ಸ್ಯಾಂಡಲ್ ವುಡ್, ಬಾಲಿವುಡ್ ಬಳಿಕ ಇದೀಗ ಮೀ ಟೂ ಆರೋಪ ಸ್ವಾಮೀಜಿಯೋರ್ವರ ಮೇಲೆ ಎದುರಾಗಿದೆ. ಭಕ್ತೆಯೇ ಸ್ವಾಮೀಜಿ ಮೇಲೆ ಕಿರುಕುಳ ಆರೋಪ ಮಾಡಿದ್ದಾರೆ. 

ಬೆಂಗಳೂರು: ಸ್ಯಾಂಡಲ್ ವುಡ್, ಬಾಲಿವುಡ್ ಬಳಿಕ ಇದೀಗ ಸ್ವಾಮೀಜಿಯೋರ್ವರ ಮೇಲೆ ಮೀ ಟೂ ಆರೋಪ ಎದುರಾಗಿದೆ.

Add Asianetnews Kannada as a Preferred SourcegooglePreferred

ನೆಲಮಂಗಲ ತಾಲೂಕಿನ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮೇಲೆ ಆರೋಪ ಎದುರಾಗಿದ್ದು, ಮಠದಲ್ಲಿ ಆಸರೆ ಕೇಳಿಕೊಂಡು ಬಂದ ಭಕ್ತೆಯೇ ಸ್ವತಃ ಆರೋಪ ಮಾಡಿದ್ದಾರೆ. 

ಒಂಟಿಯಾಗಿ ಬರುವಂತೆ ಬಸವರಮಾನಂದ ಸ್ವಾಮೀಜಿ ಹೇಳುತ್ತಿದ್ದರು. ಕೆಲಸ ಕೊಡಿಸುವ ಭರವಸೆಯಿಂದ ಮಠಕ್ಕೆ ಕರೆಯುತ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. 

ಈ ವಿಷಯವನ್ನು ಹೊರಗೆ ತಿಳಿಸಿದರೆ ನಿನ್ನ ವಿರುದ್ಧ ಅಪಪ್ರಚಾರ ಹಾಗೂ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು. ಈ ಬಗ್ಗೆ ದೂರು ದಾಖಲಾಗಿದ್ದರೂ ಕೂಡ ಪೊಲೀಸರು ಸ್ವಾಮೀಜಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ 7 ತಿಂಗಳ ಹಿಂದೆ ಡಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಇನ್ನು ಈ ಸಂಬಂಧ ಬಿ ರಿಪೋರ್ಟ್ ಹಾಕಲು ಮುಂದಾದ ಡಾಬಸ್ ಪೇಟೆ ಪೊಲೀಸರ ವಿರುದ್ಧವೂ ಕೂಡ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ನ್ಯಾಯ ಸಿಗದ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ಮಹಿಳೆ ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಇಲ್ಲಿನ ಪಿಎಸ್ ಐ ಶಂಕರ್ ನಾಯ್ಕ್ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.