ವಾಡಿಕೆ ಮಳೆಯಲ್ಲಿ ಶೇ.70 ಕೊರತೆ: 'ಬರಗಾಲ ಕ್ಷೇತ್ರ' ಘೊಷಣೆಗೆ ಶಿವರಾಮ್ ಹೆಬ್ಬಾರ್ ಆಗ್ರಹ

ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗಿನ ವಾಡಿಕೆ ಮಳೆಯಲ್ಲಿ ಶೇ.70ರಷ್ಟುಕೊರತೆ ಉಂಟಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಆಗ್ರಹಿಸಿದರು.

uttara kannaada lack of rain MLA shivaram hebbar demand to declare drought zone rav

ಶಿರಸಿ (ಜು.1): ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗಿನ ವಾಡಿಕೆ ಮಳೆಯಲ್ಲಿ ಶೇ.70ರಷ್ಟುಕೊರತೆ ಉಂಟಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ರೈತರು ಭೀಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರು ಬಿತ್ತಿದ ಬೀಜ ಮೊಳಕೆ ಒಡೆಯದೇ ಹಾನಿಯಾಗಿದೆ. ಈ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕು. ಬರಗಾಲ ಕ್ಷೇತ್ರ ಎಂದು ಘೋಷಣೆಗೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಧಾನಸೌಧದ ಒಳಗೂ ಆಗ್ರಹಿಸುತ್ತೇನೆ ಎಂದರು.

 

ಉತ್ತರ ಕನ್ನಡ: ಯಲ್ಲಾಪುರ ಕ್ಷೇತ್ರ ಅಭಿವೃದ್ಧಿ ಕಾರ್ಯವೇ ಒಂದು ಸವಾಲು !

ಮುಂಡಗೋಡ ತಾಲೂಕಿನಲ್ಲಿ ಇದುವರೆಗೆ 260 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಇಲ್ಲಿಯವರೆಗೆ 70.88 ಮಿ.ಮೀ. ಮಳೆ ಆಗಿದೆ. ಕಳೆದ ವರ್ಷ ಈ ವೇಳೆಗೆ 133 ಮಿ.ಮೀ. ಮಳೆ ಆಗಿತ್ತು. ಬನವಾಸಿಯಲ್ಲಿ 377.3 ಮಿ.ಮೀ. ಆಗಬೇಕಿತ್ತಾದರೂ ಇದುವರೆಗೆ 115.1 ಮಿ.ಮೀ. ಮಳೆ ಆಗಿದೆ. ಶೇ.39ರಷ್ಟುಮಳೆ ಕೊರತೆ ಆಗಿದೆ ಎಂದರು.

ಯಲ್ಲಾಪುರ ತಾಲೂಕಿನಲ್ಲಿ 590 ಮಿ.ಮೀ. ಆಗಬೇಕಿತ್ತು. ಇದುವರೆಗೆ 176 ಮಿ.ಮೀ. ಮಳೆ ಆಗಿದ್ದು, ಶೇ.70ರಷ್ಟುಮಳೆ ಕೊರತೆ ಆಗಿದೆ. ಇದರಿಂದಾಗಿ ಬೆಳೆಯ ಮೇಲೆ ದುಷ್ಪರಿಣಾಮ ಬೀರಿದೆ. ಬನವಾಸಿ 2400 ಹೆಕ್ಟೇರ್‌ ಭತ್ತ ಬಿತ್ತನೆ ಆಗಬೇಕಿತ್ತಾದರೂ ಶೇ.13ರಷ್ಟುಮಾತ್ರ ಬಿತ್ತನೆ ಆಗಿದೆ. ಮುಂಡಗೋಡ 12,358 ಹೆಕ್ಟೇರ್‌ ಬಿತ್ತನೆ ಆಗಬೇಕಿತ್ತಾದರೂ 8000 ಹೆಕ್ಟೇರ್‌ ಆಗಿದೆ. ಬಿತ್ತಿದ ಬೀಜ ಸಹ ಶೇ.70 ಒಣಗಿದೆ ಎಂದರು.

ಮಳೆ ಕೊರತೆ ತೋಟಗಾರಿಕೆ ಕ್ಷೇತ್ರವನ್ನೂ ಬಾಧಿಸಿದೆ. ಬನವಾಸಿಯಲ್ಲಿ 2869 ಹೆಕ್ಟೇರ್‌, ಯಲ್ಲಾಪುರದಲ್ಲಿ 4899 ಹೆಕ್ಟೇರ್‌, ಮುಂಡಗೋಡಿನಲ್ಲಿ 3910 ಹೆಕ್ಟೇರ್‌ ತೋಟಗಾರಿಕೆ ಬೆಳೆ ಇದೆ. ಶೇ.50ರಷ್ಟುಅಡಕೆ ಬೆಳೆಗೆ ಹಾನಿ ಆಗಿದೆ. ಅಧಿಕಾರಿಗಳು ಈ ಬಗ್ಗೆ ವರದಿ ಮಾಡಿದ್ದಾರೆ ಎಂದರು.

ಈ ವರ್ಷ ಅಂಕೋಲಾ, ಹಳಿಯಾಳ, ಮುಂಡಗೋಡಿನ ಮಾವಿನ ಬೆಳೆಗೆ ಇನ್ಸೂರೆ®್ಸ…ನ್ನು ಸರ್ಕಾರ ಅನುಮತಿ ನೀಡಿದೆ. ಮುಂಡಗೋಡ, ಬನವಾಸಿ ಶುಂಠಿ ಬೆಳೆಗಾರರಿಗೆ ಇನ್ಶುರೆ®್ಸ… ಅವಕಾಶ ನೀಡಲಾಗಿದೆ. ಇದುವರೆಗೆ ಜೂನ್‌ನಿಂದ ಸೆಪ್ಟಂಬರ್‌ ಕೊನೆಯವರೆಗೆ ಇನ್ಶುರೆ®್ಸ… ಮಾಡಿಸಲು ಅವಕಾಶ ಇತ್ತು. ಈ ವರ್ಷ ಚುನಾವಣೆ ಕಾರಣ ವ್ಯತ್ಯಯವಾಗಿದ್ದು, ಆಗಸ್ವ್‌ ತಿಂಗಳಿನಿಂದ ಪ್ರೀಮಿಯಂಗೆ ಅವಕಾಶ ನೀಡಲಾಗಿದೆ ಎಂದರು.

ಬದಲಿ ವ್ಯವಸ್ಥೆ ಮಾಡಿ ವರ್ಗಾವಣೆ ಮಾಡಿ:

ಹೊಸ ಸರ್ಕಾರ ಬಂದ ಬಳಿಕ ವರ್ಗಾವಣೆ ಪರ್ವ ಆರಂಭ ಆಗಿದೆ. ಯಾವುದೇ ವರ್ಗಾವಣೆ ಮಾಡಿದರೂ ಆ ಜಾಗಕ್ಕೆ ಬದಲಿ ಬರುವವರೆಗೆ ಬಿಡುಗಡೆ ಮಾಡಬಾರದು. ಜಿಲ್ಲೆಯಲ್ಲಿ ಈಗಾಗಲೇ ಶೇ. 36ರಷ್ಟುಅಧಿಕಾರಿ ಕೊರತೆ ಇದೆ. ಹೊರ ಜಿಲ್ಲೆಯಿಂದ ಬಂದ ಹೆಸ್ಕಾಂ ಲೈನ್‌ಮನ್‌ಗಳು ವರ್ಗಾವಣೆ ಮಾಡಿದರೆ ಜಿಲ್ಲೆ ಕತ್ತಲೆಯಲ್ಲಿ ಇರಬೇಕಾಗುತ್ತದೆ. ಕೆಎಸ್‌ಆರ್‌ಟಿಸಿಯಲ್ಲಿ ಶೇ. 80ರಷ್ಟುಜನ ಬಾಗಲಕೋಟೆ, ವಿಜಯಪುರ ಭಾಗದವರಿದ್ದಾರೆ. ಜಿಲ್ಲೆಯ ಬಸ್‌ ಚಾಲಕ, ನಿರ್ವಾಹಕರು ವರ್ಗಾವಣೆಯಾದಲ್ಲಿ ಇಲ್ಲಿ ಸಮಸ್ಯೆ ಆಗುತ್ತದೆ. ಜನರ ಶಾಪ ಆಡಳಿತ ಪಕ್ಷಕ್ಕೆ ಬೀಳಲಿದೆ ಎಂದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂಡಗೋಡಿನಲ್ಲಿ 15, ಯಲ್ಲಾಪುರದಲ್ಲಿ 8 ಕಡೆ, ಬನವಾಸಿ 3 ಕಡೆ ಟ್ಯಾಂಕರ್‌ ಮೂಲಕ ನೀರು ನೀಡುತ್ತಿದ್ದೇವೆ. ಮಳೆ ವೇಗ ಜಾಸ್ತಿಗೊಳಿಸಿಕೊಳ್ಳುವ ಸಾಧ್ಯತೆ ಸಹ ಕಡಿಮೆ ಇದೆ ಎಂದರು.

ಚರ್ಚೆ ಬಳಿಕ ಈಶ್ವರಪ್ಪಗೆ ಪ್ರತಿಕ್ರಿಯೆ:

ನಮ್ಮ ಬಗ್ಗೆ ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದ ಹೆಬ್ಬಾರ್‌, ಕೆಲವರಿಗೆ ಮಾತನಾಡುವ ಚಟ ಇರುತ್ತದೆ. ಈಶ್ವರಪ್ಪ ಅವರಿಗೆ ಟಿಕೆಟ್‌ ತಪ್ಪಲು ನಾವು ಕಾರಣರಲ್ಲ. ಯಾವ ತ್ಯಾಗದಿಂದ ಸರ್ಕಾರ ಬಂತು? ಯಾರು ಮಂತ್ರಿಗಳು ಆದ್ರು? ಎಂಬುದನ್ನು ಈಶ್ವರಪ್ಪ ತಿಳಿದುಕೊಳ್ಳಬೇಕು. ಬಾಲ ಕಟ್‌ ಮಾಡುವ ಕೆಲಸ ನಾವು ಮಾಡಿಲ್ಲ. ಜವಾಬ್ದಾರಿಯಲ್ಲಿರುವವರು ಶಬ್ದ ಬಳಕೆ ಬಗ್ಗೆ ಚಿಂತಿಸಬೇಕು ಎಂದು ಟಾಂಗ್‌ ನೀಡಿದರು.

ನನ್ನ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟುಅಭಿವೃದ್ಧಿ ಆಗಿದೆ: ಸಚಿವ ಹೆಬ್ಬಾರ್

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ತ್ವರಿತ ಆಗಬೇಕು ಎಂದು ರಾಜ್ಯ, ಕೇಂದ್ರ ಸರ್ಕಾರಗಳು ತಯಾರಿ ನಡೆಸಿವೆ. ರಾಜ್ಯ ಜೀವ ವೈವಿಧ್ಯ ಮಂಡಳಿಯಲ್ಲಿ ಪಾಸ್‌ ಆಗಿ ಕೇಂದ್ರಕ್ಕೆ ಹೋಗಿದೆ. ಕೇಂದ್ರವೂ ಪರಿಶೀಲನೆಯಲ್ಲಿದ್ದು, ರೈಲ್ವೆ ಮಂಡಳಿ ಅಧಿಕಾರಿಗಳು ಸಂಪೂರ್ಣ ದಿನ ಇಲ್ಲಿ ಸಮೀಕ್ಷೆ ನಡೆಸಿದ್ದಾರೆ. ಈ ಸಲ ರೈಲ್ವೆ ಮಂಡಳಿ ಡಬಲ್‌ ಲೈನ್‌ ಮಾಡಲು ಸೂಚನೆ ನೀಡಿದೆ. 27 ವರ್ಷ ಪರಿಸರವಾದಿಗಳು ಅಡ್ಡಗಾಲು ಹಾಕಿದ್ದರಿಂದ ಈ ಯೋಜನೆ .137 ಕೋಟಿಯಿಂದ .1400 ಕೋಟಿಗೆ ಏರಿದೆ. ಪರಿಸರವಾದಿಗಳು ಇನ್ನಾದರೂ ಯೋಜನೆ ಮಾಡಲು ಬಿಡಲಿ.

ಶಿವರಾಮ ಹೆಬ್ಬಾರ, ಶಾಸಕ

Latest Videos
Follow Us:
Download App:
  • android
  • ios