Asianet Suvarna News Asianet Suvarna News

ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪನೆ; ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಘೋಷಣೆ

ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಕೈಗಾರಿಕಾ  ಸಚಿವ ಎಂ.ಬಿ.ಪಾಟೀಲ ಹೇಳಿದರು.

Minister M B Patil announced on VentuRISE meet set up startup park in Bengaluru sat
Author
First Published Aug 8, 2024, 7:15 PM IST | Last Updated Aug 8, 2024, 7:15 PM IST

ಬೆಂಗಳೂರು (ಆ.08): ದೇಶದ ಸ್ಟಾರ್ಟ್‌ಅಪ್‌ಗಳ  ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ  ಸಚಿವ ಎಂ.ಬಿ.ಪಾಟೀಲ ಹೇಳಿದರು.

ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ ʼವೆಂಚುರೈಸ್ 24ʼ (VentuRISE Karnataka) ಅನಾವರಣಗೊಳಿಸಿ ಮಾತನಾಡಿದ ಅವರು, 'ಜಪಾನ್‌, ದಕ್ಷಿಣ ಕೊರಿಯಾ ದೇಶಗಳ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿಯೂ ಸ್ಟಾರ್ಟ್‌ಅಪ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುವುದು. ಈ ಪಾರ್ಕ್‌ನಲ್ಲಿ ನವೋದ್ಯಮಗಳ ಅಗತ್ಯಗಳಿಗೆ ತಕ್ಕಂತೆ ಸ್ಥಳಾವಕಾಶ  / ನಿವೇಶನ ಒದಗಿಸಲಾಗುವುದು. ಸಕಲ ಸೌಲಭ್ಯ ಹೊಂದಿದ ಬಳಕೆಗೆ ಸಿದ್ಧ  ಇರುವ ಕಚೇರಿಗಳು ಇಲ್ಲಿರಲಿವೆ. ಪ್ರತಿಭಾನ್ವಿತ ನವೋದ್ಯಮಿಗಳು ತಮ್ಮ  ವಿನೂತನ ಆಲೋಚನೆಗಳನ್ನು ಸುಲಲಿತವಾಗಿ ಕಾರ್ಯಗತಗೊಳಿಸಲು ಪೂರಕವಾದ ಪರಿಸರವನ್ನು ಕಲ್ಪಿಸಿಕೊಡಲಾಗುವುದು ʼ ಎಂದರು.

ಸಿದ್ದರಾಮಯ್ಯ ಭೇಟಿಗೆ ಬಂದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾಹನದಲ್ಲಿ ಹೆಬ್ಬಾವು!

ನವೋದ್ಯಮ ಸವಾಲು ಉಪಕ್ರಮವು ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಮಧ್ಯೆ ಸಂವಹನ ಒದಗಿಸುವ ಮೂಲಕ ತಯಾರಿಕೆ ಮತ್ತು ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳಿಗೆ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಮಾಡಲಿದೆ. 'ವೆಂಚುರೈಸ್-24' ಕಾರ್ಯಕ್ರಮದ ಯಶಸ್ಸಿಗೆ ಟಿಐಇ ಗ್ಲೋಬಲ್‌ ಜೊತೆಗೆ ಕೈಜೋಡಿಸುವುದಕ್ಕೆ ನಮಗೆ ಸಂತಸವಾಗುತ್ತಿದೆ.  ಹೊಸ ಉಪಕ್ರಮಗಳನ್ನು ಪರಿಚಯಿಸುವ, ಮಾರ್ಗದರ್ಶನ ಕಾರ್ಯಕ್ರಮಗಳನ್ನು ವಿಸ್ತರಿಸುವ ಮತ್ತು ಜಾಗತಿಕ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ  ಆಕರ್ಷಿಸುವ ಮೂಲಕ ಈ ವರ್ಷದ ಕಾರ್ಯಕ್ರಮವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಎರಡನೇ ಆವೃತ್ತಿಯ ವೆಂಚುರೈಸ್‌: ಹಿಂದಿನ ವರ್ಷದ ಯಶಸ್ಸಿನಿಂದ  ಸ್ಫೂರ್ತಿ ಪಡೆದಿರುವ ಕರ್ನಾಟಕ ರಾಜ್ಯ ಸರ್ಕಾರವು, ಟಿಐಇ ಗ್ಲೋಬಲ್‌  ಮತ್ತು ಟಿಐಇ  ಬೆಂಗಳೂರಿನ ಸಹಯೋಗದಲ್ಲಿ ಈ ಬಾರಿಯ ವೆಂಚುರೈಸ್‌ ಆಯೋಜಿಸುತ್ತಿದೆ. ಈ ವರ್ಷದ ಜಾಗತಿಕ ನವೋದ್ಯಮ ಸವಾಲನ್ನು - ವಿವಿಧ ಕ್ಷೇತ್ರಗಳಲ್ಲಿನ ಹೊಸ ಆವಿಷ್ಕಾರಗಳನ್ನು ಗುರುತಿಸಲು, ಪೋಷಿಸಲು ಮತ್ತು ಬೆಂಬಲಿಸುವ ಉದ್ದೇಶಕ್ಕೆ ಸಮರ್ಪಿಸಲಾಗಿದೆ. ಮೂರು ಪ್ರಮುಖ ವಲಯಗಳಾದ  ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ), ಶುದ್ಧ ಇಂಧನ ವಾಹನ ಸಂಚಾರ, ವೈಮಾಂತರಿಕ್ಷ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ʼವೆಂಚುರೈಸ್ 24ʼ ಗಮನ ಕೇಂದ್ರೀಕರಿಸಲಿದೆ. ಈ ವಲಯಗಳ ಉದ್ಯಮಿಗಳೇ ತಾವು ಎದುರಿಸುತ್ತಿರುವ ಸವಾಲುಗಳನ್ನು ಇಲ್ಲಿ ಪ್ರಸ್ತುತಪಡಿಸಲಿದ್ದಾರೆ.   ನವೋದ್ಯಮಗಳು ವಾಸ್ತವ ಪ್ರಪಂಚದ  ಸವಾಲುಗಳನ್ನು ಬಗೆಹರಿಸಲು ಇದರಿಂದ ನೆರವಾಗಲಿದೆ.  ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮುಂದೆ ಬರುವ ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದೊಂದು ಸಮರ್ಥ ವೇದಿಕೆಯಾಗಿರಲಿದೆ.  ಜೊತೆಗೆ ಹೂಡಿಕೆದಾರರು ಮತ್ತು ಮಾರ್ಗದರ್ಶಕರ ನೆರವು ಪಡೆಯುವುದಕ್ಕೂ  ಸಾಧ್ಯವಾಗಲಿದೆ.

Bigg Boss: ಹಾರ್ಟ್ ಬೀಟ್ ಏರಿಸಲು ಕನ್ನಡ ಬಿಗ್‌ಬಾಸ್‌ಗೆ ಹಾಟ್ ಬ್ಯೂಟಿ ಜ್ಯೋತಿ ರೈ ಎಂಟ್ರಿ?

ನವೋದ್ಯಮಗಳು ಮಾರ್ಗದರ್ಶನ ಪಡೆಯಲಿರುವ ಉದ್ಯಮ ಪ್ರಮುಖರ ವಿವರ ಹೀಗಿದೆ
 • ಅಂಕಿತ್ ಫತೇಪುರಿಯಾ- ಜೆಟ್‌ವೆರ್ಕ್‌ನ ಸಹ-ಸಂಸ್ಥಾಪಕ
 • ಅವೈಸ್‌ ಅಹ್ಮದ್‌ - ಪಿಕ್ಸೆಲ್‌ನ ಸ್ಥಾಪಕ ಮತ್ತು ಸಿಇಒ
 • ಗಧಾಧರ್ ರೆಡ್ಡಿ - ನೊಪೊ ನ್ಯಾನೊಟೆಕ್ನಾಲಜೀಸ್‌ನ ಸಂಸ್ಥಾಪಕ ಮತ್ತು ಸಿಇಒ
 • ಮಿನು ಮಾರ್ಗರೇಟ್ -  ಬ್ಲಿಸ್ ಕ್ಲಬ್‌ನ ಸಂಸ್ಥಾಪಕಿ ಮತ್ತು ಸಿಇಒ
* ಕೌಶಿಕ್ ಮುಡ್ಡಾ- ಎಥೆರಿಯಲ್ ಮಷೀನ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ
 • ರೋಹನ್ ಗಣಪತಿ - ಬೆಲಾಟ್ರಿಕ್ಸ್‌ ಏರೊಸ್ಪೇಸ್‌ನ ಸಿಇಒ ಮತ್ತು ಸಿಟಿಒ

Latest Videos
Follow Us:
Download App:
  • android
  • ios