Asianet Suvarna News Asianet Suvarna News

ಸಂತೋಷ ಲಾಡ್‌ರಿಂದ ಬಳ್ಳಾರಿ ದಿವಾಳಿ; ಯತ್ನಾಳ ಹೇಳಿಕೆಗೆ ಲಾಡ್ ತಿರುಗೇಟು

ನನ್ನ ವಿರುದ್ಧ ಯತ್ನಾಳ್ ಮಾತಾಡಿದ್ದನ್ನು ಸ್ವಾಗತಿಸುತ್ತೇನೆ ಎಂದು ಸಚಿವ   ಸಂತೋಷ್‌ ಲಾಡ್‌ ಯತ್ನಾಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Minister santosh lad reaction against basanagowda patil yatnal statement at dharwad rav
Author
First Published Sep 25, 2023, 9:59 PM IST

ಧಾರವಾಡ (ಸೆ.25): ನನ್ನ ವಿರುದ್ಧ ಯತ್ನಾಳ್ ಮಾತಾಡಿದ್ದನ್ನು ಸ್ವಾಗತಿಸುತ್ತೇನೆ ಎಂದು ಸಚಿವ   ಸಂತೋಷ್‌ ಲಾಡ್‌ ಯತ್ನಾಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಮೋದಿಯಿಂದ ದೇಶ ದಿವಾಳಿಯಾಗಿದೆ ಎಂದಿದ್ದ ಎಂದಿದ್ದ ಸಚಿವ ಸಂತೋಷ ಲಾಡ್. ಅದಕ್ಕೆ ಪ್ರತಿಯಾಗಿ ಲಾಡ್‌ರಿಂದ ಬಳ್ಳಾರಿ ದಿವಾಳಿಯಾಗಿದೆ ಎಂದು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಮೋದಿ ಸಾಹೇಬರು ದಿವಾಳಿ ಮಾಡಿದ್ದು ಸತ್ಯ. 1947ರಿಂದ 2014ರವರೆಗೆ ದೇಶದ ಸಾಲ 55 ಲಕ್ಷ ಕೋಟಿ ಇತ್ತು. ಆದರೀಗ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಆ ಸಾಲ ಎಷ್ಟು ಇದೆ ಎಂದು ತಿಳಿಸಿದ್ದಾರೆ. ಅದರ ಆಧಾರದ ಮೇಲೆ ದಿವಾಳಿ ಅಂತಾ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.

ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ?: ಸಚಿವ ಲಾಡ್

ಇತ್ತೀಚೆಗೆ ನಡೆದ ಜಿ20 ಗಾಗಿ 4200 ಕೋಟಿ ಖರ್ಚು ಮಾಡಿದ್ದಾರೆ. ಕೇವಲ ಎರಡೇ ದಿನಕ್ಕೆ ಅಷ್ಟು ಹಣ ಸೋರಿ ಹೋಗಿದೆ. ಈಗ ಅದರ ಬಗ್ಗೆ ಚರ್ಚೆ ಬೇಡ. ಫ್ರಾನ್ಸ್, ಇಂಡೋನೇಷ್ಯಾದಲ್ಲಿ ಸಹ ಜಿ 20 ಸಭೆ ಆಗಿದೆ. ಬೇರೆ ದೇಶಗಳಲ್ಲಿ ನಮಗಿಂತ ಕಡಿಮೆ‌ ಖರ್ಚು ಮಾಡಿ ಯಶಸ್ವಿ ಮಾಡಿದ್ದಾರೆ. ಆದರೆ ನಮ್ಮಲ್ಲಿ 4200 ಕೋಟಿ ಖರ್ಚು ಮಾಡಿದ್ದಾರೆ. ಜಿ20 ಶೃಂಗಸಭೆ ವೇಳೆ ಎರಡೆರಡು ಮೀಟರ್‌ಗೆ ಮೋದಿ ಫೋಟೋ ಹಾಕಿದ್ದರು. ಇದರಿಂದ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿ ಬಳಕೆಯಾದ ದುಡ್ಡು ಯಾರದ್ದು ಬಿಜೆಪಿಯವರದ್ದಾ? ಎಂದು ಪ್ರಶ್ನಿಸಿದ ಸಚಿವ ಲಾಡ್. 

ಸೆ. 29ರಂದು ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧ ಮಾತನಾಡಿದ ಸಚಿವರು, ನ್ಯಾಯಯುತ ಬೇಡಿಕೆಗಾಗಿ ಹೋರಾಟ ನಡೆದಿದೆ. ಕರ್ನಾಟಕ ಬಂದ್ ನಾನು ಸ್ವಾಗತಿಸುತ್ತೇನೆ. ಆದರೆ ಈ ಹೋರಾಟ ಶಾಂತಿಯುತವಾಗಿರಲಿ ಜನ, ನೆಲ, ಕನ್ನಡ ವಿಷಯ ಬಂದಾಗ ಹೋರಾಡುವ ಹಕ್ಕು ಕನ್ನಡ ಸಂಘಟನೆಗಳಿಗೆ ಇದೆ. ಈ ಬಂದ್ ನಡೆಯಲಿ. ಆದರೆ ಕೋರ್ಟ್ ಆದೇಶ ಇರುವ ಕಾರಣ ಸರ್ಕಾರ ಸದ್ಯಕ್ಕೆ ಏನು ಮಾಡಲು ಆಗುವುದಿಲ್ಲ. ಈ ಬಗ್ಗೆ ಸಿಎಂ ಮಾಹಿತಿ ಕೊಡುತ್ತಾರೆ ಎಂದರು.

ಗ್ಯಾರಂಟಿ ಯೋಜನೆ: ಧಾರವಾಡದಲ್ಲಿ ಸಿಎಂ ಸಿದ್ದು ಅಭಿನಂದನೆಗೆ ಲೇಸರ್ ಶೋ

ಬರಗಾಲ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಬರಗಾಲ ಪರಿಹಾರಕ್ಕೆ ಆಗಿಯೇ ಮಾನದಂಡಗಳಿಗೆ ರೈತ ಮುಖಂಡರುಗಳು ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಬಿಜೆಪಿಯ ಕೆಲ ಸ್ನೇಹಿ ಮುಖಂಡರು ಇದರ ಬಗ್ಗೆ ತಿಳಿಯಬೇಕಿದೆ. ಕೇಂದ್ರ ಸರ್ಕಾರದ ನಿಯಮದಡಿಯಲ್ಲಿಯೇ ಬರಗಾಲ ಘೋಷಿಸಬೇಕು. ಆದರೆ  ಇವರೆಲ್ಲ ನಮ್ಮ ವಿರುದ್ಧವೇ ಬರಗಾಲ ಸಂಬಂಧ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮಲ್ಲಿ 28 ಜನ ಸಂಸದರು ಇದ್ದಾರೆ. ಕೇಂದ್ರ ಸಚಿವರೂ ಇದಾರೆ. ಹಳೇ ಮಾನದಂಡ ತಿದ್ದುಪಡಿಗೆ ಸಿಎಂ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.  ಎಲ್ಲವನ್ನೂ ಕೇಂದ್ರದವರೇ ಆನ್‌ಲೈನ್ ದಲ್ಲಿ ಸರ್ವೆ ಮಾಡುತ್ತಾರೆ. ಹೀಗಾಗಿ ಈ ಬಗ್ಗೆ ಬಿಜೆಪಿಯವರನ್ನೇ ಮಾಧ್ಯಮಗಳು ಕೇಳಬೇಕು. ತಾಂತ್ರಿಕವಾಗಿ ಏನೇ ಅಡ್ಡಿ ಇದ್ದರೂ ಅದಕ್ಕೆ ಕೇಂದ್ರದ ಮಾನದಂಡವೇ ಕಾರಣ. ಹೀಗಾಗಿ ಅವರು ಸಹ ಕೇಂದ್ರದ ಮೇಲೆ ಒತ್ತಡ ಹಾಕಲಿ. ಅವರೂ ಸಹ ಕೇಂದ್ರಕ್ಕೆ ಆಗ್ರಹಿಸಲು ಹೋರಾಟ ಮಾಡಲಿ ಎನ್ನುವ ಮೂಲಕ  ಕೇಂದ್ರ ಸರ್ಕಾರದತ್ತ ಬೆರಳು ಮಾಡಿದ ಸಂತೋಷ ಲಾಡ್.

Follow Us:
Download App:
  • android
  • ios