Asianet Suvarna News Asianet Suvarna News

ಆಟೋದಲ್ಲಿ ಬಂದಿದ್ದ ಟೋಪಿ ಬಾಂಬರ್‌ ಯಾರು?

ಆಟೋದಲ್ಲಿ ಬಂದಿದ್ದ ಟೋಪಿ ಬಾಂಬರ್‌| ಬಾಂಬ್‌ ಇಟ್ಟ ವ್ಯಕ್ತಿ ಮಧ್ಯ ವಯಸ್ಕ| ಈತನ ಫೋಟೋ, ಬಂದಿಳಿದ ರಿಕ್ಷಾ ಸಂಖ್ಯೆ ಪೊಲೀಸರಿಗೆ ಲಭ್ಯ

Mangaluru Police Found The Photos Of The Person Who Kept Bomb In International Airport At Bajpe
Author
Bangalore, First Published Jan 21, 2020, 7:59 AM IST
  • Facebook
  • Twitter
  • Whatsapp

ಮಂಗಳೂರು[ಜ.21]: ವಿಮಾನ ನಿಲ್ದಾಣದಲ್ಲಿದ್ದ ಸಿಸಿಟಿವಿ ಫäಟೇಜ್‌ನಲ್ಲಿ ಬಾಂಬ್‌ ಇಟ್ಟವ್ಯಕ್ತಿಯ ಚಹರೆ ಪತ್ತೆಯಾಗಿದೆ. ಹೆಚ್ಚಿನ ಬಾಂಬ್‌ ಪ್ರಕರಣಗಳಲ್ಲಿ ಯುವಕರೇ ಇದ್ದರೆ ಇಲ್ಲಿ ಬಾಂಬ್‌ ಇಟ್ಟವನು ಮಧ್ಯವಯಸ್ಕ! ಸುಮಾರು 40-45 ವರ್ಷ ವಯಸ್ಸಿನ ವ್ಯಕ್ತಿ ಈತನಾಗಿದ್ದು, ಅತಿ ಚಿಕ್ಕದಾಗಿ ಕೂದಲು ಬೋಳಿಸಿಕೊಂಡಿದ್ದ. ತಲೆ ಮೇಲೆ ಬಿಳಿ ಬಣ್ಣದ ಕ್ಯಾಪ್‌ ಧರಿಸಿದ್ದ. ಸಪೂರ ಉದ್ದನೆಯ ಗೆರೆಗಳುಳ್ಳ ಬಿಳಿ ಬಣ್ಣದ ಶರ್ಟ್‌ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದ. ಈತ ನಿಲ್ದಾಣಕ್ಕೆ ಬಂದಿದ್ದ ರಿಕ್ಷಾದ ಸಂಖ್ಯೆ ಕೂಡ ಪೊಲೀಸರಿಗೆ ಲಭಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ನಿಖರ ಮಾಹಿತಿ ಪಡೆದಿದ್ದ ದುಷ್ಕರ್ಮಿ!

ಅತ್ಯಂತ ನಿಖರವಾಗಿ ಬಜ್ಪೆಗೆ ಬಂದಿಳಿದು, ಕರಾರುವಾಕ್ಕಾಗಿ ಬಾಂಬ್‌ ಇಟ್ಟು ಭದ್ರತಾ ಪಡೆಗೆ ಯಾವುದೇ ರೀತಿಯ ಸುಳಿವು ಬಾರದಂತೆ ಪರಾರಿಯಾಗಿದ್ದ ದುಷ್ಕರ್ಮಿ ವಿಮಾನ ನಿಲ್ದಾಣದ ಸಕಲ ವ್ಯವಸ್ಥೆಯನ್ನೂ ಮೊದಲೇ ಆಳವಾಗಿ ಅಭ್ಯಸಿಸಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.

ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್‌ ನಾಶಗೊಳಿಸಿದ ಗಂಗಯ್ಯ!

ವಿಮಾನ ನಿಲ್ದಾಣದಲ್ಲಿ ಎಡಗಡೆ ಟಿಕೆಟ್‌ ಕೌಂಟರ್‌ ಇದೆ. ಅದರ ಬಳಿ ಯಾವುದೇ ಸಿಸಿ ಕ್ಯಾಮರಾ ಇಲ್ಲ. ಅದಕ್ಕಿಂತ ಅನತಿ ದೂರದಲ್ಲಿ 30-40 ಮೀ. ದೂರದಲ್ಲಿ ಸಿಸಿ ಕ್ಯಾಮರಾ ಇದೆ. ಟಿಕೆಟ್‌ ಕೌಂಟರ್‌ನ ಇನ್ನೊಂದು ಬದಿಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಅದರ ದಿಕ್ಕು ಬೇರೆ ಕಡೆಗಿದೆ. ಇದೆಲ್ಲವನ್ನೂ ಕೂಲಂಕಷವಾಗಿ ಅಭ್ಯಾಸ ಮಾಡಿಯೇ ದುಷ್ಕರ್ಮಿ ಟಿಕೆಟ್‌ ಕೌಂಟರ್‌ ಬಳಿಯೇ ಬಾಂಬ್‌ ಇಡುವ ಸ್ಕೆಚ್‌ ಹಾಕಿರಬಹುದು ಎಂದು ಮೂಲಗಳು ತಿಳಿಸಿವೆ.

ಮತ್ತೆ ಬಾಂಬ್‌ ಕರೆ ಬಂತು!

ಸಜೀವ ಬಾಂಬ್‌ ಪತ್ತೆಯಾಗಿ ಅದನ್ನು ನಿಷ್ಕ್ರಿಯಗೊಳಿಸಲು ಭದ್ರತಾ ಸಿಬ್ಬಂದಿ ಸರ್ವ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಮಂಗಳೂರಿನಿಂದ ಬೆಂಗಳೂರಿಗೆ ಹೊರಡಲು ಅಣಿಯಾಗಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್‌ ಇದೆ ಎನ್ನುವ ಕರೆ ವಿಮಾನ ನಿಲ್ದಾಣದ ಟರ್ಮಿನಲ್‌ ಮ್ಯಾನೇಜರ್‌ಗೆ ಬಂದಿತ್ತು. ಬಾಂಬ್‌ ಪತ್ತೆ ಮತ್ತು ನಿಷ್ಕಿ್ರಯ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಟೇಕ್‌ ಆಫ್‌ ಆಗುವ ಹಂತದಲ್ಲಿದ್ದ ವಿಮಾನದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿತು. ಆದರೆ, ಯಾವುದೇ ಬಾಂಬ್‌ ಆಗಲೀ, ಶಂಕಿತ ಬ್ಯಾಗ್‌ ಆಗಲೀ ಪತ್ತೆಯಾಗಲಿಲ್ಲ. ಮಧ್ಯಾಹ್ನ 3.15ರ ವೇಳೆಗೆ ಈ ವಿಮಾನ ಬೆಂಗಳೂರಿಗೆ ಟೇಕ್‌ ಆಫ್‌ ಆಗಬೇಕಿತ್ತು. ಆದರೆ, ಸಂಪೂರ್ಣ ಕಾರ್ಯಾಚರಣೆ ನಡೆಸಿದ ಬಳಿಕ ಭದ್ರತೆ ಖಚಿತಪಡಿಸಿದ ಬಳಿಕವೇ ರಾತ್ರಿ ವೇಳೆ ವಿಮಾನವನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಟೈಮರ್‌ಗೂ, ಬಾಂಬ್‌ಗೂ ಕನೆಕ್ಷನ್‌ ಕೊಟ್ಟಿರಲೇ ಇಲ್ಲ!

Follow Us:
Download App:
  • android
  • ios