ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಜಟಿಲವಾದ ಸಮಸ್ಯೆ ಪರಿಹಾರ ಹುಡುಕಲು ದೆಹಲಿಗೆ ಹೋಗಿ ಬರುತ್ತಿದ್ದಾರಷ್ಟೇ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ 

ಧಾರವಾಡ (ಸೆ.09) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಜಟಿಲವಾದ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಹುಡುಕಲು ದೆಹಲಿಗೆ ಹೋಗಿ ಬರುತ್ತಿದ್ದಾರಷ್ಟೇ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಕಳೆದ ಬಾರಿ ದೆಹಲಿಗೆ ಹೋದಾಗ ಮುಖ್ಯಮಂತ್ರಿಗಳು ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಕುರಿತಾದ ಭಾವಚಿತ್ರಗಳು ಸಹ ಬಂದಿರುವುದು ಮಾಧ್ಯಮಗಳಿಗೂ ಗೊತ್ತು. 

ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಯಲ್ಲಿ ಇದ್ದಾರೆ. ಏನ್ ಸಮಾಚಾರ?

ಇದರೊಂದಿಗೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೇರೆ ಬೇರೆ ಕೆಲಸಗಳೂ ಇರುತ್ತವೆ. ಅದಕ್ಕಾಗಿ ದೆಹಲಿಗೆ ಹೋಗಿ ಬರುತ್ತಾರೆ. ಅವರು ದೆಹಲಿಗೆ ಹೋಗುವುದೆಲ್ಲ ಕೇವಲ ಹೈಕಮಾಂಡ್‌ ಭೇಟಿಗಾಗಿಯೇ ಹೋಗುತ್ತಾರೆ ಎಂದರೆ ಹೇಗೆ? ನಮ್ಮಲ್ಲಿ ಯಾವ ವæೖಮನಸ್ಸೂ ಇಲ್ಲ. ಎಲ್ಲವೂ ತುಂಬಾ ಚೆನ್ನಾಗಿದೆ. 

ಅಮಿತ್‌ ಶಾ ಅವರೇ ಮುಕ್ತವಾಗಿ ಮುಖ್ಯಮಂತ್ರಿಗಳ ಬಗ್ಗೆ ಹೇಳಿ ಹೋಗಿದ್ದಾರೆ. ರಾಜ್ಯದಲ್ಲಿ ಜಟಿಲವಾದ ಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರ ಹುಡುಕಲು ದೆಹಲಿಗೆ ಹೋಗಿ ಬರುತ್ತಿದ್ದಾರಷ್ಟೇ ಎಂದರು.