ಕೊರೋನಾ 2ನೇ ಅಲೆ ಇಷ್ಟಕ್ಕೆ ನಿಲ್ಲೋದಿಲ್ಲ: ಶಾಕ್ ಕೊಟ್ಟ ಸುಧಾಕರ್

ಮಹಾಮಾರಿ ಕೊರೋನಾ ಮೊದಲಿಗಿಂತಲೂ ಎರಡನೇ ಅಲೆ ಭಯಾನವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನ ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

Minister Dr K Sudhakar Talks about Coronavirus second wave rbj

ಬೆಂಗಳೂರು, (ಏ.24): ಕೊರೋನಾ 2ನೇ ಅಲೆ ಇಷ್ಟಕ್ಕೆ ನಿಲ್ಲೋದಿಲ್ಲ, ಇದು ಮೂರು ನಾಲ್ಕು ಐದಾಗಿ ಮಾರ್ಪಾಡಾಗುತ್ತಾ ಹೋಗುತ್ತದೆ ಎಂದು ಆರೋಗ್ಯ ಸಚಿವ ಸುಧಾಕರ್​ ತಿಳಿಸಿದ್ದಾರೆ.

 ಇಂದು (ಶನಿವಾರ) ನಗರದಲ್ಲಿ ಮಾತನಾಡಿದ ಸುಧಾಕರ್​,  ಈ ಬಾರಿಯ ಅಲೆಯಲ್ಲಿ ಕೊರೋನಾ ವೇಗವಾಗಿ ಹರಡುತ್ತಿರೋದಕ್ಕೆ ಮುಖ್ಯ ಕಾರಣ ಈ ರೂಪಾಂತರಿ ವೈರಾಣುವಿನ ಸ್ವಭಾವ ಎಂದರು.

'ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ'

 ಅದು ಯುಕೆ ವೈರೆಸ್​ನ ರೀತಿಯಲ್ಲೂ ಇಲ್ಲ, ಬ್ರೆಜಿಲ್​ ಅಥವಾ ಫ್ರಾನ್ಸ್​ನ ರೀತಿಯಲ್ಲೂ ಇಲ್ಲ, ಇದು ಭಿನ್ನವಾಗಿದೆ. ಹಾಗಾಗಿಯೇ ಹೊರದೇಶದವರು ಇದನ್ನ ಇಂಡಿಯನ್​ ಸ್ಟ್ರೇನ್​ ಎಂದೇ ಕರೆಯುತ್ತಿದ್ದಾರೆ. ಇದೊಂದು ಹೊಸಾ ರೀತಿಯ ವೈರಾಣುವಾಗಿದೆ. ಹಿಂದೆ ನಮ್ಮಲ್ಲಿ ಸ್ಪಾನಿಷ್​ ವೈರೆಸ್​ ಕಾಣಿಸಿಕೊಂಡಾಗ ಇದಕ್ಕಿಂತ ಹೆಚ್ಚು ಸಾವು ನೋವು ಕಾಣಿಸಿಕೊಂಡಿತ್ತು, ಆದರೆ ಈ ಬಾರಿಯ ಸಾವಿನ ಪ್ರಮಾಣ ಅಷ್ಟಿಲ್ಲ. ಸೋಂಕಿತರು ಹೆಚ್ಚಾಗಿ ಪತ್ತೆಯಾಗುತ್ತಿರುವ ಕಾರಣ ಜನರಲ್ಲಿ ಆತಂಕ ಮೂಡುತ್ತಿದೆ ಅಷ್ಟೇ ಎಂದು ಹೇಳಿದರು.

ಬಹಳ ವಿಶೇಷವಾಗಿ ನಾವು ಜನರಿಗೆ ಮನವಿ ಮಾಡುವುದೇನೆಂದ್ರೆ, ಸರ್ಕಾರವೂ ಈ ಬಗ್ಗೆ ಬಿಗಿ ಸೂಚನೆಗಳನ್ನ ನೀಡಿದ್ದೇವೆ. ಜನರು ಅನಗತ್ಯವಾಗಿ ಓಡಾಡುವುದನ್ನ ತಪ್ಪಿಸಬೇಕು, ಹೆಚ್ಚಾಗಿ ಗುಂಪು ಸೇರುವುದನ್ನ ಬಿಡಬೇಕು. ಮಾಸ್ಕ್​ ಧರಿಸಿ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಬೇಕು. ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಶುಚಿತ್ವ ಕಾಪಾಡಿಕೊಳ್ಳಬೇಕು, ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನ ಸೇವನೆ ಮಾಡಬೇಕು. ನಮ್ಮ ಅದೃಷ್ಟ ನಮಗೆ ಲಸಿಕೆ ಲಭ್ಯವಿದೆ ಇದನ್ನ ತೆಗೆದುಕೊಳ್ಳುವವರಲ್ಲಿ ನಾವೇ ಮೊದಲಿಗರಾಗಬೇಕು ಎಂದು ಸಲಹೆ ನೀಡಿದ್ದಾರೆ.

ಈ ವೈರೆಸ್​ನ ಬಗ್ಗೆ ಏಮ್ಸ್​ ಆಸ್ಪತ್ರೆಯ ಡಾ. ಗುಲೇರಿಯಾ ಒಂದು ಮಾತನ್ನ ಹೇಳಿದ್ದಾರೆ. ಈ ರೂಪಾಂತರಿ ನಮ್ಮೊಂದಿಗೆ ಚೆಸ್​ ಆಟವಾಡುತ್ತಿದೆ, ನಾವು ಒಂದು ಪಾನ್​ ಚಲಾಯಿಸಿದರೆ ಅದು ಇನ್ನೊಂದು ಪಾನ್​ ಚಲಾಯಿಸುತ್ತಿದೆ. ಸೂಕ್ಷವಾಗಿ ಇದರ ಎಲ್ಲಾ ಗುಣವನ್ನ ಅರಿಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಎಂದು ಸುಧಾಕರ್​ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios