Asianet Suvarna News Asianet Suvarna News

ಭ್ರಷ್ಟರ ವಿರುದ್ಧ ಪ್ರಹಾರ 1 ತಿಂಗಳ ಸಾಧನೆ: ಪ್ರಿಯಾಂಕ್‌ ಖರ್ಗೆ

ಸ್ಟಾರ್ಟ್‌ಅಪ್‌ಗಳಿಗೆ ವಿಶೇಷ ಉತ್ತೇಜನ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಲು ಕರ್ನಾಟಕ ಕೌಶಲ್ಯ ಸಲಹಾ ಸಮಿತಿ ಸ್ಥಾಪನೆಗೆ ಕ್ರಮ, ಮುಂದಿನ ಎರಡು ತಿಂಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಪೂರ್ವಭಾವಿಯಾಗಿ ತುರ್ತು ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ.

Minister Priyank Kharge Talks Over 1 Month Achievement grg
Author
First Published Jul 2, 2023, 8:29 AM IST | Last Updated Jul 2, 2023, 8:29 AM IST

ಬೆಂಗಳೂರು(ಜು.02):  ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ‘ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಯಮಿತ’ ಹಾಗೂ ‘ಜಲ ಜೀವನ ಮಿಷನ್‌’ ಮೂಲಕ ನಡೆದ ಎಲ್ಲ ಕಾಮಗಾರಿಗಳ ಬಗ್ಗೆ ಮೂರನೆಯವರಿಂದ ಪರಿಶೀಲನೆ, ಹಲವು ಅಧಿಕಾರಿಗಳ ಅಮಾನತು, ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಅಭಿವೃದ್ಧಿಪಡಿಸುವ ಸ್ಟಾರ್ಟಪ್‌ಗಳಿಗೆ ವಿಶೇಷ ಪ್ರೋತ್ಸಾಹಕ್ಕೆ ಕ್ರಮ, ರಾಜ್ಯಾದ್ಯಂತ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಗಳ ಪರಿಶೀಲನೆ...

ಇವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳ ಅವಧಿಯಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ಬಿಡುಗಡೆ ಮಾಡಿರುವ ವರದಿಯಲ್ಲಿನ ಪ್ರಮುಖ ಅಂಶಗಳು.

ಮಳೆ ಕೊರತೆ 50 ವರ್ಷದಲ್ಲೇ ಅಧಿಕ: ಅರ್ಧ ರಾಜ್ಯಕ್ಕೆ ಕುಡಿವ ನೀರಿನ ಬರ!

ವರದಿಯಲ್ಲೇನಿದೆ?:

ಜೂ.29ಕ್ಕೆ ಸಚಿವರಾಗಿ ಪ್ರಿಯಾಂಕ್‌ ಒಂದು ತಿಂಗಳ ಅವಧಿ ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ವಿವಿಧ ಸಚಿವರು, ಇಲಾಖಾ ಅಧಿಕಾರಿಗಳ ಜೊತೆ 43 ಸಭೆ ನಡೆಸಿದ್ದಾರೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾ.ಪಂ. ಸದಸ್ಯರೊಂದಿಗೆ ಸಭೆ ನಡೆಸಲು ಸೂಚನೆ ನೀಡಿದ್ದಾರೆ. ಪಂಚಾಯತ್‌ ರಾಜ್‌ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಹಾಗೂ ಇಲಾಖಾ ಅಧಿಕಾರಿಯನ್ನು ಮತ್ತಷ್ಟು ಉತ್ತರದಾಯಿಯನ್ನಾಗಿಸಲು ಪಂಚತಂತ್ರ-2 ಜಾರಿಗೆ ಸಕಲ ಸಿದ್ಧತೆ ಮಾಡಿದ್ದಾರೆ. ಕಿಯೋನಿಕ್ಸ್‌ ಸಂಸ್ಥೆಯ ಪುನಶ್ಚೇತನಗೊಳಿಸುವುದು ಹಾಗೂ ಸಂಸ್ಥೆಯ ಅಧಿಕೃತ ಪಟ್ಟಿಯಲ್ಲಿರುವ ಎಲ್ಲ ಖಾಸಗಿ ಸರಬರಾಜು ಹಾಗೂ ಸೇವಾದಾರರ ಸಮಗ್ರ ಪರಿಷ್ಕರಣೆಗೆ ಸೂಚಿಸಲಾಗಿದೆ.

ಪೇದೆ ಮಯೂರ್ ಕೊಲೆ ಪ್ರಕ​ರ​ಣ: ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

ಸ್ಟಾರ್ಟ್‌ಅಪ್‌ಗಳಿಗೆ ವಿಶೇಷ ಉತ್ತೇಜನ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಲು ಕರ್ನಾಟಕ ಕೌಶಲ್ಯ ಸಲಹಾ ಸಮಿತಿ ಸ್ಥಾಪನೆಗೆ ಕ್ರಮ, ಮುಂದಿನ ಎರಡು ತಿಂಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಪೂರ್ವಭಾವಿಯಾಗಿ ತುರ್ತು ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಸಮಗ್ರ ಕುಡಿಯುವ ನೀರಿನ ಮೂಲಗಳ ಆಡಿಟ್‌ಗೆ ಕ್ರಮ ಕೈಗೊಂಡಿದ್ದು, ಇದರಿಂದ ರಾಜ್ಯಾದ್ಯಂತ ಇರುವ ಪ್ರತಿಯೊಂದು ನೀರಿನ ಮೂಲವನ್ನು ಪತ್ತೆ ಹಚ್ಚಿ ಅದನ್ನು ಸದ್ಬಳಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಘಟಕಗಳ ಸ್ಥಾಪನೆಗೆ ಕ್ರಮ, ತ್ಯಾಜ್ಯ ಪುನರ್ಬಳೆ ಮೂಲಕ ಪಂಚಾಯಿತಿಗಳು ಆದಾಯ ಗಳಿಸುವ ರೀತಿಯಲ್ಲಿ ರೂಪರೇಷೆ ರಚಿಸಲಾಗಿದೆ. ರಾಜ್ಯಾದ್ಯಂತ ಗ್ರಾಮೀಣ ರಸ್ತೆಗಳನ್ನು ವೈಜ್ಞಾನಿಕವಾಗಿ ಮೇಲ್ದರ್ಜೆಗೇರಿಸಿ ಮರು ಬಳಕೆಯ ಪ್ಲಾಸ್ಟಿಕ್‌ ಬಳಸಿ ಉನ್ನತೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Latest Videos
Follow Us:
Download App:
  • android
  • ios