Namma Metro: ಬಿಸಿಲು ಝಳದಿಂದ ಮೆಟ್ರೋ ರೈಲು ಸಂಚಾರ 20 ನಿಮಿಷ ಸ್ಥಗಿತ!

ತೀವ್ರವಾದ ಬಿಸಲಿನ ಝಳದಿಂದ ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ 20 ನಿಮಿಷಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು.

Metro train traffic stopped for 20 minutes due to heat stroke at bengaluru rav

ಬೆಂಗಳೂರು (ಏ.18) : ತೀವ್ರವಾದ ಬಿಸಲಿನ ಝಳದಿಂದ ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ 20 ನಿಮಿಷಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು.

ಸೋಮವಾರ ಸುಮಾರು 11ರ ಸುಮಾರಿಗೆ ರೈಲು ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಕಿಡಿ ತಾಗಿ, ಉರಿಯುತ್ತಿರುವುದು ಪೈಲಟ್‌ ಗಮನಕ್ಕೆ ಬಂದಿತು. ಅವರು ತಕ್ಷಣ ಸ್ಟೇಷನ್‌ ಮಾಸ್ಟರ್‌ಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಮೆಟ್ರೋದ ಸಿಬ್ಬಂದಿ ಆಗಮಿಸಿ ಆರಿಸಿದರು. ರಬ್ಬರ್‌ ತಣ್ಣಗಾದ ಬಳಿಕ ಸಹಜವಾಗಿ ಪ್ರಯಾಣವನ್ನು ಮರು ಪ್ರಾರಂಭಿಸಲಾಯಿತು.

ಬೆಂಗಳೂರು: ಮೆಟ್ರೋ ಕೆಳಗೆ ಕಂಪನಿಗಳಿಂದ ಉದ್ಯಾನ..!

ಘಟನೆಯಿಂದ ಸುಮಾರು 15-20 ನಿಮಿಷ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ಇದರಿಂದ ಆ ಮಾರ್ಗದ ಮೆಟ್ರೋ ಸ್ಥಗಿತದಿಂದ ಪ್ರಯಾಣಿಕರು ಪರದಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಅಧಿಕಾರಿಗಳು, ‘ಬಿಸಿಲಿಂದ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡಿತ್ತು. ಪೈಲಟ್‌ ಗಮನಕ್ಕೆ ಬಂದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಬಿಸಿಲಿನ ಝಳದಿಂದ ರಬ್ಬರ್‌ಗೆ ಕಿಡಿ ತಾಕಿರಬಹುದು. ವಿದ್ಯುತ್‌ ಅಥವಾ ರಬ್ಬರ್‌ನಲ್ಲಿನ ಸಮಸ್ಯೆಯಿಂದಲೂ ಆಗಿರಬಹುದು. ತಡರಾತ್ರಿ ಪರಿಶೀಲನೆ ನಡೆಸಿ ರಬ್ಬರ್‌ ಬದಲಿಸುವ ಕಾರ್ಯ ಮಾಡಲಾಗುವುದು. ಉಳಿದಂತೆ ಇಡೀ ದಿನ ಯಾವುದೇ ಸಮಸ್ಯೆಯಿಲ್ಲದೆ ಈ ಮಾರ್ಗದಲ್ಲಿ ರೈಲು ಸಂಚರಿಸಿದೆ’ ಎಂದು ತಿಳಿಸಿದರು.

ಹೀಟ್ ಸ್ಟ್ರೋಕ್, ಸನ್ ಸ್ಟ್ರೋಕ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್

ವಿವೇಕಾನಂದ ಮೆಟ್ರೋ ನಿಲ್ದಾಣ ಬಳಿ ಬೆಂಕಿ

  • ಬೆಳಗ್ಗೆ 11ರ ಸುಮಾರಿಗೆ ವಿವೇಕಾನಂದ ಮೆಟ್ರೋ ನಿಲ್ದಾಣ ಪ್ರವೇಸುತ್ತಿದ್ದ ರೈಲು
  • ಈ ವೇಳೆ ಹಳಿ ಬಳಿಯ ರಬ್ಬರ್‌ನಲ್ಲಿ ಬೆಂಕಿ ನೋಡಿದ ಮೆಟ್ರೋ ರೈಲಿನ ಪೈಲಟ್‌
  • ತಕ್ಷಣ ರೈಲು ನಿಲ್ಲಿಸಿ, ಸ್ಟೇಷನ್‌ ಮಾಸ್ಟರ್‌ಗೆ ಪೈಲಟ್‌ನಿಂದ ಮಾಹಿತಿ ರವಾನೆ
  • ರಬ್ಬರ್‌ಗೆ ಹೊತ್ತಿದ್ದ ಬೆಂಕಿ ನಂದಿಸಿದ ಮೆಟ್ರೋ ಸಿಬ್ಬಂದಿ, ಬಳಿಕ ರೈಲು ಸಂಚಾರ
Latest Videos
Follow Us:
Download App:
  • android
  • ios