ಮೈಸೂರು(ಮೇ.08): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ಇನ್ನಿತರ ಸೌಲಭ್ಯಗಳಿಗೆ ಇಸ್ಫೋಸಿಸ್‌ ಫೌಂಡೇಷನ್‌ ವತಿಯಿಂದ .20 ಲಕ್ಷ ಆರ್ಥಿಕ ನೆರವು ನೀಡಲು ಫೌಂಡೇಷನ್‌ ಅಧ್ಯಕ್ಷೆ ಡಾ. ಸುಧಾಮೂರ್ತಿ ಭರವಸೆ ನೀಡಿದ್ದಾರೆ.

ಕಳೆದ ವಾರವಷ್ಟೇ ಮೈಸೂರು ಮೃಗಾಲಯಕ್ಕೆ ಆರ್ಥಿಕ ನೆರವು ನೀಡುವಂತೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಸುಧಾಮೂರ್ತಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸುಧಾಮೂರ್ತಿ ಅವರು ಈಗ .20 ಲಕ್ಷ ನೀಡುವುದಾಗಿ ಸೋಮಶೇಖರ್‌ ಅವರಿಗೆ ಇ-ಮೇಲ್‌ ಮೂಲಕ ತಿಳಿಸಿದ್ದಾರೆ.

ಮೊದಲ ಬಾರಿ ಜನರ ನೆರವು ಕೇಳಿದ ಮೈಸೂರು ಮೃಗಾಲಯ..!

ಲಾಕ್‌ಡೌನ್‌ನಿಂದ ಎಲ್ಲೆಡೆ ನಷ್ಟ ಸಂಭವಿಸುತ್ತಿದ್ದು, ಮೈಸೂರಿನ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯವೂ ಇದಕ್ಕೆ ಹೊರತಾಗಿಲ್ಲ. ಪ್ರವಾಸಿಗರ ಟಿಕೆಟ್‌ ಹಣ, ಪ್ರಾಣಿ ದತ್ತು ಯೋಜನೆಯಿಂದಲೇ ನಡೆಯುತ್ತಿದ್ದ ಮೃಗಾಲಯದಲ್ಲಿ ನಿರ್ವಹಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಮೃಗಾಲಯ ತಿಳಿಸಿತ್ತು.

ಮೃಗಾಲಯದಲ್ಲಿ ವಿದ್ಯುತ್, ನೀರು ಆಹಾರ ಸೇರಿ ಎಲ್ಲದಕ್ಕೂ ಸಮಸ್ಯೆಯಾಗಿದ್ದು, ನಿರ್ವಹಣೆಗೆ ತಿಂಗಳಿಗೆ ಸುಮಾರು 2 ಕೋಟಿ ರೂಪಾಯಿ ಖರ್ಚಾಗುತ್ತದೆ. ಆದರೆ ಲಾಕ್‌ಡೌನ್‌ನಿಂದ ಮೃಗಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.