ಬೆಂಗಳೂರು(ಜೂ.04): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆಗೆ ಮದುವೆ ಮಾಡಲು ಇತ್ತೀಚೆಗೆ ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

"

ಎಸ್‌.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ (ಸಿದ್ಧಾರ್ಥ ಹೆಗ್ಡೆ) ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆ ಜೊತೆ ಕಾಂಗ್ರೆಸ್‌ನ ‘ಟ್ರಬಲ್‌ಶೂಟರ್‌’ ಡಿ.ಕೆ. ಶಿವಕುಮಾರ್‌ ಹಿರಿಯ ಪುತ್ರಿ ಐಶ್ವರ್ಯಾ ಮದುವೆ ನಡೆಸಲು ಮಾತುಕತೆ ನಡೆದಿದೆ.

18ನೇ ವಯಸ್ಸಲ್ಲೇ 1 ಕೋಟಿ ರೂ. ಅಪಾರ್ಟ್‌ಮೆಂಟ್ ಖರೀದಿಸಿದ ಡಿಕೆಶಿ ಮಗಳ ಫೋಟೋಸ್...

15 ದಿನಗಳ ಹಿಂದೆ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿದರು. ಈ ವೇಳೆ ಇಬ್ಬರಿಗೂ ಮದುವೆ ಮಾಡುವ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಶಿವಕುಮಾರ್‌ ಹಾಗೂ ದಿವಂಗತ ಸಿದ್ಧಾಥ್‌ರ್‍ ಆತ್ಮೀಯರಾಗಿದ್ದರು. ಅಲ್ಲದೆ ಉದ್ಯಮದಲ್ಲಿ ಪಾಲುದಾರರೂ ಆಗಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಿದ್ಧಾರ್ಥ ಅವರ ಮಾವ ಎಸ್‌.ಎಂ. ಕೃಷ್ಣ ಅವರು ಡಿ.ಕೆ. ಶಿವಕುಮಾರ್‌ ಅವರ ರಾಜಕೀಯ ಗುರು. ಹೀಗಾಗಿ ಎರಡೂ ಕುಟುಂಬಗಳು ಸಂಬಂಧ ಬೆಳೆಸಿಕೊಳ್ಳಲು ನಿಶ್ಚಯಿಸಿದ್ದು, ಇದರ ಭಾಗವಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.