ಪ್ರಜ್ವಲ್, ಸೂರಜ್, ಯಡಿಯೂರಪ್ಪ ಇವರಿಗೆಲ್ಲ ಏನು ಅನಿಸೊಲ್ವ? ಮುಜುಗರ ಆಗೊಲ್ವ? ಪ್ರಿಯಾಂಕ್ ಖರ್ಗೆ
ಇದರ ಬಗ್ಗೆ ಏನು ಮಾತಾಡಬೇಕೋ ಗೊತ್ತಾಗ್ತಿಲ್ಲ. ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ (ಜೂ.23): ಇದರ ಬಗ್ಗೆ ಏನು ಮಾತಾಡಬೇಕೋ ಗೊತ್ತಾಗ್ತಿಲ್ಲ. ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಸಹಜ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣವಾಗಿ ಮಾಧ್ಯಮಗಳು ಕೇಳಿದ ಪ್ರಶ್ನಿಸಿದ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್, ಸೂರಜ್, ಯಡಿಯೂರಪ್ಪ ಪ್ರಕರಣ ಆಗಿರಬಹುದು ಯಾರು ಈ ರೀತಿ ಮಾಡಿದ್ದಾರೆ ಅವರಾರಿಗೂ ಏನು ಅನ್ನಿಸಲ್ವ? ಅಸಹ್ಯ, ಮುಜುಗರ ಆಗ್ತಿಲ್ವ? ಅವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೊಡ್ಡಮನೆ, ದೊಡ್ಡ ಕುಟುಂಬದವರಿಗೆ ನೀವು ಕೇಳಬೇಕು. ನಾವು ಜವಾಬ್ದಾರಿಯುತ ಕುಟುಂಬದಿಂದ ಬಂದಿರೋದು ಎಂದರು.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸಾಕ್ಷಿ ಕೊಡಲು ಬಂದು ಪೊಲೀಸರಿಗೆ ತಾನಾಗಿಯೇ ಸಿಕ್ಕಿಬಿದ್ದ ಸೂರಜ್ ರೇವಣ್ಣ!
ಇಂತಹ ಪ್ರಕರಣದಲ್ಲಿ ಬಂಧಿತರಾದರೂ, ಕೋರ್ಟ್‌ಗೆ ಹೋದ್ರೂ ಈ ಕಳಂಕ ಅಳಿಸೋವರೆಗೂ ಅಧಿಕಾರ ಬಿಟ್ಟಿರ್ತೇವೆ ಅಂತಾ ಹೇಳ್ತಾರಾ ಇವರು? ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಬಗ್ಗೆ ನಾನು ಮಾತನಾಡೋದಿಲ್ಲ. ಅವರ ಆತ್ಮಸಾಕ್ಷಿಗೆ ತಿಳಿದಂತೆ ಅವರು ಕೆಲಸ ಮಾಡಬೇಕು. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ಸ್ಮಶಾನ ಮೌನ ಯಾಕೆ ಅಂತಾ ಗೊತ್ತಾಗುತ್ತಿಲ್ಲ. ಉಳಿದ ಟೈಮ್‌ನಲ್ಲಿ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿಯವರು ಸಂವಿಧಾನ ಉಲ್ಲಂಘನೆ , ಕಾನೂನು ಉಲ್ಲಂಘನೆ ಆದಾಗ, ಇಂತಹ ಘಟನೆಗಳು ನಡೆದಾಗ ಮಾತಾಡೋದಿಲ್ಲ ಯಾಕೆ ಎಂದು ಪ್ರಶ್ನಿಸಿದರು.