ತಲೆನೋವು ಅದಕ್ಕೆ ಮಡಿಕೇರಿ ಕಡೆ ಹೋಗುತ್ತಿದ್ದೇನೆ. ಮುಡಾ ತಲೆನೋವು ಏನೂ ಅಲ್ಲ, ರಿಲ್ಯಾಕ್ಸ್‌ ಗಾಗಿ ಹೋಗುತ್ತಿದ್ದೇನೆ. ನಮಗೆ ಮುಡಾ ಪ್ರಕರಣ ತಲೆನೋವು ಅನಿಸಿಲ್ಲ. ಎಫ್‌ಐಆರ್ ನಿರೀಕ್ಷಿತ. ನಮಗೆ ಎಫ್‌ಐಆರ್‌ ಆಗುತ್ತೆ ಅಂತ ಗೊತ್ತಿತ್ತು. ನಾವು ಕಾನೂನಾತ್ಮಕವಾಗಿ ಅದನ್ನು ಎದರಿಸುತ್ತೇವೆ. ನಾನು ಅದರ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿಲ್ಲ. ಸಿಎಂ ಜೊತೆ ತಿಂಡಿ ತಿಂದು ಮಾತನಾ ಡಿಸಿಕೊಂಡು ಹೋಗುತ್ತಿದ್ದೇನೆ ಎಂದ ಸಚಿವ ಬೈರತಿ ಸುರೇಶ್

ಮೈಸೂರು(ಸೆ.29): ಮುಡಾದಲ್ಲಿ ನನ್ನ ಅವಧಿಯಲ್ಲಿ ಹಗರಣ ನಡೆದಿಲ್ಲ. ನನ್ನಿಂದ ಸಿಎಂಗೆ ಸಮಸ್ಯೆ ಅನ್ನೋದರಲ್ಲಿ ಅರ್ಥವಿಲ್ಲ ಎಂದು ಸಚಿವ ಬೈರತಿ ಸುರೇಶ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣ ನಡೆದ ಕಾಲಾವಧಿ ಯಾವುದು ನೋಡಿಕೊಳ್ಳಿ. ನನ್ನನ್ನೇಕೆ ಎಳೆಯುತ್ತೀರಾ ಎಂದು ಪ್ರಶ್ನಿಸಿಸಿದರು. 

ತಲೆನೋವು ಅದಕ್ಕೆ ಮಡಿಕೇರಿ ಕಡೆ ಹೋಗುತ್ತಿದ್ದೇನೆ. ಮುಡಾ ತಲೆನೋವು ಏನೂ ಅಲ್ಲ, ರಿಲ್ಯಾಕ್ಸ್‌ ಗಾಗಿ ಹೋಗುತ್ತಿದ್ದೇನೆ. ನಮಗೆ ಮುಡಾ ಪ್ರಕರಣ ತಲೆನೋವು ಅನಿಸಿಲ್ಲ. ಎಫ್‌ಐಆರ್ ನಿರೀಕ್ಷಿತ. ನಮಗೆ ಎಫ್‌ಐಆರ್‌ ಆಗುತ್ತೆ ಅಂತ ಗೊತ್ತಿತ್ತು. ನಾವು ಕಾನೂನಾತ್ಮಕವಾಗಿ ಅದನ್ನು ಎದರಿಸುತ್ತೇವೆ. ನಾನು ಅದರ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿಲ್ಲ. ಸಿಎಂ ಜೊತೆ ತಿಂಡಿ ತಿಂದು ಮಾತನಾ ಡಿಸಿಕೊಂಡು ಹೋಗುತ್ತಿದ್ದೇನೆ ಎಂದು ಅವರು ಹೇಳಿದರು.

ಸಿದ್ದು ಕೇಸಿಗೂ ನಿರ್ಮಲಾ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸ: ಆ‌ರ್. ಅಶೋಕ್

ಬೈರತಿ, ಪೊನ್ನಣ್ಣ ಜೊತೆ ಸಿಎಂ ಸಭೆ 

ಮುಡಾ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಎಫ್‌ಐಆ‌ರ್ ದಾಖಲಾದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿನ ತಮ್ಮ ಮನೆಯಲ್ಲಿ ಆಪ್ತರ ಜೊತೆ ಸಭೆ ನಡೆ ಸಿದರು. ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೆ ಕೈಗೊಳ್ಳಬೇಕಾದ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.