Asianet Suvarna News Asianet Suvarna News

ಕೇಂದ್ರ ಸರ್ಕಾರವೇನು ಅಮೆರಿಕದಿಂದ ಹಣ ತಂದು ನಮಗೆ ಕೊಡೋದಿಲ್ಲ: ಶೀಘ್ರ ಬರಪರಿಹಾರ ಮಾಡಿ: ಚಲುವರಾಯಸ್ವಾಮಿ ಕಿಡಿ

ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಹೋಗುತ್ತದೆ. ಆದರೆ ಅನುದಾನ ನೀಡುವಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಬರಪರಿಹಾರಕ್ಕೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲಿ ಶೀಘ್ರ ಬಿಡುಗಡೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರವೇನು ಅಮೆರಿಕದಿಂದ ಹಣ ತರುವುದಿಲ್ಲ ಎಂದು ಸಚಿವ ಸಚಿವ ಚಲುವರಾಯಸ್ವಾಮಿ  ತಿಳಿಸಿದರು.

Minister Chaluvarayaswamy outraged against Union government at KR Pete rav
Author
First Published Feb 10, 2024, 4:55 PM IST

ಕೆಆರ್‌ ಪೇಟೆ (ಫೆ.10): ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಹೋಗುತ್ತದೆ. ಆದರೆ ಅನುದಾನ ನೀಡುವಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಬರಪರಿಹಾರಕ್ಕೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲಿ ಶೀಘ್ರ ಬಿಡುಗಡೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರವೇನು ಅಮೆರಿಕದಿಂದ ಹಣ ತರುವುದಿಲ್ಲ ಎಂದು ಸಚಿವ ಸಚಿವ ಚಲುವರಾಯಸ್ವಾಮಿ  ತಿಳಿಸಿದರು.

ಇಂದು ಕೆಆರ್‌ ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಅನುದಾನ ತಾರತಮ್ಯ ವಿರೋಧಿಸಿ ನಡೆದ ಪ್ರತಿಭಟನೆಗೆ ಸಂಸದರಿಗೆ ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದು ಆಹ್ವಾನಿಸಿದ್ರು. ಆದರೆ ಪ್ರತಿಭಟನೆಗೆ ಬೆಂಬಲಿಸಿ ಯಾರೂ ಬರಲಿಲ್ಲ. ಕಾಂಗ್ರೆಸ್ ಮಾತ್ರ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ರಾಷ್ಟ್ರರಾಜಧಾನಿಯಲ್ಲಿ ಧ್ವನಿಯೆತ್ತಿದೆ ಎಂದರು.

'ಹಿಂದೂಗಳ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಲಿ': ಭಾರೀ ವಿವಾದ ಸೃಷ್ಟಿಸಿದ ಶಾಸಕ ಹರೀಶ್ ಪೂಂಜಾ ಪೋಸ್ಟ್!

ಕೇಂದ್ರಕ್ಕೆ ಟ್ಯಾಕ್ಸ್ ಕಟ್ಟುವಲ್ಲಿ ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ತೆರಿಗೆ ಕೊಡುತ್ತಿರುವುದು ಕರ್ನಾಟಕ ಮಾತ್ರ. ಅತಿ ಕಡಿಮೆ ತೆರಿಗೆ ಕೊಡುವ ಉತ್ತರ ಪ್ರದೇಶಕ್ಕೆ ಹೆಚ್ಚು ಅನುದಾನ ಕೊಡುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾತ್ರ ಕಡಿಮೆ ಕೊಡ್ತಾರೆ. ಬರಗಾಲದಲ್ಲಿ 18000 ಕೋಟಿ ಎನ್‌ಡಿಆರ್‌ಎಫ್ ಫಂಡ್ ಕೇಳಿದ್ದೆವು. ಆದರೆ ಆ ಬಗ್ಗೆ ಇನ್ನೂ ಒಂದು ಸಭೆ ಕೂಡ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಯೋಜನೆಗಳನ್ನು ಜಾರಿ ಮಾಡುವುದರಲ್ಲಿ ಕಾಂಗ್ರೆಸ್ ನಂ.1. ಹಿಂದಿನ ಸರ್ಕಾರಗಳು ತಮ್ಮ ಶಾಸಕರಿಗೆ ಬಿಟ್ಟು ಮತ್ಯಾರಿಗೂ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲಾ ಶಾಸಕರಿಗೂ ಸಮಾನ ಅನುದಾನ ಸಿಗುವಂತೆ ಮಾಡಿದ್ದೇವೆ. ಚುನಾವಣೆ ಬಂದಾಗ ಚುನಾವಣೆ ಮಾಡ್ತೀವಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಹೊರತು ಬಿಜೆಪಿ, ಈಶ್ವರಪ್ಪ ಅಲ್ಲ: ಎಂಬಿ ಪಾಟೀಲ್ ಕಿಡಿ

Follow Us:
Download App:
  • android
  • ios