Asianet Suvarna News Asianet Suvarna News

ತನ್ವೀರ್ ಪೀರಾಗೆ ಐಸಿಎಸ್ ಲಿಂಕ್: ಯತ್ನಾಳ್‌ಗೆ ತಲೆ ಕಟ್ಟಿದೆ, ರೌಡಿಶೀಟರ್‌ ಕೇಸ್‌ ಹಾಕಿ, ಮುಸ್ಲಿಂ ನಾಯಕರ ಆಕ್ರೋಶ

ಯತ್ನಾಳರ ತಲೆ ಕಟ್ಟಿದೆ, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಹತಾಶರಾಗಿದ್ದಾರೆ. ಯತ್ನಾಳ್ ಮೇಲೆ 18 ಕ್ರಿಮಿನಲ್ ಕೇಸ್ ಇವೆ, ರೌಡಿಶೀಟ್ ಓಪನ್ ಮಾಡಿ. ಐದಾರು ಕೇಸ್ ಇದ್ದರೇ ರೌಡಿಶೀಟ್ ಓಪನ್ ಮಾಡ್ತಾರೆ, ಯತ್ನಾಳ್ ಮೇಲೆ 17-18 ಕೇಸ್ ಇವೆ ರೌಡಿ ಶೀಟ್ ಓಪನ್ ಮಾಡಿ: ಮುಸ್ಲಿಂ ಮುಖಂಡ ಎಂ.ಸಿ. ಮುಲ್ಲಾ 

Muslim Leaders Slams Vijayapura BJP MLA Basanagouda Patil Yatnal grg
Author
First Published Dec 7, 2023, 4:20 PM IST

ವಿಜಯಪುರ(ಡಿ.07):  ಮೌಲ್ವಿ ತನ್ವೀರ್ ಪೀರಾಗೆ ಐಸಿಎಸ್ ಲಿಂಕ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ  ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಮುಸ್ಲಿಂ ನಾಯಕರು ಮುಗಿಬಿದ್ದಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಸ್ಲಿಂ ಮುಖಂಡ ಎಂ.ಸಿ. ಮುಲ್ಲಾ, ಯತ್ನಾಳರ ತಲೆ ಕಟ್ಟಿದೆ, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಹತಾಶರಾಗಿದ್ದಾರೆ. ಯತ್ನಾಳ್ ಮೇಲೆ 18 ಕ್ರಿಮಿನಲ್ ಕೇಸ್ ಇವೆ, ರೌಡಿಶೀಟ್ ಓಪನ್ ಮಾಡಿ. ಐದಾರು ಕೇಸ್ ಇದ್ದರೇ ರೌಡಿಶೀಟ್ ಓಪನ್ ಮಾಡ್ತಾರೆ, ಯತ್ನಾಳ್ ಮೇಲೆ 17-18 ಕೇಸ್ ಇವೆ ರೌಡಿ ಶೀಟ್ ಓಪನ್ ಮಾಡಿ ಎಂದ ಎಂ.ಸಿ. ಮುಲ್ಲಾ ಒತ್ತಾಯಿಸಿದ್ದಾರೆ. 

ಸಾರೇ ಜಹಾಸೇ ಅಚ್ಚಾ... ದೇಶಭಕ್ತಿ ಗೀತೆ ಮೂಲಕ ಯತ್ನಾಳ್‌ಗೆ ಟಾಂಗ್ ಕೊಟ್ಟ ಮೌಲ್ವಿ ತನ್ವೀರ್ ಹಾಶ್ಮಿ! ವೈರಲ್ ವಿಡಿಯೋ

ಮಹಲ್ ಐನಾಪೂರದಲ್ಲಿ ಮೊದಲು ಯತ್ನಾಳ್ ಪಿಕೆಪಿಎಸ್ ಅಧ್ಯಕ್ಷರಾಗಿದ್ದರು. ಅಲ್ಲಿನ ಕಾರ್ಯದರ್ಶಿ ಆತ್ಮಹತ್ಯೆ ಮಾಡಿಕೊಂಡ, ಯಾಕೆ ಅನ್ನೋ ಬಗ್ಗೆ ತನಿಖೆಯಾಗಬೇಕು. ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದರ ಬಗ್ಗೆ ತನಿಖೆಯಾಗಬೇಕು. ಯತ್ನಾಳ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು. ಅವರ ಬಾಯಿಂದ ಸಾಕಷ್ಟು ಸತ್ಯಗಳು ಹೊರ ಬರಬೇಕಿದೆ. ಯತ್ನಾಳ್ ಮುಸ್ಲಿಂ ಸಮಾಜ ಹಾಗೂ ತನ್ವೀರ್ ಪೀರಾರಲ್ಲಿ ಕ್ಷಮೆ ಕೇಳಬೇಕು ಎಂದು ಎಂ.ಸಿ. ಮುಲ್ಲಾ ಆಗ್ರಹಿಸಿದ್ದಾರೆ. 

ಇನ್ನು ಮೌಲ್ವಿ ತನ್ವೀರ್ ಪೀರಾ ಪರ ಅಹಿಂದ ಮುಖಂಡರು ಬ್ಯಾಟ್‌ ಬೀಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮೌಲ್ವಿ ತನ್ವೀರ್ ಪೀರಾ ಹಾಸ್ಮೀ ಅವರು ನಾಡಿನ ಹಲವು ಪ್ರಮುಖ ಮಠಾಧೀಶರೊಂದಿಗೆ ವೇದಿಕೆ ಹಂಚಿಕೊಂಡಿರುವ ಫೋಟೊಗಳನ್ನ ಬಿಡುಗಡೆಗೊಳಿಸಿದ್ದಾರೆ.

ಸುತ್ತೂರು ಶ್ರೀಗಳು, ಇಳಕಲ್ ಶ್ರೀಗಳು, ಪಂಚಮಸಾಲಿ ಜಗ್ದುರುಗಳು, ಸಿದ್ಧೇಶ್ವರ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಮಹಾಲಿಂಗಪುರ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರೊಂದಿಗಿನ ಫೋಟೊಸ್‌ ಬಿಡುಗಡೆ ಮಾಡಿದ್ದಾರೆ. ಐಸಿಸ್ ನಂಟು ಇದ್ರೆ ಇಂತಹ ಸ್ವಾಮೀಜಿಗಳ ಜೊತೆ ವೇದಿಕೆ ಹಂಚಿಕೊಳ್ಳಲು ಆಗ್ತಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಯತ್ನಾಳ್ ಆರೋಪಕ್ಕೆ ವಿಜಯಪುರದಲ್ಲಿ ಪರ ವಿರೋಧಗ ಚರ್ಚೆಗಳು ನಡೆಯುತ್ತಿವೆ. 

Follow Us:
Download App:
  • android
  • ios