಶಾಸಕರು ತೀರ್ಮಾನ ತೆಗೆದುಕೊಳ್ಳುವುದರಿಂದ ಆಗುವುದಿಲ್ಲ. ಎಲ್ಲಾ ಶಾಸಕರಿಗೂ ಮಂತ್ರಿ ಆಗಬೇಕು, ಮಂತ್ರಿಗಳಿಗೆ ಸಿಎಂ ಆಗಬೇಕು, ಸಿಎಂ ಗೆ ಪಿಎಂ ಆಗಬೇಕು ಅನ್ನೋ ಆಸೆ ಇರ್ತದೆ. ಒಂದು ಸಮಾಜದ ಮುಖಂಡರು ಆಗಿರುವುದರಿಂದ ಆ ಸಮಾಜದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಆದ್ರೆ ಎಲ್ಲವನ್ನೂ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದರು.

Follow Us:
Download App:
  • android
  • ios