ಕಲಬುರಗಿ (ಸೆ.17):  ಚಿತ್ರರಂಗದಲ್ಲಿ ಈ ಹಿಂದೆ ಡ್ರಗ್ಸ್‌ ಸೇವನೆ ಇರಲಿಲ್ಲ. ಇತ್ತೀಚೆಗೆ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ವಿಷಾದ ವ್ಯಕ್ತಪಡಿಸಿದ್ದಾರೆ. 

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್‌ ಸೇವನೆ ಆರೋಗ್ಯ ಹಾಳು ಮಾಡುವುದರ ಜೊತೆಗೆ ಸಾಮಾಜದ ಮೇಲೆ ಕೆಟ್ಟಪರಿಣಾಮ ಬೀರುವಂತೆ ಮಾಡುತ್ತದೆ. ಹಿಂದಿನ ಕಾಲದಲ್ಲಿ ಡ್ರಗ್ಸ್‌ ಎಂಬುದೇ ಇರಲಿಲ್ಲ. ಕಲಾವಿದರು ಕ್ಯಾಮರಾ ಮತ್ತು ಕ್ಯಾಮರಾಮನ್‌ಗೆ ನಮಸ್ಕಾರ ಮಾಡುತ್ತಿದ್ದರು. ಇದೀಗ ಚಿತ್ರರಂಗದಲ್ಲಿ ಎಲ್ಲಾ ಹಾಯ್‌ ಬಾಯ್‌ ಸಂಸ್ಕೃತಿ ಬಂದಿದೆ. 

ಡ್ರಗ್ಸ್ ಮಾಫಿಯಾ: ನಟಿಯರ ಬಗ್ಗೆ ಬಿಜೆಪಿ ಶಾಸಕ ಸಾಫ್ಟ್ ಕಾರ್ನರ್, ಪೊಲೀಸರ ನಡೆಗೆ ಗರಂ ..

ಡ್ರಗ್ಸ್‌ ಎಲ್ಲಾ ರಂಗದಲ್ಲೂ ಇದೆ. ಚಿತ್ರರಂಗದವರು ಬೇಗ ಎದ್ದು ಕಾಣುತ್ತಿದ್ದಾರೆ. ಆದರೆ, ಈ ತರಹ ಡ್ರಗ್ಸ್‌ ತೆಗೆದುಕೊಳ್ಳುವ ಕಲಾವಿದರನ್ನು ಫಾಲೋ ಮಾಡಿದರೆ ದೇಶಕ್ಕೆ ಮಾರಕ ಎಂದು ಎಚ್ಚರಿಸಿದರು.

ಶಾಸಕ ಜಮೀರ್‌ ಕ್ಯಾಸಿನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕ್ಯಾಸಿನೋಗೆ ಹೊರ ದೇಶದಲ್ಲಿ ಅನುಮತಿ ಇದೆ. ಹಾಗಾಗಿ ಜಮೀರ್‌ ಹೋಗಿದ್ದಾರೆ. ಡ್ರಗ್ಸ್‌ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳತ್ತಾರೆ ಎಂದು ತಿಳಿಸಿದರು.