Asianet Suvarna News Asianet Suvarna News

'ಹಳೆಯ ಸೇಡನ್ನು ಕುಮಾರಸ್ವಾಮಿ ಈಗ ತೀರಿಸಿಕೊಳ್ತಿದ್ದಾರೆ'

* ಸುಮಲತಾ, ಎಚ್‌ಡಿಕೆ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ
* ಸಂಸತ್‌ ಸದಸ್ಯರಾಗಿ ಸುಮಲತಾ ತಮ್ಮ ಕೆಲಸ ಮಾಡಲಿ
* ಹಳೆಯ ಸೇಡನ್ನು ಕುಮಾರಸ್ವಾಮಿ ಈಗ ತೀರಿಸಿಕೊಳ್ಳುತ್ತಿದ್ದಾರೆ 
 

Minister R Ashok Talks Over Former CM HD Kumarwamy grg
Author
Bengaluru, First Published Jul 14, 2021, 11:47 AM IST

ಬೆಂಗಳೂರು(ಜು.14): ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದೇವೆ. ಗಣಿಗಾರಿಕಾ ಪ್ರದೇಶಗಳಲ್ಲಿ ಅಕ್ರಮ ತಡೆಯಲು ಈಗಾಗಲೇ ಸರ್ಕಾರ ಸೂಚಿಸಿದೆ. ಆದರೆ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. 

ಅರಕೆರೆ ವಾರ್ಡ್‌ನಲ್ಲಿ ಮಾಜಿ ಪಾಲಿಕೆ ಸದಸ್ಯ ಪುರುಷೋತ್ತಮ್‌ ಅವರು ಶಾಸಕ ಎಂ.ಸತೀಶ್‌ ರೆಡ್ಡಿ ನೇತೃತ್ವದಲ್ಲಿ ಏರ್ಪಡಿಸಿದ್ದ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಬಡವರಿಗೆ ದಿನಸಿ ಕಿಟ್‌ಗಳ ಹಂಚಿ ಅವರು ಮಾತನಾಡಿದರು.
ಅಕ್ರಮ ಗಣಿಗಾರಿಕೆ ತಡೆಯುವಂತೆ ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ರಿಗೆ ಸೂಚಿಸಲಾಗಿದೆ. ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದರೆ ದಾಳಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದರು.

ಅಕ್ರಮ ಗಣಿಗಾರಿಕಾ ಪ್ರದೇಶಗಳಿಗೆ ಸುಮಲತಾ ವಿಸಿಟ್ : KRS ಭೇಟಿಗೂ ಸಜ್ಜು

ಸಂಸತ್‌ ಸದಸ್ಯರಾಗಿ ಅವರ ಕೆಲಸವನ್ನು ಅವರು ಮಾಡಲಿ. ಜನರ ಆಸ್ತಿಪಾಸ್ತಿ ಉಳಿಸುವ ಚಾರದಲ್ಲಿ ನಮ್ಮ ತಕರಾರಿಲ್ಲ. ಹಳೆಯ ಸೇಡನ್ನು ಕುಮಾರಸ್ವಾಮಿ ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಎಂ. ಸತೀಶ್‌ರೆಡ್ಡಿ ಮಾತನಾಡಿ, ಕೊರೋನಾ 3ನೇ ಅಲೆ ವ್ಯಾಪಿಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಲಾಗಿದೆ. ಅನ್‌ಲಾಕ್‌ ಹಿನ್ನೆಲೆ ಜನ ಮೈ ಮರೆಯುವಂತಿಲ್ಲ. ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ಪಾಲಿಕೆ ಮಾಜಿ ಸದಸ್ಯ ಪುರುಷೋತ್ತಮ್‌ ಮಾತನಾಡಿ, ಅನ್‌ಲಾಕ್‌ ಆಗಿದ್ದರೂ ಸಹ, ಜನ ಸಂಕಷ್ಟದಲ್ಲಿಯೇ ನರಳುತ್ತಿದ್ದಾರೆ. ವಾರ್ಡ್‌ನಲ್ಲಿರುವ ಕೂಲಿ ಕಾರ್ಮಿಕರು, ವಲಸಿಗರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ದಿನಸಿ ಕಿಟ್‌ ವಿತರಣಾ ಕಾರ‍್ಯವನ್ನು ಮುಂದುವರೆಸಿದ್ದೇವೆಂದು ತಿಳಿಸಿದರು.
 

Follow Us:
Download App:
  • android
  • ios