Bengaluru crime: ಹವಾ ಸೃಷ್ಟಿಸಲು ಯುವಕನಿಗೆ ಲಾಂಗ್‌ನಿಂದ ಹೊಡೆದು ರೀಲ್ಸ್ ಮಾಡಿದ್ದ ನಾಲ್ವರು ಆರೆಸ್ಟ್
ಸ್ಥಳೀಯವಾಗಿ ‘ಹವಾ’ ಸೃಷ್ಟಿಸಲು ಯುವಕನೊಬ್ಬನಿಗೆ ಲಾಂಗ್‌ನಲ್ಲಿ ಹೊಡೆದು ಗೂಂಡಾಗಿರಿ ನಡೆಸಿದ್ದ ನಾಲ್ವರು ಕಿಡಿಗೇಡಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.20) : ಸ್ಥಳೀಯವಾಗಿ ‘ಹವಾ’ ಸೃಷ್ಟಿಸಲು ಯುವಕನೊಬ್ಬನಿಗೆ ಲಾಂಗ್‌ನಲ್ಲಿ ಹೊಡೆದು ಗೂಂಡಾಗಿರಿ ನಡೆಸಿದ್ದ ನಾಲ್ವರು ಕಿಡಿಗೇಡಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂದ್ರಹಳ್ಳಿಯ ಅಭಿಷೇಕ್, ದರ್ಶನ್ ಹಾಗೂ ಇಬ್ಬರು ಅಪ್ರಾಪ್ತರು ಬಂಧಿತರಾಗಿದ್ದು, ಇತ್ತೀಚೆಗೆ ಯುವಕನೊಬ್ಬನ ಮೇಲೆ ಲಾಂಗ್‌ನಿಂದ ಅಭಿಷೇಕ್ ಹಾಗೂ ಆತನ ಸಹಚರರು ಹಲ್ಲೆ ನಡೆಸುವ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
Fake news ಸಿಕ್ಕಿಂ ಮೂಲದ ವ್ಯಕ್ತಿಗೆ ಚೈನೀಸ್ ಎಂದು ಹಲ್ಲೆ ಆರೋಪ ಸುಳ್ಳು ಸುದ್ದಿ
ಹವಾ ಸೃಷ್ಟಿಸಲು ಪುಂಡಾಟ:
ಆಂದ್ರಹಳ್ಳಿಯ ಅಭಿಷೇಕ್, ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದ. ಆಂದ್ರಹಳ್ಳಿ ಭಾಗದಲ್ಲಿ ಹವಾ ಸೃಷ್ಟಿಸಲು ಯತ್ನಿಸಿದ ಆತ, ಇತ್ತೀಚೆಗೆ ತನ್ನ ಸ್ನೇಹಿತರ ಗುಂಪು ಕಟ್ಟಿಕೊಂಡು ಪುಂಡಾಟಿಕೆ ಶುರು ಮಾಡಿದ್ದ. ಅಂತೆಯೇ ಕೆಲ ದಿನಗಳ ಹಿಂದೆ ಯುವಕನೊಬ್ಬನನ್ನು ಬಲವಂತವಾಗಿ ಕೋಣೆಯಲ್ಲಿ ಕೂಡಿ ಹಾಕಿ ಲಾಂಗ್‌ನಿಂದ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಅಭಿಷೇಕ್, ತನ್ನಣ್ಣನನ್ನು ಬಾಸ್ ಎಂದು ಕರೆಯುವಂತೆ ಬರೆದುಕೊಂಡಿದ್ದ. ಈ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ಗಮನಿಸಿದ ಬ್ಯಾಡರಹಳ್ಳಿ ಠಾಣೆ ಕಾನ್‌ಸ್ಟೇಬಲ್, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾವು ಸ್ಥಳೀಯವಾಗಿ ಹಿಡಿತ ಸಾಧಿಸಲು ಈ ಕೃತ್ಯ ಎಸಗಿದ್ದಾಗಿ ಅಭಿಷೇಕ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯುವಕ ಸಾವು: ಜ್ವರಕ್ಕೆ ಇಂಜೆಕ್ಷನ್ ನೀಡಿದ ವೈದ್ಯರ ವಿರುದ್ಧ ಆಕ್ರೋಶ
ಅಭಿಷೇಕ್ ಸೋದರ ಚಂದ್ರಶೇಖರ್ ಅಪರಾಧ ಹಿನ್ನೆಲೆಯುವಳ್ಳವನಾಗಿದ್ದು, ಆತನ ಮೇಲೆ ನಾಲ್ಕೈದು ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳಿಂದ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಾಗಿರುವ ಅಭಿಷೇಕ್ ಸೋದರ, ನಗರ ತೊರೆದು ತುಮಕೂರಿನಲ್ಲಿ ನೆಲೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.