ರಾಜ್ಯದಲ್ಲಿ Hijab ಪರ ಮಾತು ಆಡುವವರು 100 ಜನರೂ ಇಲ್ಲ: R.Ashoka

ಹಿಜಾಬ್‌ ವಿಚಾರದಲ್ಲಿ ಕಾಂಗ್ರೆಸ್‌ ಗೊಂದಲದಲ್ಲಿದೆ. ಯಾರನ್ನು ಬೆಂಬಲಿಸಬೇಕು ಎನ್ನುವುದೇ ಅದಕ್ಕೆ ಗೊತ್ತಾಗುತ್ತಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಹಿಜಾಬ್‌ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬಾರದಂತೆ ನೋಡಿಕೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದರು.

Minister R Ashoka Said in Karnataka There are not even 100 People in favor of Hijab gvd

ಉಡುಪಿ (ಫೆ.21): ಹಿಜಾಬ್‌ (Hijab) ವಿಚಾರದಲ್ಲಿ ಕಾಂಗ್ರೆಸ್‌ (Congress) ಗೊಂದಲದಲ್ಲಿದೆ. ಯಾರನ್ನು ಬೆಂಬಲಿಸಬೇಕು ಎನ್ನುವುದೇ ಅದಕ್ಕೆ ಗೊತ್ತಾಗುತ್ತಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಹಿಜಾಬ್‌ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬಾರದಂತೆ ನೋಡಿಕೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ (R.Ashoka) ಆರೋಪಿಸಿದರು. ಇಲ್ಲಿನ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಸಚಿವರು ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್‌ ವಿವಾದ ಚರ್ಚೆಗೆ ಬರಬಾರದು ಎನ್ನುವುದು ಕಾಂಗ್ರೆಸ್‌ನ ಏಕೈಕ ಅಜೆಂಡಾ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲ್ಲ ಅನ್ನುತ್ತಾರೆ, ನಾವು ಚರ್ಚೆಗೆ ಕರೆದರೂ ಬೇಡ ಎನ್ನುತ್ತಿದ್ದಾರೆ ಎಂದರು.

ನೂರು ಜನ ಸಿಗಲಿಕ್ಕಿಲ್ಲ: ‘ಹಿಜಾಬ್‌ ವಿಚಾರದಲ್ಲಿ ಪೋಷಕರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ’ ಎಂಬ ಶಾಸಕ ಯು.ಟಿ. ಖಾದರ್‌ ಆರೋಪಕ್ಕೆ ತಿರುಗೇಟು ನೀಡಿದ ಅವರು, ಹಿಜಾಬ್‌ ಪರ ಮಾತನಾಡುವವರು ಕೆಲವೇ ಕೆಲ ಜನ. ಇಡೀ ಕರ್ನಾಟಕ ಗುಡ್ಡೆ ಹಾಕಿದರೂ ನೂರು ಜನ ಸಿಗಲಿಕ್ಕಿಲ್ಲ, ನಮಗೆ ಹಿಜಾಬ್‌ ಪರ ಇರುವವರ ವೋಟು ಬೇಡ, ಸಿಂಪಥಿಯೂ ಬೇಡ ಎಂದರು. ಅಂಜುಮನ್‌ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಅವರೇ ಹಿಜಾಬ್‌, ಕೇಸರಿ ಮುಖ್ಯ ಅಲ್ಲ ಅಂತ ಕರೆ ಕೊಟ್ಟಿದ್ದಾರೆ. ಅನೇಕ ಮೌಲ್ವಿಗಳು ಇಸ್ಲಾಂನಲ್ಲಿ ಹಿಜಾಬ್‌ ಮುಖ್ಯ ಅಲ್ಲ ಎಂದಿದ್ದಾರೆ. ಆದರೆ ಕೆಲವರು ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳಿ ಹಿಜಾಬ್‌ ಬೇಕು ಎನ್ನುತ್ತಿದ್ದಾರೆ ಎಂದು ಹರಿಹಾಯ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಅವರ ನಡುವಿನ ಒಡಕು ಬೀದಿಗೆ ಬಂದಿದೆ. ಮೇಕೆದಾಟು ಪಾದಯಾತ್ರೆಯ (Mekedatu Padayatre) ಪೋಸ್ಟರ್‌ನಲ್ಲಿ ಡಿ.ಕೆ.ಶಿವಕುಮಾರ್‌ ಫೋಟೋ ಮಾತ್ರ ಇದೆ, ಬೇರೆ ಯಾವ ನಾಯಕರ ಫೋಟೋನೂ ಇಲ್ಲ, ಸಿದ್ದರಾಮಯ್ಯ ಇಲ್ವೇ ಇಲ್ಲ ಎಂದು ವ್ಯಂಗ್ಯವಾಡಿದ ಸಚಿವ, ಸರ್ಕಾರವೇ ವಿರೋಧ ಪಕ್ಷಕ್ಕೆ ಕಿವಿ ಹಿಂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

Hijab Row: ಧರ್ಮಕ್ಕಿಂತ ವಿದ್ಯೆ, ದೇಶ ದೊಡ್ಡದು, ವಿದ್ಯಾರ್ಥಿಗಳಿಗೆ ಅಶೋಕ್ ಕಿವಿಮಾತು

ಹಿಜಾಬ್‌ ಹಿಂದೆ ಐಸಿಸ್‌ ಇದೆ: ಹಿಜಾಬ್‌ ವಿವಾದದ ಹಿಂದೆ ಐಸಿಸ್‌ ಸಂಘಟನೆಯ ಷಡ್ಯಂತ್ರ ಕೆಲಸ ಮಾಡುತ್ತಿದೆ. ಇಲ್ಲದಿದ್ದರೆ ಒಂದು ಕಾಲೇಜಿನಲ್ಲಿ ಆರಂಭವಾದ ವಿವಾದ ಪ್ರಪಂಚಕ್ಕೆ ಹಬ್ಬಿದ್ದು ಹೇಗೆ? ಆ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಇಷ್ಟೆಲ್ಲ ಮಾಡಲು ಸಾಧ್ಯವೇ? ಪಾಕಿಸ್ತಾನದ ಪ್ರಧಾನಿ ಈ ವಿವಾದದ ಬಗ್ಗೆ ಮಾತನಾಡುತ್ತಾರೆ, ಅಪಘಾನಿಸ್ಥಾನದಿಂದ ಪ್ರತಿಕ್ರಿಯೆ ಬರುತ್ತದೆ ಅಂದರೆ ಇದರ ಹಿಂದೆ ವಿದೇಶಿ ಕೈವಾಡ ಇದೆ, ಐಸಿಸ್‌ನ ಷಡ್ಯಂತ್ರ ಇದ್ದಂತಿದೆ ಎಂದು ಆರೋಪಿಸಿದರು. ಹಿಜಾಬ್‌ ಧರಿಸಿದ ಕೆಲ ವಿದ್ಯಾರ್ಥಿನಿಯರು ಟಿಸಿ ಕೇಳುತ್ತಿದ್ದಾರೆ, ಕೆಲವರು ಶಾಲೆಗೆ ಬರುವುದಿಲ್ಲ ಎನ್ನುತ್ತಿದ್ದಾರೆ, 

ನಾನು ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತಿದ್ದೇನೆ, ವಿದ್ಯೆಯೇ ಮುಖ್ಯ ಹೊರತು ಧರ್ಮ ಮುಖ್ಯ ಅಲ್ಲ. ವಿದ್ಯೆ ಇದ್ದರೆ ಧರ್ಮ ಎಲ್ಲವೂ ನಿಮ್ಮ ಹತ್ತಿರ ಓಡಿ ಬರುತ್ತದೆ. ದೇಶ ದೊಡ್ಡದು, ಧರ್ಮ ದೊಡ್ಡದಲ್ಲ ಅರ್ಥ ಮಾಡಿಕೊಳ್ಳಿ ಎಂದರು. ಯಾದಗಿರಿಯಲ್ಲಿ ಮುಂದಿನ ಗ್ರಾಮವಾಸ್ತವ್ಯ: ಉಡುಪಿ ಜಿಲ್ಲೆಯ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿರುವ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಮುಂದಿನ ಗ್ರಾಮ ವಾಸ್ತವ್ಯಕ್ಕೆ ಯಾದಗಿರಿ ಜಿಲ್ಲೆಯನ್ನು ಆಯ್ಕೆ ಮಾಡಿದ್ದಾರೆ.

ಕೊರಗ ಯುವಕನಿಗ ಗ್ರಾಮಸಹಾಯಕ ಹುದ್ದೆ: ಯಾರನ್ನು ಸಮಾಜ ಅಸ್ಪೃಶ್ಯರು ಎಂದು ದೂರ ಇಟ್ಟಿದೆಯೋ ಅದೇ ಕೊರಗ ಸಮುದಾಯದ ಯುವಕನಿಗೆ ಸ್ಥಳದಲ್ಲೇ ಗ್ರಾಮ ಸಹಾಯಕನನ್ನಾಗಿ ನೇಮಿಸಿದ್ದೇನೆ. ನಾಳೆಯಿಂದ ಈ ಯುವಕ ಈ ಗ್ರಾಮದಲ್ಲಿ ಗ್ರಾಮಸಹಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾನೆ. ಅವರನ್ನು ದೂರ ಇಟ್ಟವರೇ ಈಗ ಸ್ವೀಕರಿಸಲೇಬೇಕು, ಹಾಗೇ ಮಾಡಿದ್ದೇನೆ ಎಂದು ಅಶೋಕ್‌ ಹೇಳಿದರು.  ಕುಡುಬಿ ಸಮುದಾಯದ ಮನೆಯಲ್ಲಿ ಬೆಲ್ಲ ನೀರು ಕುಡಿದಿದ್ದೇನೆ, ಅವರ ಬೆಲ್ಲದಂತಹ ಮನಸ್ಸನ್ನು ನೋಡಿದ್ದೇನೆ, ಬೆಲ್ಲ ಕೊಟ್ಟವರ ಋಣ ಇಟ್ಟುಕೊಳ್ಳುವುದಿಲ್ಲ. 

Udupi Government School: ಶಾಲಾ ಮಕ್ಕಳಿಗೆ ಅಶೋಕ್‌ರಿಂದ ಜೀವನ ಪಾಠ

ಕೃಷಿಕರಾದರೂ ಸ್ವಂತ ಭೂಮಿ ಇಲ್ಲದ ಕುಡುಬಿ ಸಮುದಾಯಕ್ಕೆ 50 ಎಕರೆ ಜಮೀನನ್ನು ಅವರ ಹೆಸರಿನಲ್ಲಿ ಮಾಡುತ್ತಿದ್ದೇನೆ ಎಂದು ಸಚಿವರು ಘೋಷಿಸಿದರು. ಕಂದಾಯ ಇಲಾಖೆಯನ್ನು ಜನರ ಬಳಿಗೇ ಕೊಂಡೊಯ್ಯುವ ಉದ್ದೇಶದಿಂದ ಆರಂಭಿಸಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಅವರು ತಿಂಗಳಿಗೊಂದು ಬಾರಿ ಗ್ರಾಮ ವಾಸ್ತವ್ಯ ಮಾಡುತ್ತಾ ಬಂದಿದ್ದಾರೆ.  ಈ ಬಾರಿ ಉಡುಪಿಯ ಆರೂರು ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು, ಮುಂದಿನ ಬಾರಿ ಹಿಂದುಳಿದ ಜಿಲ್ಲೆಯಾದ ಯಾದಗಿರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಈ ವಿಚಾರವನ್ನು ಸ್ವತಃ ಸಚಿವರೇ ಹೇಳಿಕೊಂಡಿದ್ದಾರೆ. ಈ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಗ್ರಾಮ ವಾಸ್ತವ್ಯದಲ್ಲಿ ಹೊಸ ವಿಚಾರಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ.  ಇಲ್ಲಿನ ಕೊರಗ ಸಮುದಾಯದ ಮನೆಯಲ್ಲಿ ಉಪಹಾರ ಸೇವಿಸಿದ್ದೇನೆ. ಎಸ್ಸಿ, ಎಸ್ಟಿಸಮುದಾಯದವರೇ ಅವರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ ಎಂದಾಗ ಅಸ್ಪಶ್ಯತೆ ಹೇಗಿರುತ್ತದೆ ಎಂಬ ಅನುಭವ ಆಗಿದೆ. ತಾವಾಗಿಯೇ ಏನನ್ನೂ ಕೇಳದ ಈ ಜನರಿಗೆ ಕಂದಾಯ ಇಲಾಖೆಯಿಂದ ಆಗಬೇಕಾದ ಕೃಷಿ ಭೂಮಿ, ಪರಿಕರಗಳು, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಇತ್ಯಾದಿ ಎಲ್ಲವನ್ನು ನೀಡಲು ಸ್ಥಳದಲ್ಲೇ ತೀರ್ಮಾನ ಮಾಡಿದ್ದೇನೆ ಎಂದರು.

Latest Videos
Follow Us:
Download App:
  • android
  • ios