Asianet Suvarna News Asianet Suvarna News

ಕರ್ನಾಟಕ ಬಸವನಾಡು ಆಯ್ತು, ಇದೀಗ ‘ನಮ್ಮ ಮೆಟ್ರೋ’ಗೂ ಬಸವಣ್ಣನ ಹೆಸರು ಇಡಲು ಎಂಬಿಪಾ ಒತ್ತಾಯ!

‘ನಮ್ಮ ಮೆಟ್ರೋ ಪೂರ್ಣ ಜಾಲಕ್ಕೆ ನಿಶ್ಚಿತವಾಗಿ ಬಸವಣ್ಣ ಅವರ ಹೆಸರಿಡಬೇಕು. ಇದು ಜನರ ಹಾಗೂ ನನ್ನ ಒತ್ತಾಯ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

MB Patil insists to name namma metro after Basavanna at bengaluru rav
Author
First Published Oct 31, 2023, 4:51 AM IST

ಬೆಂಗಳೂರು (ಅ.31) :  ‘ನಮ್ಮ ಮೆಟ್ರೋ ಪೂರ್ಣ ಜಾಲಕ್ಕೆ ನಿಶ್ಚಿತವಾಗಿ ಬಸವಣ್ಣ ಅವರ ಹೆಸರಿಡಬೇಕು. ಇದು ಜನರ ಹಾಗೂ ನನ್ನ ಒತ್ತಾಯ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಅವರ ಹೆಸರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದೇವೆ. ತನ್ಮೂಲಕ ಬಹಳ ಒಳ್ಳೆಯ ಕೆಲಸ ಮಾಡಿದ್ದೇವೆ. ಮತ್ತೋರ್ವ ಮಹಾತ್ಮರು, 12ನೇ ಶತಮಾನದಲ್ಲೇ ಸಮಾನತೆಯ ಸಂದೇಶ, ಅನುಭವ ಮಂಟಪದ ಪರಿಕಲ್ಪನೆ ತಂದ ಬಸವಣ್ಣನವರು ನಮ್ಮ ನಾಯಕರು. ಹೀಗಾಗಿ ಅವರ ಹೆಸರನ್ನು ಮೆಟ್ರೋಗೆ ಇಟ್ಟರೆ ಸೂಕ್ತ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಸುರಂಗದಿಂದ ಹೊರಬಂದ ರುದ್ರ, ನಮ್ಮ ಮೆಟ್ರೋಗೆ ಮತ್ತೊಂದು ಯಶಸ್ಸು!

ಪರ-ವಿರೋಧ ಚರ್ಚೆ:

‘ಸಂಪೂರ್ಣ ಮೆಟ್ರೋ ರೈಲು ಜಾಲಕ್ಕೆ ಬಸವಣ್ಣನವರ ಹೆಸರಿಡುವ ಬಗ್ಗೆ ಸಲಹೆಗಳು ಬಂದಿವೆ’ ಎಂಬ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ಹಲವರು ಹೆಸರು ಬದಲಾವಣೆ ವಿರೋಧಿಸಿ ‘ನಮ್ಮ ಮೆಟ್ರೋ’ ಹೆಸರೇ ಇರಲಿ ಎಂದಿದ್ದರೆ, ಇನ್ನು ಹಲವರು ಬದಲಾವಣೆಗೆ ವಿವಿಧ ಹೆಸರುಗಳನ್ನೂ ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ ಕಾರ್ಪ್‌ನಲ್ಲಿ ಈ ಸಂಬಂಧ ನಗರದ ಮೆಟ್ರೋ ಪ್ರಯಾಣಿಕರು ಹಲವಾರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಬದಲಾವಣೆ, ಸಮಾನತೆಯ ಹರಿಕಾರ ಬಸವಣ್ಣನವರ ಹೆಸರನ್ನು ಮೆಟ್ರೋಕ್ಕೆ ‘ನಮ್ಮ ಬಸವ’, ‘ಬಸವ ಮೆಟ್ರೋ’ ಎಂದಿಡಬೇಕು ಎಂಬ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ನಾಡಪ್ರಭು ಕೆಂಪೇಗೌಡ ಮೆಟ್ರೋ ಎಂದು ಹೆಸರಿಸಬೇಕು, ಮೊದಲು ಮೆಟ್ರೋ ಕನಸು ಕಂಡ ನಟ ಶಂಕರ್‌ನಾಗ್‌ ಅವರ ಹೆಸರನ್ನೇ ಇಡಬೇಕು. ಅಣ್ಣಾವ್ರು ಡಾ। ರಾಜ್‌ಕುಮಾರ್‌ ಹೆಸರಿಡಬೇಕು ಎಂಬ ಅಭಿಪ್ರಾಯಗಳೂ ‘ಎಕ್ಸ್‌’ ಕಾರ್ಪ್‌ನಲ್ಲಿ ವ್ಯಕ್ತವಾಗಿವೆ.

ಮೆಟ್ರೋ 3ನೇ ಹಂತಕ್ಕೆ ಒಪ್ಪಿಗೆ ನೀಡಿ: ಪ್ರಧಾನಿಗೆ ಸಿದ್ದರಾಮಯ್ಯ ಮನವಿ

ಇದೇ ವೇಳೆ ಅನೇಕರು ಈಗಿರುವ ನಮ್ಮ ಮೆಟ್ರೋ ಎಂಬ ಹೆಸರೇ ಉಳಿಬೇಕು. ಯಾವುದೇ ಐತಿಹಾಸಿಕ, ಸಾಮಾಜಿಕ ಹರಿಕಾರರು, ರಾಜಕಾರಣಿಯ, ಸಿನಿಮಾ ನಟರ ಹೆಸರಿಡುವುದು ಬೇಡ. ಈಗಿನ ಪೀಳಿಗೆಗೆ ಮೆಟ್ರೋದ ಶ್ರೇಯಸ್ಸು ಸಲ್ಲಬೇಕು. ಹೀಗಾಗಿ ಈಗಿನ ಹೆಸರೂ ನಮಗೆ ಸೇರಿದ್ದು. ಕಳೆದ ಹನ್ನೆರಡು ವರ್ಷಗಳಿಂದ ‘ನಮ್ಮ ಮೆಟ್ರೋ’ ಹೆಸರಿದ್ದು, ಭಾವನಾತ್ಮಕವಾಗಿಯೂ ಜನರ ಮನಸ್ಸಲ್ಲಿ ಹಾಸುಹೊಕ್ಕಾಗಿದೆ. ಪ್ರತಿದಿನ ಲಕ್ಷಾಂತರ ಜನ ಇದನ್ನೇ ಬಳಸುತ್ತಿದ್ದಾರೆ. ಹೀಗಾಗಿ ಅನಗತ್ಯವಾಗಿ ಬದಲಿಸುವುದು ಬೇಡ ಎಂದು ಹಲವರು ಪೋಸ್ಟ್‌ ಮಾಡಿದ್ದಾರೆ.

ಪ್ರಮುಖ ನಿಲ್ದಾಣಕ್ಕೆ ಅಥವಾ ಚೇಂಜ್ ಓವರ್ ಜಂಕ್ಷನ್‌ಗೆ ಬಸವೇಶ್ವರರ ಅವರ ಹೆಸರನ್ನು ಇಡುವುದು ಸೂಕ್ತ. ನಮ್ಮ ಮೆಟ್ರೋ ಯಾವಾಗಲು ನಮ್ಮ ಮೆಟ್ರೋ ಆಗಿರಲಿ. ರಾಜಕೀಯ ಕಾರಣಕ್ಕೆ ಹೆಸರು ಬದಲಾವಣೆ ಬೇಡ ಎಂದು ಹೇಳಿದ್ದಾರೆ.

Follow Us:
Download App:
  • android
  • ios