ರಾಜ್ಯದಲ್ಲಿ ರಾಸಲೀಲೆ ಪ್ರಕರಣ ಭಾರೀ ಸದ್ದಾಗಿದ್ದು ಇದಾದ ಬಳಿಕ ರಾಜ್ಯದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದರು. ಇದೀಗ  ಮತ್ತೋರ್ವ ಸಚಿವ ಗೋಪಾಲಯ್ಯ  ಹೇಳಿಕೆಯೊಂದನ್ನು ನೀಡಿದ್ದಾರೆ. 

 ವಿಧಾನಸಭೆ (ಮಾ.23):  ತಮ್ಮ ಆರು ಜನ ಸಹೋದ್ಯೋಗಿ ಸಚಿವರಂತೆ ತಾವೂ ಕೂಡ ನ್ಯಾಯಾಲಯಕ್ಕೆ ಹೋಗಿ ತಮ್ಮ ವಿರುದ್ಧದ ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತರಬೇಕೆಂದುಕೊಂಡಿದ್ದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದರು.

ಸಿ.ಡಿ. ಪ್ರಕರಣ ಸಂಬಂಧ ನಿಯಮ 69ರಡಿ ಪ್ರಸ್ತಾಪಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಆರು ಜನ ಸಚಿವರಿಗೆ ಅಳುಕಿದೆ. ಹೀಗಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೆ, ಅವರೊಂದಿಗೆ ಬಾಂಬೆಗೆ ಹೋಗಿದ್ದ ಸಚಿವರಾದ ಗೋಪಾಲಯ್ಯ, ಎಂಟಿಬಿ ನಾಗರಾಜು ಇತರರು ಏಕೆ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರಲಿಲ್ಲ ಎಂದು ಸದನದಲ್ಲಿ ಪ್ರಶ್ನಿಸಿದರು.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ .

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಗೋಪಾಲಯ್ಯ, ಆರು ಜನ ನ್ಯಾಯಾಲಯಕ್ಕೆ ಹೋದ ಮರು ದಿನವೇ ನಾನೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬೇಕು ಎಂದು ಕೊಂಡಿದ್ದೆ. ಆದರೆ, ಕಾರ್ಯದೊತ್ತಡದಿಂದ ಸುಮ್ಮನಾದೆ. ನಾವೆಲ್ಲಾ ಸಹೋದ್ಯೋಗಿಗಳು ಒಟ್ಟಿಗೇ ಇದ್ದೇವೆ. ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ವೇಳೆ ಮಾಧ್ಯಮಗಳಲ್ಲಿ ನಮ್ಮನ್ನೂ ಸೇರಿಸಿ ಪ್ರಚಾರ ಮಾಡುತ್ತಾರೆ ಎಂಬ ಭಯದಿಂದ ಆರು ಜನ ಕೋರ್ಟ್‌ಗೆ ಹೋಗಿರಬಹುದು. ಆದರೆ ಅಂತಹದ್ದೇನೂ ನಡೆದಿಲ್ಲ ಎಂದರು.