Grama Vastavya: ಹನುಮಂತಪುರದಲ್ಲಿಂದು ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ಕಾರ್ಯಕ್ರಮದಲ್ಲಿ ಸಚಿವ ಆರ್‌.ಅಶೋಕ್‌ ಭಾಗವಹಿಸಿ, ಗ್ರಾಪಂ ವ್ಯಾಪ್ತಿಯ ಹನುಮಂತಪುರ ಗ್ರಾಮದ ಬಳಿ ಇರುವ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

minister r ashok grama vastavya at hanumantapura in chikkaballapur district today gvd

ಚಿಕ್ಕಬಳ್ಳಾಪುರ (ನ.26): ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ಕಾರ್ಯಕ್ರಮದಲ್ಲಿ ಸಚಿವ ಆರ್‌.ಅಶೋಕ್‌ ಭಾಗವಹಿಸಿ, ಗ್ರಾಪಂ ವ್ಯಾಪ್ತಿಯ ಹನುಮಂತಪುರ ಗ್ರಾಮದ ಬಳಿ ಇರುವ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಆರ್‌.ಅಶೋಕ್‌ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾಮಠಕ್ಕೆ ತೆರಳುವರು. ಬಳಿಕ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಜರಬಂಡಹಳ್ಳಿ ಗ್ರಾಪಂ ವ್ಯಾಪ್ತಿಯ ನುಲುಗೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ, ಶ್ರೀ ಲಕ್ಷ್ಮೇ ವೆಂಕಟರಮಣಸ್ವಾಮಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವರು. ನಂತರ ಅಲ್ಲಿಂದ ಕಲಾತಂಡಗಳ ಮೆರವಣಿಗೆಯೊಂದಿಗೆ ಎತ್ತಿನ ಬಂಡಿ ಮೂಲಕ ಜರಬಂಡಹಳ್ಳಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

Grama Vastavya: ಸ್ಮಶಾನ ಸಮಸ್ಯೆಗೆ ಐದೇ ನಿಮಿಷದಲ್ಲಿ ಸಚಿವ ಅಶೋಕ್‌ ಪರಿಹಾರ!

ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಬೆಳಗ್ಗೆ 11:30 ರಿಂದ 1:30ರ ರವರೆಗೂ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಬರೋಬ್ಬರಿ 18,617 ಮಂದಿ ಫಲಾನುಭವಿ ಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸಲಿರುವ ಕಂದಾಯ ಸಚಿವ ಆರ್‌.ಅಶೋಕ್‌, 68.21 ಲಕ್ಷ ರು., ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರ ವೇರಿಸಲಿದ್ದಾರೆ. ಮಧ್ಯಾಹ್ನ ಊಟದ ಬಳಿಕ ಸಂಜೆ 4 ರಿಂದ 5 ಗಂಟೆಯವರೆಗೂ ಜರಬಂಡಹಳ್ಳಿ ಗ್ರಾಪಂ ವೇದಿಕೆಯಲ್ಲಿ ಸಾರ್ವಜನಿಕರಿಂದ ಆಹವಾಲು ಸ್ಪೀಕರಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಿದ್ದಾರೆ.

ಗ್ರಾಮಸಭೆ, ಮಕ್ಕಳೊಂದಿಗೆ ಸಂವಾದ: ಸಂಜೆ 5 ರಿಂದ 6 ಗಂಟೆವರೆಗೂ ಜರಬಂಡಹಳ್ಳಿ ಗ್ರಾಪಂ ಹನುಮಂತಪುರ ಗ್ರಾಮದಲ್ಲಿನ ಅರಳಿಕಟ್ಟೆಮೇಲೆ ಗ್ರಾಮಸಭೆ ನಡೆಸಲಿ ರುವ ಸಚಿವ ಅಶೋಕ್‌, ಜನರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಮತ್ತೆ ಸಂಜೆ 6:30 ರಿಂದ 8:30ರ ವರೆಗೂ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಕ್ಕಳ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸುವರು. ರಾತ್ರಿ 8:30ಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಊಟ ಮಾಡಿ, ಮಕ್ಕಳೊದಿಗೆ ಸಂವಾದ ನಡೆಸಿ,ಅಲ್ಲೇ ವಾಸ್ತ ವ್ಯ ಹೂಡಲಿದ್ದಾರೆ.

ಪಹಣಿ ವಿತರಣೆ: ಗ್ರಾಮ ವಾಸ್ತವ್ಯದ ಮಾರನೇ ದಿನ ನ.27ರ ಭಾನುವಾರದಂದು ಕಂದಾಯ ಇಲಾಖೆ ವತಿಯಿಂದ ಜರಬಂಡಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಗುರುತಿಸಿರುವ 216 ಫಲಾನುಭವಿಗಳಿಗೆ ಪೌತಿಖಾತೆ ಆಂದೋಲನ ಕಾರ್ಯಕ್ರಮದಡಿ ಪಹಣಿ ಹಾಗೂ ಮ್ಯುಟೇಷನ್‌ ಪ್ರತಿಗಳನ್ನು ಸಚಿವ ಅಶೋಕ್‌ ವಿತರಿಸಲಿದ್ದಾರೆ.

Grama Vastavya: ಕಾಡಂಚಿನ ಶಾಲೇಲಿ ಇಂದು ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ

ಒಂದೇ ತಿಂಗಳಲ್ಲಿ 2ನೇ ಬಾರಿ ಗ್ರಾಮ ವಾಸ್ತವ್ಯ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮ ವಾಸ್ತವ್ಯ ಹೊಸ ದಾಖಲೆಗೆ ಸಾಕ್ಷಿಯಾಗಲಿದೆ. ಕಂದಾಯ ಸಚಿವ ಆರ್‌.ಅಶೋಕ್‌ ಪ್ರತಿ ತಿಂಗಳಿ ಗೊಮ್ಮೆ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದರು, ಈ ಬಾರಿ ಒಂದೇ ತಿಂಗಳಲ್ಲಿ ತಮ್ಮ ಎರಡನೇ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿರುವುದು ದಾಖಲೆಯಾಗಿದೆ.

Latest Videos
Follow Us:
Download App:
  • android
  • ios