ಬೆಂಗಳೂರು(ಆ.27): ರಾಜ್ಯದಲ್ಲಿ ಅನ್‌ಲಾಕ್‌-4 ವೇಳೆ ಯಾವ್ಯಾವ ನಿರ್ಬಂಧಗಳನ್ನು ಸಡಿಲಗೊಳಿಸಬೇಕು ಎಂಬ ಬಗ್ಗೆ ಈ ಬಾರಿಯೂ ಕೇಂದ್ರದ ಮಾರ್ಗಸೂಚಿಯನ್ನೇ ಅನುಸರಿಸಲಾಗುವುದು. ನನ್ನ ಪ್ರಕಾರ ನಮ್ಮ ಮೆಟ್ರೋ ಸಂಚಾರ ಶುರುವಾಗಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್‌ ತಿಂಗಳಿನ ಅನ್‌ಲಾಕ್‌ ಮಾರ್ಗಸೂಚಿಯಲ್ಲಿ ಏನೆಲ್ಲಾ ನಿಷೇಧ ಸಡಿಲಗೊಳ್ಳಬಹುದು ಎಂದು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಈವರೆಗೂ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ಪಾಲಿಸಿಕೊಂಡು ಬಂದಿವೆ. ಈ ಬಾರಿಯೂ ಕೇಂದ್ರ ಸರ್ಕಾರವೇ ಮಾರ್ಗಸೂಚಿ ಪ್ರಕಟಿಸಲಿದೆ ಎಂದರು.

ಅನ್‌ಲಾಕ್‌ 4ರಲ್ಲಿ ಮೆಟ್ರೋ ರೈಲಿಗೆ ಅನುಮತಿ ಸಾಧ್ಯತೆ!

ಆಗಸ್ಟ್‌ ಅಂತ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರವು ಯಾವ ಮಾರ್ಗಸೂಚಿ ಪ್ರಕಟಿಸುತ್ತದೆಯೋ ಅದೇ ನಿಯಮಗಳನ್ನು ಪಾಲಿಸುತ್ತೇವೆ. ಈ ಬಾರಿ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ಸಿಗಬಹುದು ಎನಿಸುತ್ತಿದೆ ಎಂದು ಹೇಳಿದರು.

ಸೆಪ್ಟಂಬರ್‌ ಅಂತ್ಯದೊಳಗೆ ರಾಜ್ಯದಲ್ಲಿ ಕೊರೋನಾ ಸೋಂಕಿರ ಸಂಖ್ಯೆ 6 ಲಕ್ಷಕ್ಕೆ?

"