Asianet Suvarna News Asianet Suvarna News

ಬಿಬಿಎಂಪಿ 198 ವಾರ್ಡ್‌ಗಳ ಸಂಖ್ಯೆ 225ಕ್ಕೆ ಏರಿಕೆ?

ಬಿಬಿಎಂಪಿಗೆ ಮತ್ತಷ್ಟು ಹೊಸ ಪ್ರದೇಶ ಸೇರ್ಪಡೆ| 8 ವಲಯಗಳ ಬದಲಿಗೆ 15 ವಲಯ ರಚನೆ| ಪ್ರತಿ ವಲಯಕ್ಕೂ ಪ್ರತ್ಯೇಕ ಆಯುಕ್ತರ ನೇಮಕಕ್ಕೆ ಚಿಂತನೆ| ಸಂಪುಟದಲ್ಲಿ ಚರ್ಚೆ: ಸಚಿವ ಜೆ.ಸಿ. ಮಾಧುಸ್ವಾಮಿ| 
 

Minister J C Madhuswamy Says number of BBMP 198 wards increased to 225
Author
Bengaluru, First Published Sep 4, 2020, 7:17 AM IST

ಬೆಂಗಳೂರು(ಸೆ.04):ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಗೆ ಮತ್ತಷ್ಟು ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡು 198 ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಹೆಚ್ಚಳ ಮಾಡಲು ಹಾಗೂ 8 ವಲಯಗಳ ಬದಲಿಗೆ 15 ವಲಯಗಳನ್ನು ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಬಿಬಿಎಂಪಿಯ ಪ್ರಸಕ್ತ ಆಡಳಿತಾವಧಿಯು ತಿಂಗಳಾಂತ್ಯಕ್ಕೆ ಮುಗಿಯಲಿದ್ದು, ಈ ವೇಳೆಗೆ ಚುನಾವಣೆ ನಡೆಯಬೇಕಾಗಿದೆ. ಹೀಗಾಗಿ ಬಿಬಿಎಂಪಿ ವಾರ್ಡ್‌ಗಳ ಪುನರ್‌ರಚನೆ ಮಾಡಬೇಕಾದರೆ, ಈಗಲೇ ಹೈಕೋರ್ಟ್‌ ಮುಂದೆ ಹೋಗಿ ಚುನಾವಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಬೇಕಾಗಿದೆ. ಈ ಸಂಬಂಧ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಿದ್ದು ಶುಕ್ರವಾರ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಹೊಸ ಪ್ಲಾನ್‌

40000 ಜನಸಂಖ್ಯೆಗೆ 1 ವಾರ್ಡ್‌:

ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಬಿಬಿಎಂಪಿಗೆ ಹೊಸದಾಗಿ ಇನ್ನೂ ಹಲವು ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಪ್ರಸ್ತುತ ಇರುವ ವಾರ್ಡ್‌ಗಳನ್ನು ಪುನರ್‌ರಚನೆ ಮಾಡಿ 40 ರಿಂದ 42 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್‌ ರಚನೆ ಮಾಡಬೇಕು. ಜತೆಗೆ ವಲಯಗಳ ಸಂಖ್ಯೆಯನ್ನು 15ಕ್ಕೆ ಏರಿಕೆ ಮಾಡಿ ಪ್ರತಿ ವಲಯಕ್ಕೂ ಒಬ್ಬರು ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡಬೇಕು ಎಂಬ ಚಿಂತನೆ ಇದೆ. ಆದರೆ ಕೆಲವರು ನಗರ ಹೊರ ಭಾಗದಲ್ಲಿ 40 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್‌ ಮಾಡಿದರೆ, ಹೆಚ್ಚು ವಿಸ್ತೀರ್ಣದ ವಾರ್ಡ್‌ಗಳ ರಚನೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ಇನ್ನಷ್ಟುವಿಸ್ತೃತವಾಗಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರವು ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಸಿದ್ಧವಿದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ಅನುಮತಿ ಪಡೆಯಬೇಕು. ನ್ಯಾಯಾಲಯವು 198 ವಾರ್ಡ್‌ಗಳ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸುವಂತೆ ಈ ಹಿಂದೆ ಆದೇಶಿಸಿತ್ತು. ಇದರಂತೆ 198 ವಾರ್ಡ್‌ಗಳ ಮೀಸಲಾತಿಯನ್ನೂ ಸಿದ್ಧಪಡಿಸಿಕೊಂಡಿದ್ದೇವೆ. ಬಿಬಿಎಂಪಿ ವಾರ್ಡ್‌ಗಳ ಪುನರ್‌ರಚನೆ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ಚುನಾವಣೆಯನ್ನು ಸ್ವಲ್ಪ ದಿನ ಮುಂದೂಡಲು ಮನವಿ ಮಾಡಬೇಕಿದೆ ಎಂದರು.
 

Follow Us:
Download App:
  • android
  • ios