Asianet Suvarna News Asianet Suvarna News

ಸಾಂತ್ವನ ಹೇಳಲು ಬಂದಿದ್ದ ಸಚಿವಗೆ ಹಿಂದೂ-ಮುಸ್ಲಿಂ ಮಹಿಳೆಯರಿಂದ ಹಿಗ್ಗಾಮುಗ್ಗಾ ತರಾಟೆ!

ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವ ಆರೋಪ ಹಿನ್ನೆಲೆ ಠಾಣೆ ಮುಂದೆ ಮಹಿಳೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಹಿಳೆಯರಿಗೆ ಸಾಂತ್ವನ ಹೇಳಲು ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನ ತರಾಟೆಗೆ ತೆಗೆದುಕೊಂಡ ಮಹಿಳೆಯರು

minister chaluvarayaswamy reacts about nagamangala stone pelting during ganeshotsav at mandya rav
Author
First Published Sep 12, 2024, 1:11 PM IST | Last Updated Sep 12, 2024, 3:36 PM IST

ಮಂಡ್ಯ (ಸೆ.12): ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಡಿದ ಘಟನೆ ನಡೆದಿದ್ದು ಘಟನೆಯಲ್ಲಿ ಅಮಾಯಕರನ್ನ ಬಂಧಿಸಿದ ಆರೋಪ ಕೇಳಿ ಬಂದಿದೆ. ಮಹಿಳೆಯರು ಪ್ರತಿಭಟನೆ ಮಾಡುವ ವೇಳೆ ಸಾಂತ್ವನ ಹೇಳಲು ಬಂದ ಕೃಷಿ  ಚೆಲುವರಾಯಸ್ವಾಮಿ ಅವರನ್ನೇ ಮಹಿಳೆಯರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮಹಿಳೆಯರ ಪ್ರಶ್ನೆಗೆ ಉತ್ತರಿಸಲಾಗದೆ ಸ್ಥಳದಿಂದ ಕಾಲ್ಕಿತ್ತ ಸಚಿವರು,

ನಿನ್ನೆ ಮಧ್ಯರಾತ್ರಿ ಸುಮಾರಿಗೆ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳು. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಬೈಕ್‌ಗಳು, ಬಟ್ಟೆ ಅಂಗಡಿ ಸೇರಿದಂತೆ 13ಕ್ಕೂ ಹೆಚ್ಚು ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿಹಚ್ಚಿದ್ದಾರೆ.  ಏಕಾಏಕಿ ನಡೆದ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನೆ ಸಂಬಂಧ ಸಿಸಿಟಿವಿ ಆಧಾರಿಸಿ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಹಲ್ಲೆಗೊಳಗಾದ ಹಿಂದೂಗಳನ್ನು, ಮನೆಯಲ್ಲಿದ್ದವರನ್ನು  ಪೊಲೀಸರು ಬಂಧಿಸಿ ಕರೆದೊಯ್ದಿರುವ ಆರೋಪ ಹಿನ್ನೆಲೆ ಸ್ಥಳೀಯ ಠಾಣೆ ಮುಂದೆ ಹಿಂದೂ-ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಸಾಂತ್ವನ ಹೇಳಲು ಬಂದ ಸಚಿವರಿಗೇ ತರಾಟೆಗೆ ತೆಗೆದುಕೊಂಡ ಮಹಿಳೆಯರು.

'ಇಂಥ ಘಟನೆಯಲ್ಲಿ ಯಾರೂ ರಾಜಕೀಯ ಮಾಡಬಾರದು'; ನಾಗಮಂಗಲ ಘಟನೆ ಖಂಡಿಸಿದ ಸಚಿವ ಸಂತೋಷ್ ಲಾಡ್

ಘಟನೆ ನಡೆದಾಗ ನಾನು ಹೊರಗೆ ಹೋಗಿದ್ದೆ: ಸಚಿವ

ನಿನ್ನೆ ಘಟನೆ ನಡೆದಾಗ ನಾನು ಹೊರಗೆ ಹೋಗಿದ್ದೆ. ಊರಿಂದ ಫೋನ್ ಬಂತು ಈ ರೀತಿ ಘಟನೆಯಾಗಿದೆ ಅಂತಾ. ಕೂಡಲೇ ಕೂಡಲೇ ನಾನು ಎಡಿಜಿಪಿ ಎಸ್ಪಿಗೆ ಕರೆ ಮಾಡಿದೆ ಮಾಹಿತಿ ಪಡೆದುಕೊಂಡೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ಮುಸ್ಲಿಂ-ಹಿಂದೂ ಎರಡೂ ಸಮುದಾಯದವರ ನಡುವೆ ಘರ್ಷಣೆಯಾಗಿದೆ. ಪೊಲೀಸರು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ದುಡುಕೋದು ಬೇಡ.. ದೇವರ ಕೆಲಸ ಈ ರೀತಿಯಾಗಿ ಕಮ್ಯೂನಲ್ ಗೆ ತಿರುಗುವುದು ಬೇಡ ತಡ ರಾತ್ರಿಯೇ ಗಣೇಶ ವಿಸರ್ಜನೆ ಮಾಡಿದ್ದಾರೆ ಶಾಂತಿಗೊಳಿಸುವ ಪ್ರಯತ್ನವೂ ಆಗಿದೆ. ಸ್ಥಳದಲ್ಲಿ ಒಂದೆರಡು ಅಂಗಡಿಗೆ ತೊಂದರೆಯಾಗಿದೆ. ಘಟನೆ ಬಗ್ಗೆ ಗೃಹ ಮಂತ್ರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಘಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇರಲಿ ಯಾರೇ ಇರಲಿ ಕಾನೂನು ಪ್ರಕಾರ ಕ್ರಮ ಆಗುತ್ತೆ.  ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು:

ನಾನು ಮಾತನಾಡಿದ್ರೆ ತಪ್ಪಾಗುತ್ತೆ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ನಾನು ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಇದು ತಿಳಿಯಾಗಲು ಸಹಕಾರ ಕೊಡ್ತಾರೆ ಅಂದುಕೊಳ್ತೇನೆ. ಕೊಡದೆ ಇದ್ರೆ ಅವರಿಗೆ ಒಳ್ಳೆಯದಾಗಲಿ. ಅವರು ರಾಜಕೀಯವಾಗೇ ಮಾತನಾಡ್ತಾರೆ.  ಅಂದ್ರೆ ನಾನು ಮಾತನಾಡುವುದಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ ನಾನು 15 ದಿನದಿಂದ‌ ರಾಜ್ಯದಲ್ಲಿ ಇರಲಿಲ್ಲ. ನಾನು ಬೇರೆಕಡೆ ಹೋಗಿದ್ದೆ .ನಾಗಮಂಗಲ ಹಿಂದೆಯೂ ಶಾಂತವಾಗಿದೆ ಮುಂದೆಯೂ ಅದೇ ರೀತಿ ಇರುತ್ತೆ. ಇಂತಹ ಸಂಧರ್ಭದಲ್ಲಿ ಸಮುದಾಯವನ್ನ ವಿಂಗಡಿಸುವುದು ಸೂಕ್ತವಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗತ್ತೆ. ಸ್ಥಳದಲ್ಲಿ ಐಜಿ ಇದ್ದಾರೆ ಜಿಲ್ಲಾಧಿಕಾರಿ ಎಸ್ಪಿ ಎಲ್ಲರೂ ಇದ್ದಾರೆ ಎಂದರು.

ನಾಗಮಂಗಲ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಪ್ರಕರಣ; ಸರ್ಕಾರ, ಪೊಲೀಸರ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಗರಂ

ಗಣಪತಿ ವಿಸರ್ಜನೆ ವೇಳೆ ಸಂಜೆ 5 ಗಂಟೆ ಹಾಗೂ ನಿಗದಿತ ಸಮಯದ ಒಳಗೆ ವಿಸರ್ಜನೆ ಮಾಡಬೇಕಿದೆ ಅಂತ ಹೇಳಿದ್ದೆವು.  ರಾತ್ರಿ ಕ್ಲೋಸ್ ಮಾಡಿ ಅಂತಿವಿ ದೇವರ ಮೇಲೆ ಅಭಿಮಾನಕ್ಕೆ ಲೇಟ್ ಆಗತ್ತೆ. ಇಂತಕ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರು ಎಚ್ಚರ ವಹಿಸಬೇಕಿತ್ತು.  ನಮ್ಮ ಸರ್ಕಾರದ ಮೊದಲ ಆದ್ಯತೆ ಸಾರ್ವಜನಿಕರ ರಕ್ಷಣೆ ಮಾಡುವುದಾಗಿದೆ. ನಂತರ ವಿರೋಧ ಪಕ್ಷದ ಪ್ರಚೋದನೆ ಅಥವ ಪ್ರಶ್ನೆಗೆ ಉತ್ತರ ಕೊಡ್ತೀವಿ. ಕುಮಾರಸ್ವಾಮಿ ಅಲ್ಲಿಯ ಸಂಸದರು ನಾನು ಅವರ ಜೊತೆಗೆ ಕೆಲಸ ಮಾಡ್ತಾ ಇದ್ದೇನೆ. ಅವರಿದ್ದಾಗ ಏನೇನು ಆಗಿದೆ ಅಂತ ಎಲ್ಲರಿಗೂ ಗೊತ್ತಿದೆ. ನಾನು ರಾಜಕೀಯವಾಗಿ ಏನೂ ಉತ್ತರ ನೀಡಲು ಹೋಗುವುದಿಲ್ಲ ಎಂದರು.

Latest Videos
Follow Us:
Download App:
  • android
  • ios