ಆನೆ ಸಾಯಿಸಲು ಅನುಮತಿ ಕೋರಿದ ಶಾಸಕ: ಬೇಸರ ವ್ಯಕ್ತಪಡಿಸಿದ ಸಚಿವ ಈಶ್ವರ್‌ ಖಂಡ್ರೆ

ಆನೆಗಳ ಹಾವಳಿ ತಡೆಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಜನಪ್ರತಿನಿಧಿಯಾಗಿ ತಾವೇ ಆನೆಗಳನ್ನು ಕೊಲ್ಲಲು ಅನುಮತಿ ಕೇಳುತ್ತಿದ್ದೀರಿ. ಇದು ನಿಜಕ್ಕೂ ದುರದೃಷ್ಟಕರ. ಆನೆ ಹಾವಳಿ ತಡೆಗಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅಂತಾರಾಜ್ಯ ಪರಿಹಾರಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದೆ ಎಂದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ

Minister Eshwar Khandre React to BJP MLA Harish Poonja permission to Kill Elephant grg

ಸುವರ್ಣ ವಿಧಾನಸಭೆ(ಡಿ.13):  ಆನೆ ದಾಳಿ ತಡೆಯಲು ಆನೆಗಳನ್ನು ಸಾಯಿಸಲು ಜನರಿಗೆ ಅನು ಮತಿಸಬೇಕು ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಕೋರಿದಕ್ಕೆ ವ್ಯಕ್ತಪಡಿಸಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಜನಪ್ರತಿನಿಧಿಯಾದವರು ವನ್ಯಜೀವಿಗಳನ್ನು ಸಾಯಿಸುತ್ತೇವೆ ಎನ್ನುತ್ತಿರುವುದು ದುರದೃಷ್ಟಕರ ಎಂದು ಹೇಳಿದರು. 

ಗುರುವಾರ ಪ್ರಶೋತ್ತರ ಕಲಾಪದಲ್ಲಿ ಹರೀಶ್ ಪೂಂಜಾ ಅವರು, ಬೆಳ್ತಂಗಡಿ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಯಲು ಗ್ರಾಮೀಣ ಭಾಗದ ಜನ ಬಂದೂಕು ಬಳಸಲು ಹಾಗೂ ಆನೆಗಳನ್ನು ಕೊಲ್ಲಲು ಅನುಮತಿಸಬೇಕು ಎಂದರು. 

ಕೊಡಗು: ಆಂಧ್ರದ ಮಾವುತರಿಗೆ ತರಬೇತಿ ನೀಡಿದ ದುಬಾರೆ ಸಾಕಾನೆಗಳು!

ಅದಕ್ಕುತ್ತರಿಸಿದ ಈಶ್ವ‌ರ್ ಖಂಡ್ರೆ, ಆನೆಗಳ ಹಾವಳಿ ತಡೆಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಜನಪ್ರತಿನಿಧಿಯಾಗಿ ತಾವೇ ಆನೆಗಳನ್ನು ಕೊಲ್ಲಲು ಅನುಮತಿ ಕೇಳುತ್ತಿದ್ದೀರಿ. ಇದು ನಿಜಕ್ಕೂ ದುರದೃಷ್ಟಕರ. ಆನೆ ಹಾವಳಿ ತಡೆಗಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅಂತಾರಾಜ್ಯ ಪರಿಹಾರಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದೆ. ಅಲ್ಲದೆ, ಆನೆಗಳ ಸೆರೆ ಸೇರಿ ಮತ್ತಿತರ ಪರಿಹಾರ ಕಾರ್ಯಕ್ಕಾಗಿ ರಾಜ್ಯದಲ್ಲಿ 8 ಆನೆ ಕಾರ್ಯಪಡೆ ರಚಿಸಲಾಗಿದೆ. ಆನೆ ಹಾವಳಿ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ದುಬಾರಿ ಬಟ್ಟೆ ಧರಿಸಿದ್ರೂ ಆನೆ ಲದ್ದಿ ಹಾಕ್ತಿದ್ರೆ ಕ್ಯಾಚ್‌ ಹಿಡಿದೇ ಬಿಡ್ತಾಳೆ ಈ ಸುಂದ್ರಿ... ವಿಡಿಯೋ ವೈರಲ್

ಆನೆ ದಾಳಿ ತಡೆಗೆ 2 ಸಾವಿರ ಹೆಕ್ಟೇ‌ರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ 

ರಾಜ್ಯದಲ್ಲಿನ ಆನೆ ಹಾವಳಿ ತಡೆಗೆ ಕೊಡಗು ಮತ್ತು ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್‌ ರಿಲೀಸ್ ಸೆಂಟರ್) ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು. 

ಜೆಡಿಎಸ್‌ನ ಎಚ್. ಕೆ.ಸುರೇಶ್ ಕೇಳಿದ ಪ್ರಶ್ನೆಗೆ ಉತ್ತರಿ ಸಿದ ಈಶ್ವ‌ರ್ ಖಂಡ್ರೆ, ರಾಜ್ಯದಲ್ಲಿ ಆನೆ ದಾಳಿ ತಡೆಗೆ ಸೋಲಾರ್ ಬೇಲಿ ಅಳವಡಿಕೆ, ಆನೆ ಕಂದಕ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ ಇದೀಗ ಕೊಡಗು ಮತ್ತು ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲಾಗುವುದು. ಅದರಿಂದ ಎಲ್ಲೇ ಆನೆಗಳನ್ನು ಸೆರೆ ಹಿಡಿದರೂ ಅಲ್ಲಿಗೆ ತಂದು ಬಿಡಲಾಗುವುದು. ಅದರಿಂದ ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದು ಕಡಿಮೆಯಾಗಲಿದೆ ಎಂದರು.

Latest Videos
Follow Us:
Download App:
  • android
  • ios