ಸರ್ಕಾರದಿಂದಲೇ ಬರಗಾಲ ಘೋಷಣೆಗೆ ಸಿದ್ಧತೆ, ಸಚಿವ ಸಂತೋಷ್‌ ಲಾಡ್‌

ಈ ವರ್ಷ ಉತ್ತಮ ಮಳೆಯಾಗದ ಹಿನ್ನಲೆಯಲ್ಲಿ ಬರಗಾಲ ಘೋಷಣೆ ಮಾಡುವ ಕುರಿತಂತೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಸಂತೋಷ್‌ ಲಾಡ್‌ ಶನಿವಾರ ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
 

Minister Santosh Lad says government Planning to say year of Drought san

ಬೆಂಗಳೂರು (ಜು.1): ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಜಾರಿಯ ಬಗ್ಗೆ ಗೊಂದಲಗಳು ಮುಂದುವರಿದಿದೆ. ಇದರ ನಡುವೆ ಮುಂಗಾರು ಮಳೆ ಕೈಕೊಟ್ಟಿದೆ. ವರುಣದೇವ ಕೃಪೆ ತೋರದ ಹಿನ್ನಲೆಯಲ್ಲಿ ಹಾಲಿ ವರ್ಷವನ್ನು ಬರಗಾಲ ಎಂದು ಘೋಷಣೆ ಮಾಡುವ ಸಿದ್ಧತೆಯಲ್ಲಿದೆ ಎಂದು ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ ಹೇಳಿಕೆ ನೀಡಿದ್ದಾರೆ. ಭಾರಿ ಮೇಳೆ ಆಗದ ಹಿನ್ನಲೆ‌ ಭರಗಾಲ ಘೋಷಣೆ ಸಾಧ್ಯತೆ ಇದೆ. ಸರಕಾರ ಬರಗಾಲ ಘೋಷಣೆ ಮಾಡುವ ವಿಚಾರವಾಗಿ ಚಿಂತನೆ ನಡೆಸುತ್ತಿದೆ. ಈ ಬಾರಿ ಅಧಿವೇಶನದಲ್ಲಿ ಘೋಷಣೆ ಆಗುವ ಸಾದ್ಯತೆ ಇದೆ ಎಂದು ಹೇಳಿದ್ದಾರೆ. ಈ ಬಾರಿ ಸರ್ಕಾರ ಬರಗಾಲ ಘೋಷಣೆ ಮಾಡಬಹುದು. ಆ ನಿಟ್ಟಿನಲ್ಲಿ ಸರ್ಕಾರ ಯೋಚನೆ ಮಾಡುತ್ತಿರಬಹುದು ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈ ಬಾರಿ ಜೂನ್‌ನಲ್ಲಿ ನಿರೀಕ್ಷೆಗಿಂತ ಭಾರೀ ಪ್ರಮಾಣದ ಕಡಿಮೆ ಮಳೆಯಾಗಿರುವುದು ಇದಕ್ಕೆ ಕಾರಣ. ಜುಲೈನಲ್ಲಿ ನಿಗದಿತ ಪ್ರಮಾಣದ ಮಳೆ ಬರದೇ ಇದ್ದಲ್ಲಿ, ಈ ಬಾರಿ ಬರಗಾಲ ನಿಶ್ಚಿತ ಎಂದು ಹೇಳಲಾಗುತ್ತಿದೆ.

ಇನ್ನು ಅಕ್ಕಿ ವಿಚಾರವಾಗಿ ಮಾತನಾಡಿದ ಲಾಡ್, ಎಲ್ಲಿಯವರೆಗೆ ಅಕ್ಕಿ ಸಿಗಲ್ಲ ಅಲ್ಲಿಯವರೆಗೆ ಹಣ ಕೊಡುತ್ತೆವೆ. ಅಕ್ಕಿ ಕೊಡುತ್ತೆವೆ ಎಂದು ಭಾರತ ಆಹಾರ ನಿಗಮ ಒಪ್ಪಿಕೊಂಡಿತ್ತು. 7,80,000 ಟನ್ ಅಕ್ಕಿ ಇದೆ, ರಾಜ್ಯ ಸರಕಾರ ಪಾರ್ಟಿಸಿಪೇಟ್ ಮಾಡಬಾರದು ಕೇವಲ ಖಾಸಗಿಯವರು ಪಾರ್ಟಿಸಿಪೇಟ್ ಮಾಡಬೇಕು ಎಂದು ತಾಕೀತು ಮಾಡಿದೆ. ಎಫ್‌ಸಿಐ ಈ ರೀತಿ ಮಾಡೋದು ಸರಿನಾ? ಬಿಜೆಪಿ ಯವರಿಗೆ ಹೋಗಿ ಇದನ್ನೇ ಪ್ರಶ್ನೆ ಮಾಡಿ. ಪದೇ ಪದೇ 5 ಕೇಜಿ ಅಕ್ಕಿ ನರೇಂದ್ರ ಮೋದಿ ಅವರದ್ದು ಅಂತಾ ಹೇಳ್ತಾರೆ. ಯುಪಿಐ ಸರ್ಕಾರ ಇದ್ದಾಗ ಆಹಾರ ಭದ್ರತಾ ಕಾನೂನು ಬಂದಿದೆ. ಕಾಂಗ್ರೆಸ್ ಸರಕಾರ ಜಾರಿ ತಂದಿದೆ, ಆದರೆ ಸದ್ಯ ಮೋದಿ ಅವರು ಅಕ್ಕಿ ಕೊಡ್ತಾ ಇದಾರೆ. ಸಮ್ಮ‌ ಸರಕಾರ ಇದ್ದಾಗ ಮಾಡಿದ್ದ ಯೋಜನೆ ಅದು. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದ ಆಹಾರ ಭದ್ರತಾ ಕಾನೂನಿನಿಂದ ಈಗ ಎಲ್ಲರಿಗೂ ಲಾಭವಾಗುತ್ತಿದೆ. 1,10,000 ಸಾವಿರ ಕೋಟಿ ನಿಗದಿ ಹಣ ನಿಗದಿ ಪಡಿಸಿ ಕಾನೂನನ್ನ ಜಾರಿಗೆ ತಂದಿದೆ. ಸದ್ಯ ನಾವು ಐದು ಕೇಜಿ ಅಕ್ಕಿ ಕೊಟ್ಟರೆ, ಪ್ರಖ್ಯಾತಿ ಸಿಗುತ್ತದೆ ಅಂತ ಸದ್ಯ ಅವರು ಅಕ್ಕಿ ಕೊಡ್ತಿಲ್ಲ. ಸದ್ಯ ಸಿಎಂ ಅವರು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕುವ ತೀರ್ಮಾನ ಮಾಡಿದ್ದಾರೆ.

 

ವಾಡಿಕೆ ಮಳೆಯಲ್ಲಿ ಶೇ.70 ಕೊರತೆ: 'ಬರಗಾಲ ಕ್ಷೇತ್ರ' ಘೊಷಣೆಗೆ ಶಿವರಾಮ್ ಹೆಬ್ಬಾರ್ ಆಗ್ರಹ

ಇಡಿ ಕರ್ನಾಟಕದಲ್ಲಿ ನೀರಿಕ್ಷೆ ಇರೋದು ಐದು ಗ್ಯಾರಂಟಿ ಯೋಜನೆಗಳನ್ನ‌ ಜಾರಿ ಮಾಡೋದು. ಸದ್ಯ ಬಸ್ ನಲ್ಲಿ 88 ಲಕ್ಷ ಜನ ಸಂಚಾರ ಮಾಡುತ್ತಿದರು, ಇಗ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ದಿ ಗಾರ್ಡಿಯನ್‌ ಪತ್ರಿಕೆ ಇದನ್ನು ನೋಟಿಸ್‌ ಮಾಡಿದೆ.  ಇವತ್ತು ಮೋಸ್ಟ್‌ ಪಾಪ್ಯೂಲರ್ ಮಿಲಿಯನ್ ಆಪ್ ವುಮೆನ್‌ ಎಂಜಾಯ್ ದ ರೆಡ್ ಅಂತ ಬರೆದಿದ್ದಾರೆ. ಇಂತಹ ದೊಡ್ಡ ಕಾರ್ಯಕ್ರಮ ಆಗಿದೆ. ಸದ್ಯ ಐದು ಯೋಜನೆಗಳಿಗೆ 60,000 ಕೋಟಿ ಬಜೆಟ್‌ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಳೆ ಕೊರತೆ 50 ವರ್ಷದಲ್ಲೇ ಅಧಿಕ: ಅರ್ಧ ರಾಜ್ಯಕ್ಕೆ ಕುಡಿವ ನೀರಿನ ಬರ!

Latest Videos
Follow Us:
Download App:
  • android
  • ios