ರೈತರ ಒತ್ತಡಕ್ಕೆ ಮಣಿದು ಹಾಲಿನ ದರ ಏರಿಕೆ: ಡಿ.ಕೆ. ಶಿವಕುಮಾರ್

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜನ ಮತ್ತು ಪಕ್ಷ ಏನು ತೀರ್ಮಾನ ಮಾಡುತ್ತೆ ನೋಡೋಣ. ಮತದಾರರು ಏನು ಹೇಳ್ತಾರೆ ಪಕ್ಷ ಅದನ್ನ ಕೇಳುತ್ತೆ. ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದ್ದೇನೆ, ದೇವರ ದರ್ಶನ ಮಾಡಿದ್ದೇನೆ. ರಾಜ್ಯಕ್ಕೆ ಮತ್ತು ಜನರಿಗೆ ದೇವರು ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ನನಗೂ ದೇವರು ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್ 

Milk Price Increased due to Pressure from Farmers Says DCM DK Shivakumar grg

ಮಂಗಳೂರು(ಜೂ.25):  ನೀರಿನ ಬೆಲೆಯೂ ಲೀಟರ್‌ಗೆ 25 ರೂ.‌ಆಗಿದೆ. ಹಾಲಿನ ಬೆಲೆ ಜಾಸ್ತಿ ಮಾಡಬೇಕೆಂದು ರೈತರ ಒತ್ತಡವಿತ್ತು. ರೈತರ ಒತ್ತಡದ‌ ಮೇರೆಗೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುವ ಮೂಲಕ ಹಾಲಿನ ಬೆಲೆ ಏರಿಕೆ  ಡಿಸಿಎಂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 

ಇಂದು(ಮಂಗಳವಾರ) ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ‌ ನೀಡಿದ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣಕ್ಕೆ ಪ್ರೀತಂ ಗೌಡ ವಿರುದ್ಧ ಎಫ್ ಐ ಆರ್ ದಾಖಲು ವಿಚಾರ ನನ್ನ ಗಮನಕ್ಕೆ‌ ಬಂದಿಲ್ಲ, ನಾನು ಮಲಗಿದ್ದವ ಈಗ ಎದ್ದದ್ದಷ್ಟೇ. ಮಂಗಳೂರಿನಿಂದ ಸುಬ್ರಹ್ಮಣ್ಯದವರೆಗೆ ಮಲಗಿಕೊಂಡೇ ಬಂದಿದ್ದೀನಿ. ನನಗೆ ಯಾರೂ ಈ ವಿಚಾರ ತಿಳಿಸಿಲ್ಲ, ನಂಗೇ ಏನೂ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ. 

ನಂದಿನಿ ಹಾಲಿನ ದರ 2 ರೂ ಹೆಚ್ಚಳ ಮಾಡಿ ಕೆಎಂಎಫ್ ಆದೇಶ, ಹೊಸ ದರ ಪಟ್ಟಿ ಇಲ್ಲಿದೆ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜನ ಮತ್ತು ಪಕ್ಷ ಏನು ತೀರ್ಮಾನ ಮಾಡುತ್ತೆ ನೋಡೋಣ. ಮತದಾರರು ಏನು ಹೇಳ್ತಾರೆ ಪಕ್ಷ ಅದನ್ನ ಕೇಳುತ್ತೆ. ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದ್ದೇನೆ, ದೇವರ ದರ್ಶನ ಮಾಡಿದ್ದೇನೆ. ರಾಜ್ಯಕ್ಕೆ ಮತ್ತು ಜನರಿಗೆ ದೇವರು ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ನನಗೂ ದೇವರು ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಮಳೆ ಈಗಷ್ಟೇ ಪ್ರಾರಂಭ ಆಗಿದೆ, ಡ್ಯಾಂಗಳಲ್ಲಿ ಜಾಸ್ತಿ ನೀರು ಬರಲು ಪ್ರಾರಂಭ ಆಗಿದೆ. ಸಂಪೂರ್ಣವಾಗಿ ಮಳೆ ಪ್ರಾರಂಭವಾಗಿಲ್ಲ, ಇನ್ನೂ ಕೂಡ ಮಳೆಯ ಅವಕಾಶ ಇದೆ. ಆದ್ರೂ ತಮಿಳುನಾಡಿನವರು ಇವಾಗ್ಲೇ ನಮ್ಮಲ್ಲಿ ನೀರು ಬಿಡುವಂತೆ ಬೇಡಿಕೆ ಇಟ್ಟಿದ್ದಾರೆ. ಡ್ಯಾಂಗಳಲ್ಲಿ ಇನ್ನೂ ನೀರು ಬರಲು ಪ್ರಾರಂಭವಾಗಿಲ್ಲ. ಹಾಗಾಗಿ ಮಳೆ ಹೆಚ್ಚಾಗಿ ಬರಲಿ ಎಂದು ಪ್ರಾರ್ಥನೆ ಮಾಡೋಣ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios