ಬೆಂಗಳೂರು(ಅ.23): ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2020ನೇ ಸಾಲಿನ ‘ಪ್ರೊ.ಸಿ.ಎಚ್‌.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಚ್‌.ಜಿ.ದತ್ತಾತ್ರೇಯ(ದತ್ತಣ್ಣ), ಶಿಕ್ಷಣ ತಜ್ಞ ಪ್ರೊ.ತೇಜಸ್ವಿ ವಿ.ಕಟ್ಟಿಮನಿ ಸೇರಿದಂತೆ ಆರು ಮಂದಿ ಗಣ್ಯರು ಆಯ್ಕೆಯಾಗಿದ್ದಾರೆ. 

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರೊ.ತೇಜಸ್ವಿ ವಿ.ಕಟ್ಟಿಮನಿ (ಶಿಕ್ಷಣ), ಎಚ್‌.ಜಿ.ದತ್ತಾತ್ರೇಯ (ಚಲನಚಿತ್ರ), ಡಾ.ಕೆ.ಎನ್‌.ಲಾವಣ್ಯಪ್ರಭ (ಸಾಹಿತ್ಯ), ಬಸವರಾಜ ಸಂತೇಶಿವಾರ (ಕೃಷಿ-ನೀರಾವರಿ), ಶೈಲಾ ನಾಗರಾಜ್‌ (ಕನ್ನಡ ಸೇವೆ) ಮತ್ತು ಜಿ.ಕೆ.ವಿಜಯಕುಮಾರಿ (ಕ್ರೀಡೆ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಮೊತ್ತ ತಲಾ 20 ಸಾವಿರ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಫಲಕ ಒಳಗೊಂಡಿದೆ.

ರಾಧಿಕಾ ನಾರಾಯಣ್‌ಗ ಕ್ಲೀನ್‌ ಬೋಲ್ಡ್‌ ಆದ ದತ್ತಣ್ಣ!

ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯರಾದ ಎಸ್‌.ಎಸ್‌.ರಾಜಶೇಖರ್‌, ಎಂ.ಎಸ್‌.ರವಿಕುಮಾರ್‌, ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ರಾಜಶೇಖರ್‌ ಹತಗುಂದಿ, ವ.ಚ.ಚನ್ನೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.