Asianet Suvarna News Asianet Suvarna News

ಕರ್ನಾಟಕದಲ್ಲೂ ಕೋವಿಡ್‌ ಆತಂಕ?: ಸಚಿವ ಸುಧಾಕರ್‌ ಪ್ರತಿಕ್ರಿಯೆ

*  ಸೋಂಕು ತಡೆಗೆ ರಾಜ್ಯ ಸರ್ಕಾರದಿಂದ ಎಲ್ಲಾ ಮುನ್ನೆಚ್ಚರಿಕಾ ಕ್ರಮ
*  6 ವರ್ಷ ಮೇಲಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲು ತೀರ್ಮಾನಿಸಿದ ಕೇಂದ್ರ ಸರ್ಕಾರ
*  18 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್‌ ಲಸಿಕೆ ಪಡೆಯಲು ಅವಕಾಶ 
 

Minister K Sudhakar React on Covid 4th Wave in Karnataka grg
Author
Bengaluru, First Published Apr 28, 2022, 6:09 AM IST

ಬೆಂಗಳೂರು(ಏ.28):  ರಾಜ್ಯದಲ್ಲಿ(Karnataka) ಕೊರೋನಾ(Coronavirus) ಕುರಿತು ಆತಂಕ ಪಡಬೇಕಾದ ಪರಿಸ್ಥಿತಿ ಇಲ್ಲ. ತಕ್ಷಣ ಕಠಿಣ ಕ್ರಮ ಕೈಗೊಳ್ಳಬಹುದಾದ ಸ್ಥಿತಿಯೂ ವೈಜ್ಞಾನಿಕವಾಗಿ ಕಂಡು ಬಂದಿಲ್ಲ. ಸೋಂಕು ತಡೆಗೆ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಭಾಗವಹಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರಕರಣ, ಪಾಸಿಟಿವಿಟಿ ದರ, ಸಾವಿನ ದರ ಯಾವುದನ್ನು ಪರಿಶೀಲಿಸಿದರೂ ರಾಜ್ಯದಲ್ಲಿ ಆತಂಕಪಡಬೇಕಾದ ಸ್ಥಿತಿ ಇಲ್ಲ. ಆದರೂ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು(Health Department) ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

Covid Crisis: ಇನ್ಮುಂದೆ ಮಾಸ್ಕ್‌ ಧರಿಸದಿದ್ರೆ 250 ದಂಡ..!

ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆಗೆ ಸಿದ್ಧವಾಗಿರಬೇಕು. 30 ವರ್ಷ ಮೇಲ್ಪಟ್ಟಅನಾರೋಗ್ಯ ಪೀಡಿತರಿಗೆ ಕೊರೋನಾ ಪರೀಕ್ಷೆ ನಡೆಸಬೇಕು. ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರುವವರ ಬಗ್ಗೆ ದಾಖಲಾತಿ ಇಡಬೇಕು ಎಂಬುದು ಸೇರಿದಂತೆ ಹಲವು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಗುತ್ತಿಗೆ ನೌಕರರ ಅವಧಿ ವಿಸ್ತರಣೆ: ಸುಧಾಕರ್‌

ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆ ಸೇವೆಗೆ ತೆಗೆದುಕೊಂಡಿದ್ದ ನೌಕರರ ಅವಧಿಯನ್ನು ಕೊರೋನಾ ಇಲ್ಲದಿದ್ದರೂ 18 ತಿಂಗಳು ಮುಂದುವರೆಸಿದ್ದೆವು. ಇದೀಗ ಆರ್ಥಿಕ ಇಲಾಖೆಗೆ ಪತ್ರ ಬರೆದು ಅವರ ಅವಧಿಯನ್ನು ಇನ್ನೂ ಆರು ತಿಂಗಳು ಮುಂದುವರೆಸಲು ಕೇಳಿದ್ದೇವೆ. ಆರ್ಥಿಕ ಇಲಾಖೆ ಅನುಮತಿ ನೀಡಿದರೆ ಮುಂದುವರೆಸಲಾಗುವುದು ಎಂದು ಸಚಿವ ಸುಧಾಕರ್‌ ತಿಳಿಸಿದರು.

ಕೇಂದ್ರ ಸರ್ಕಾರವು(Central Government) 6 ವರ್ಷ ಮೇಲಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲು ತೀರ್ಮಾನಿಸಿರುವುದು ಉತ್ತಮ ನಿರ್ಧಾರ. ಕೊರೋನಾ ತಡೆಯಲು ಲಸಿಕೆ(Vaccine) ಪಡೆಯುವುದು ಅತಿ ಮುಖ್ಯ. ರಾಜ್ಯದಲ್ಲಿ ಈಗಾಗಲೇ ಬೂಸ್ಟರ್‌ ಡೋಸ್‌ ಲಸಿಕೆ ನೀಡುತ್ತಿದ್ದು 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್‌ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ ಎಂದರು. 
 

Follow Us:
Download App:
  • android
  • ios