Asianet Suvarna News Asianet Suvarna News

ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಸಮಾಜಘಾತುಕ ಶಕ್ತಿ: ಸಚಿವ ಈಶ್ವರ ಖಂಡ್ರೆ:

ರಾಮಜ್ಮಭೂಮಿಗಾಗಿ ಹೋರಾಟ ಮಾಡಿದ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯನ್ನು ಸಮಾಜಘಾತುಕ ಶಕ್ತಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

Minister Eshwara Khandre socialized for Ram Janmabhoomi fighter Srikanta Pujari sat
Author
First Published Jan 3, 2024, 3:46 PM IST | Last Updated Jan 3, 2024, 3:50 PM IST

ಬೀದರ್ (ಜ.03): ಹುಬ್ಬಳ್ಳಿಯಲ್ಲಿ ಕಳೆದ 30 ವರ್ಷಗಳ ಹಿಂದೆ ರಾಮಜ್ಮಭೂಮಿ ಕುರಿತ ಹೋರಾಟ ಮಾಡಿದ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯನ್ನು ಅವರೊಬ್ಬ ಸಮಾಜಘಾತುಕ ಶಕ್ತಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ಮಾಡಿದ್ದಾರೆ. 

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಶ್ರೀಕಾಂತ ಪೂಜಾರಿ ಬಂಧನ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಕೆಲಸ ಮಾಡ್ತಾ ಇದ್ದಾರೆ. ಸಮಾಜಘಾತುಕ ಶಕ್ತಿಗಳು ಯಾರ-ಯಾರಿದ್ದಾರೆ ಅವರ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಅವುಗಳಿಗೆಲ್ಲಾ ಪ್ರತಿಕ್ರಿಯೆ ನೀಡೊಕೆ ಆಗೊಲ್ಲ. ಇಂತಹ ವಿಷಯ ಬಿಟ್ರೆ, ಬೇರೆ ವಿಷಯ ಇಲ್ವಾ ಬಿಜೆಪಿಯವರಿಗೆ. ಯಾವುದೇ ವಿಷಯ ಇಲ್ಲದೇ ಇದ್ರೆ, ಇಂತಹ ವಿಷಯಗಳನ್ನ ಬಿಂಬಿಸೋದು ರಾಜ್ಯಕ್ಕೆ ಬೇಕಾ? ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.

ತಾಕತ್ತಿದ್ದರೆ ಎಲ್ಲಾ ರಾಮಭಕ್ತರನ್ನೂ ಬಂಧಿಸಿ: ಸಿದ್ದು ಸರ್ಕಾರಕ್ಕೆ ಬೊಮ್ಮಾಯಿ, ಶ್ರೀರಾಮುಲು ಸವಾಲ್‌!

ಅಯೋಧ್ಯೆ ವಿಚಾರದಲ್ಲಿ ಬಿಜೆಪಿ ಜಾತಿ ಭೀಜ ಬಿತ್ತುವಂತೆ ಕೆಲಸವನ್ನ ಮಾಡ್ತಾ ಇದೆ. ರಾಮ, ಲಕ್ಷ್ಮಣ, ಸೀತಾ ಇವರುಗಳು ಮಹಾ ಪುರುಷರು. ಇವರಿಗೆ ಎಲ್ಲಾ ಧರ್ಮಿಯರು ಪೂಜೆ ಮಾಡ್ತಾನೆ, ಆರಾಧನೆ ಮಾಡ್ತಾರೆ. ರಾಜಕೀಯಕ್ಕಾಗಿ ಒಂದು ಪಕ್ಷದ ಮೇಲೆ, ಜಾತಿ ಮೇಲೆ ಗೂಬೆ ಕುಡಿಸುವ ಕೆಲಸವನ್ನ ಬಿಜೆಪಿ ಮಾಡ್ತಾ ಇದೆ. ಇದೂ ದೇಶದ ಸಾಮರಸ್ಯಕ್ಕೆ ಮಾರಕವಾಗಿದೆ. ಇನ್ನು ನಮಗೆ ಸಿದ್ದರಾಮಯ್ಯನೇ ಶ್ರೀರಾಮ ಎಂಬ  ಹೆಚ್‌.ಆಂಜನೇಯ ಹೇಳಿಕೆ ವಿಚಾರವನ್ನು ಯಾವ ಕಂಟೆಸ್ಟ್‌ನಲ್ಲಿ ಹೇಳಿದ್ದಾರೊ ಅದನ್ನ ಹರಿಪ್ರಸಾದ್ ಅವರನ್ನೆ ಕೇಳಬೇಕು. ನಮ್ಮ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡ್ತಾ ಇದೆ. ಎಲ್ಲ ಸಮುದಾಯಗಳನ್ನ ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾ ಇದ್ದೇವೆ. ದ್ವೇಷ ಹಿಂಸೆಯನ್ನ ತಡೆಯುವ ಕೆಲಸ ಮಾಡ್ತಾ ಇದ್ದೇವೆ ಎಂದರು.

ರಾಮಜನ್ಮಭೂಮಿಗೆ ಹೋರಾಡಿದ ಹಿಂದೂಗಳನ್ನು ಬಂಧಿಸಿದ ಸರ್ಕಾರ, ಹುಬ್ಬಳ್ಳಿ ಗಲಭೆಕೋರರ ರಕ್ಷಣೆಗೆ ನಿಂತಿದ್ದೇಕೆ?

ಅರಣ್ಯ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರವಾಗಿ ಮಾತನಾಡುತ್ತಾ, ರಾಜ್ಯದೆಲ್ಲೆಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆತಾ ಇದೆ. ಒಟ್ಟು 100 ಕೋಟಿ ರೂ. ಬೆಲೆ ಬಾಳುವ ಅಸ್ತಿಯನ್ನ ಒತ್ತುವರಿ ತೆರವು ಮಾಡಿದ್ದಾರೆ. ಅದನ್ನು ಕಾರ್ಯಾಚರಣೆ ಮಾಡಿ, ತೆರವು ಮಾಡಿದ್ದಾರೆ. ಸರ್ಕಾರದಿಂದ ಅಂಥವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

Latest Videos
Follow Us:
Download App:
  • android
  • ios