ಅನ್‌ಲಾಕ್ 4ರಲ್ಲಿ ಮೆಟ್ರೋ ರೈಲಿಗೆ ಅನುಮತಿ ಸಾಧ್ಯತೆ!
ಅನ್‌ಲಾಕ್ 4: ಮೆಟ್ರೋ ರೈಲಿಗೆ ಅನುಮತಿ ಸಾಧ್ಯತೆ| ಮೆಟ್ರೋ ಆರಂಭದ ಅಂತಿಮ ನಿರ್ಧಾರ ರಾಜ್ಯಗಳ ಹೆಗಲಿಗೆ| ಶಾಲೆ-ಕಾಲೇಜು, ಥೇಟರ್ ಮೇಲೆ ನಿರ್ಬಂಧ ಮುಂದುವರಿಕೆ?
ನವದೆಹಲಿ(ಆ.25): ಸೆ.1ರಿಂದ ಆರಂಭವಾಗಲಿರುವ ‘ಅನ್‌ಲಾಕ್-4’ ಸಂಬಂಧ ಶೀಘ್ರ ಮಾರ್ಗಸೂಚಿಗಳು ಬಿಡುಗಡೆ ಆಗಲಿದ್ದು, ಕಳೆದ ಮಾಚ್‌ರ್‍ನಿಂದ ನಿಂತು ಹೋಗಿರುವ ಮೆಟ್ರೋ ರೈಲು ಸೇವೆಗಳಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ. ಆದರೆ ಶಾಲೆ-ಕಾಲೇಜುಗಳ ಆರಂಭ ಹಾಗೂ ಸಿನಿಮಾ ಮಂದಿರಗಳ ಆರಂಭದ ಮೇಲೆ ಸೆಪ್ಟೆಂಬರ್‌ನಲ್ಲೂ ನಿರ್ಬಂಧಗಳು ಮುಂದುವರಿಯಬಹುದು ಎಂದು ಮೂಲಗಳು ಹೇಳಿವೆ.
ಗುಡ್ ನ್ಯೂಸ್ : ರಾಜ್ಯದಲ್ಲಿ ಕೊರೋನಾ ಹರಡುವ ವೇಗ ಇಳಿಕೆ
ಮೆಟ್ರೋ ಆರಂಭಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದರೂ ಆಯಾ ರಾಜ್ಯಗಳ ವಿವೇಚನೆಗೆ ಅಂತಿಮ ನಿರ್ಧಾರದ ಹೊಣೆಯನ್ನು ಬಿಡಲಿದೆ. ಏಕೆಂದರೆ ದಿಲ್ಲಿಯಂಥ ಮಹಾನಗರಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಆದರೆ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕೊರೋನಾ ಹಾವಳಿ ಇನ್ನೂ ತೀವ್ರವಾಗಿದೆ. ಹೀಗಾಗಿ ಮೆಟ್ರೋ ಆರಂಭದ ಕುರಿತು ಆಯಾ ರಾಜ್ಯಗಳು ನಿರ್ಣಯ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ದಿಲ್ಲಿ ಸೇರಿದಂತೆ ಕೆಲವು ಆಯ್ದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸೆಪ್ಟೆಂಬರ್ 1ರಿಂದ ಮೆಟ್ರೋ ರೈಲು ಶುರುವಾಗುವ ನಿರೀಕ್ಷೆಯಿದೆ.
ಕೊರೋನಾ ಗೆದ್ದು ಬಂದ ತಂಗಿಗೆ ಅಣ್ಣನ ಪುಷ್ಪಾರ್ಪಣೆ ಸ್ವಾಗತ!
ದೂರ ಪ್ರಯಾಣದ ರೈಲುಗಳು ಹಾಗೂ ವಿಮಾನಗಳಿಗೇ ಅನುಮತಿ ನೀಡಲಾಗಿದೆ. ಹೀಗಾಗಿ ಕಮ್ಮಿ ಪ್ರಯಾಣ ಅವಧಿಯ ಮೆಟ್ರೋ ಮೇಲೆ ಇನ್ನು ನಿರ್ಬಂಧ ಸೂಕ್ತವಲ್ಲ ಎಂಬ ಅಭಿಪ್ರಾಯ ಕೇಂದ್ರ ಸರ್ಕಾರದ್ದು ಎಂದು ತಿಳಿದುಬಂದಿದೆ. ಅನ್‌ಲಾಕ್-3 ವೇಳೆ ಜಿಮ್ ಹಾಗೂ ವ್ಯಾಯಾಮ ಶಾಲೆಗೆ ಅನುಮತಿ ನೀಡಲಾಗಿತ್ತು. ರಾತ್ರಿ ಕಫ್ರ್ಯೂ ತೆಗೆದು ಹಾಕಲಾಗಿತ್ತು.