ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಯಲ್ಲಿ ಇದ್ದಾರೆ. ಏನ್ ಸಮಾಚಾರ?
- ಪಾಲಿಕೆ ಚುನಾವಣೆ ಬೆನ್ನಲ್ಲೇ ದಿಲ್ಲಿಗೆ ಹಾರಿದ ಸಿಎಂ ಬಸವರಾಜ ಬೊಮ್ಮಾಯಿ
- ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಭೇಟಿಯಾಗಿ ಮಹತ್ವದ ಮಾತುಕತೆ
- ಕರ್ನಾಟಕ ಸಿಎಂ ಮನವಿಗೆ ಸ್ಪಂದಿಸಿದ ಸಚಿವ ಜಿತೇಂದ್ರ ಸಿಂಗ್
ನವದೆಹಲಿ(ಸೆ.08): ಉತ್ತರ ಕರ್ನಾಟಕದ ಮೂರು ಪಾಲಿಕೆ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹಾರಿದ್ದಾರೆ. ಸಹಜವಾಗಿ ಕುತೂಹಲ ಹೆಚ್ಚಾಗಿದೆ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿರುವ ಬೆನ್ನಲ್ಲೇ ಸಿಎಂ ದೆಹಲಿ ಭೇಟಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಬೊಮ್ಮಾಯಿಯ ಈ ಬಾರಿಯ ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಭೇಟಿ ಹಲವು ವಿಚಾರ ಚರ್ಚಿಸಿದ್ದಾರೆ.
ಕಲಬುರಗಿ ಪಾಲಿಕೆಯಲ್ಲಿ ದೋಸ್ತಿಗೆ ಜೆಡಿಎಸ್ ರೆಡಿ ಎಂದ ಎಚ್‌ಡಿಕೆ, ಯಾರ ಜೊತೆ?
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಜೊತೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬೊಮ್ಮಾಯಿ, ರಾಜ್ಯ ಕೇಡರ್ ಪರಿಶೀಲನೆ ನಡೆಸಲು ನೆರವು ಕೋರಿದರು. ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ಐ.ಎ.ಎಸ್.ಗೆ ಸೇರ್ಪಡೆಮಾಡಿಕೊಳ್ಳುವ ವಿಚಾರ ಕುರಿತಂತೆಯೂ ಬೊಮ್ಮಾಯಿ ಅವರು ಚರ್ಚಿಸಿದರು.
ಪಾಲಿಕೆ ಗೆಲುವು: ಬೊಮ್ಮಾಯಿ, ಕಟೀಲ್‌ಗೆ ನಡ್ಡಾ ಶಹಬ್ಬಾಸ್
ಬೊಮ್ಮಾಯಿ ಮನವಿಗೆ ಸ್ಪಂದಿಸಿದ ಸಚಿವ, ಕರ್ನಾಟಕ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಯನ್ನು ಶ್ಲಾಘಿಸಿದರು. ಡಾ. ಜಿತೇಂದ್ರ ಸಿಂಗ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿರುವ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. ವಿವಿಧ ರಾಜ್ಯಗಳಿಗೆ ಸಂಬಂಧಿಸಿದ ಎಲ್ಲಾ ಸೇವಾ ವಿಚಾರಗಳ ವಿಲೇವಾರಿ ಮಾಡುವಲ್ಲಿ ಡಿಒಪಿಟಿ ಪ್ರಾಮಾಣಿಕವಾಗಿದ್ದು, ಅಗತ್ಯವಿರುವ ಪ್ರಕ್ರಿಯೆಗಳು ಮತ್ತು ಅವಶ್ಯಕತೆಗಳನ್ನು ಆಯಾ ರಾಜ್ಯ ಸರ್ಕಾರಗಳು ಪೂರೈಸಿದ ತಕ್ಷಣ, ಡಿಒಪಿಟಿ ಪ್ರಕ್ರಿಯೆಯನ್ನು ತ್ವರಿತವಾಗಿ ಮುಂದುವರಿಸುತ್ತದೆ ಎಂದು ಅವರು ಮುಖ್ಯಮಂತ್ರಿಗೆ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿವಿಧ ಚಟುವಟಿಕೆಗಳ ಕುರಿತು ತಾಜಾ ಮಾಹಿತಿಯನ್ನು ಕೇಂದ್ರ ಸಚಿವ ಬೊಮ್ಮಾಯಿಗೆ ನೀಡಿದರು. ಬೆಂಗಳೂರು ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ಹೆಮ್ಮೆಯನ್ನು ಹೊಂದಿದೆ. ವಿಶ್ವದಾದ್ಯಂತದ ವೈಜ್ಞಾನಿಕ ಸಮುದಾಯದ ಮನ್ನಣೆಯನ್ನು ಪಡೆಯುತ್ತಿದೆ ಎಂದರು. ಕ್ಷೇತ್ರವಾರು ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಬಳಸಬಹುದಾದ ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಅನ್ವಯಿಕಗಳನ್ನು ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.