Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ ಸಕಲ ಸಿದ್ಧತೆ: ಸಚಿವ ಆರ್. ಅಶೋಕ್

ಕನ್ನಡ ರಾಜ್ಯೋತ್ಸವ ಆಚರಣೆಗೆ  ಅಂತಿಮ ಹಂತದ ಸಿದ್ದತೆ ಪರಿಶೀಲನೆ ನಡೆಸಿದ್ದೇನೆ. ಬೆಳಿಗ್ಗೆ 10 ಗಂಟೆ ಒಳಗೆ ಎಲ್ಲಾ ವ್ಯವಸ್ಥೆ ಆಗುತ್ತದೆ. ನಾವು ಐದು ಸಾವಿರ ಪಾಸ್ ಪ್ರಿಂಟ್ ಹಾಕಿಸಿದ್ದೇವೆ ಎಂದು ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.

minister r ashoka details about kannada rajyotsava preparation gow
Author
First Published Oct 31, 2022, 9:17 PM IST

ಬೆಂಗಳೂರು (ಅ.3): ಕನ್ನಡ ರಾಜ್ಯೋತ್ಸವ ಚಾಮರಾಜಪೇಟೆ ಮೈದಾನದಲ್ಲಿ ಆಚರಿಸುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ  ಕಂದಾಯ ಸಚಿವ ಆರ್. ಅಶೋಕ್ ಅವರು ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿದೆ. ನಾವು ಅಡ್ವಕೇಟ್ ಜನರಲ್ ಜೊತೆ ಚರ್ಚೆ ಮಾಡ್ತೇವೆ. ಅಫೀಲ್ ಹೋಗಲು ಅವಕಾಶ ಇದ್ಯಿಯಾ ಎಂದು ಚರ್ಚೆ ಮಾಡ್ತೇವೆ. ಲೀಗಲ್ ಆಗಿ ಅವಕಾಶ ಇದ್ದರೇ ಅಫೀಲ್ ಹೋಗಿ ಪ್ರಯತ್ನ ಮಾಡ್ತೇವೆ ಎಂದಿದ್ದಾರೆ.

ಕನ್ನಡ ರಾಜ್ಯೋತ್ಸವ ಆಚರಣೆಗೆ  ಅಂತಿಮ ಹಂತದ ಸಿದ್ದತೆ ಪರಿಶೀಲನೆ ನಡೆಸಿದ್ದೇನೆ. ಬೆಳಿಗ್ಗೆ 10 ಗಂಟೆ ಒಳಗೆ ಎಲ್ಲಾ ವ್ಯವಸ್ಥೆ ಆಗುತ್ತದೆ. ನಾವು ಐದು ಸಾವಿರಾರು ಪಾಸ್ ಪ್ರಿಂಟ್ ಹಾಕಿಸಿದ್ದೇವೆ. ಆದರೆ ಅದು ಸಾಕಾಗುತ್ತಿಲ್ಲ. ಅಪ್ಪು ಅಭಿಮಾನಿಗಳು ಬರ್ತಾರೆ. ಯಾರನ್ನು ಎಲ್ಲಿ ಕೂರಿಸಬೇಕು ಎಂದು  ವ್ಯವಸ್ಥೆ ಮಾಡುತ್ತಿದ್ದಾರೆ. ಕುರ್ಚಿ ತೆಗೆಸಿ, ನಿಂತು ಕಾರ್ಯಕ್ರಮ ನೋಡಲು ವ್ಯವಸ್ಥೆ ಮಾಡಲಾಗಿದೆ.

ನಾಳೆ ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಹುಕ್ಕೇರಿ ಹಿರೇಮಠದಿಂದ ಹೋಳಿಗೆ ಊಟ

ಮಾಹಿತಿ ಪ್ರಕಾರ ಜನ ಹೆಚ್ಚು ಬರ್ತಾರೆ. ರಜನಿ ಕಾಂತ್, ಎನ್ ಟಿ.ಆರ್. ಸುಧಾಮೂರ್ತಿ ಬರ್ತಾರೆ. ಆದ್ದರಿಂದ ಜನ ಬರ್ತಾರೆ.  ಜನರೇ ಸ್ವಯ ಪ್ರೇರಿತವಾಗಿ ಗೊಂದಲ ಆಗದಂತೆ ನೋಡಿಕೊಳ್ಳಬೇಕು.  ಇದುವರೆಗೆ ಕರ್ನಾಟಕ ರತ್ನ ಎಂಟು ಜನಕ್ಕೆ ಕೊಟ್ಟಿದ್ದೇವೆ. ಅಪ್ಪು ಅವರಿಗೆ ಕೊಡುತ್ತಿರುವುದು 9 ನೇ ಪ್ರಶಸ್ತಿ. ವಿಐಪಿಗಳಿಗೆ 200 ಕುರ್ಚಿ  ವ್ಯವಸ್ಥೆ ಆಗಿದೆ. ವೇದಿಕೆಯ ಮೇಲೆ 25 ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಮಂತ್ರಿಗಳು, ಶಾಸಕರು  ಎಂಎಲ್ಸಿ ಗಳು ಬರ್ತಾರೆ. ನಾಳೆ ರಜೆ ಇದೆ, ಪೊಲೀಸ್ ತಿಮ್ಮಯ್ಯ ಸರ್ಕಲ್ , ಕೆ.ಆರ್ ಸರ್ಕಲ್ ಬಂದ್ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ರಿಯಲ್ ಕಾಂತರಾಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ; ದೈವನರ್ತಕ ಗುಡ್ಡಪಾಣಾರಗೆ ರಾಜ್ಯೋತ್ಸವದ ಗರಿ

ಇಂದಿರಾ ಕ್ಯಾಂಟಿನ್ ಗೆ ಬೀಗದ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಇಂದಿರಾ ಕ್ಯಾಂಟಿನ್ ನಾವು ಬಂದ್ ಮಾಡುತ್ತಿಲ್ಲ. ಅದು ತಾನಾಗೇ ಬಂದ್ ಆಗುತ್ತಿದೆ. ಅಲ್ಲಿ ಕೊಡುತ್ತಿರುವ ಫುಡ್ ಕ್ವಾಲಿಟಿ ಹಾಗಿದೆ. ಇಂದಿರಾ ಗಾಂಧಿ ಹೆಸರಿನಲ್ಲಿ  ಆತುರ ಆತುರವಾಗಿ ಕ್ಯಾಂಟಿನ್ ಪ್ರಾರಂಭ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಎರಡು ಕ್ಯಾಂಟಿನ್ ಇದೆ. ನೂರು ಅಡಿಯಲ್ಲಿ ಮಾಡಿದ್ದಾರೆ ಯಾರು ಬರ್ತಾರೆ. ಅವೈಜ್ಞಾನಿಕವಾಗಿ ಮಾಡಿರುವುದರಿಂದ ಗೊಂದಲ ಆಗುತ್ತಿದೆ. ಎಲ್ಲಾ ವ್ಯವಸ್ಥೆ ಮಾಡಬೇಕಿತ್ತು. ಏನು ವ್ಯವಸ್ಥೆ ಮಾಡದೆ ,ಇಂದಿರಾ ಗಾಂಧಿ ಹೆಸರು ಇಡಬೇಕು ಎಂದು ಮಾಡಿದ್ದಕ್ಕೆ ಫೇಲ್ ಆಗಿದೆ. ಆದ್ದರಿಂದ ಆದಾಗೆ ಅದು ಮುಚ್ಚಿಕೊಂಡು ಹೋಗುತ್ತಿದೆ. ನಾವೇನು ಅದನ್ನು ಮುಚ್ಚುತ್ತಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios