ಒಬ್ಬಳ ರಕ್ಷಿಸಲು ಹೋಗಿ ಮೂವರು ಯವತಿಯರು ಈಜುಕೊಳದಲ್ಲಿ ಸಾವು, ಕೊನೆ ಕ್ಷಣದ ಮನಕಲುಕುವ ವಿಡಿಯೋ!
ಕಾಪಾಡಿ, ಕಾಪಾಡಿ ಎಂದು ಕೂಗುತ್ತಿರುವ ಮೂವರು ಯುವತಿಯರಿಗೆ ಅತ್ತ ಮೇಲೆ ಬರಲು ಸಾಧ್ಯವಾಗಲಿಲ್ಲ, ಇತ್ತ ಯಾರ ನೆರವೂ ಸಿಗಲಿಲ್ಲ. ಈಜುಕೊಳದಲ್ಲಿ ಪ್ರಾಣ ಬಿಟ್ಟ ಮೂವರು ಯುವತಿಯರ ಕೊನೆಯ ಕ್ಷಣದ ವಿಡಿಯೋ.
ಮಂಗಳೂರು(ನ.17) ಮಂಗಳೂರು ಬೀಚ್ ರೆಸಾರ್ಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೈಸೂರಿನ ಮೂವರು ಯುವತಿಯರು ಪ್ರಾಣ ಬಿಟ್ಟ ಘಟನೆ ರಾಜ್ಯದಲ್ಲಿ ಆತಂಕ ಹೆಚ್ಟಿಸಿದೆ. ಶನಿವಾರ ಹಾಗೂ ಭಾನವಾರದ ವೀಕೆಂಡ್ ಮಜಾ ಅನುಭವಿಸಲು ಮಂಗಳೂರಿನ ಬೀಚ್ ರೆಸಾರ್ಟ್‌ಗೆ ತೆರಳಿದ ಮೂವರು ಯುವತಿಯರು ದುರಂತ ಅಂತ್ಯಕಂಡಿದ್ದಾರೆ. ರೆಸಾರ್ಟ್‌ನ ಈಜುಕೊಳದಲ್ಲಿ ಆಡವಾಡುತ್ತಿದ್ದ ಗೆಳತಿಯರು ಅಪಾಯಕ್ಕೆ ಸಿಲುಕಿದ್ದಾರೆ. ಕಾಪಾಡಿ, ಕಾಪಾಡಿ ಎಂದು ಕೂಗಿಕೊಂಡಿದ್ದಾರೆ. ಒಬ್ಬಳ ರಕ್ಷಣೆಗೆ ತೆರಳಿದ ಮತ್ತೊಬ್ಬಳು ನೀರುಪಾಲಾದರೆ, ಇಬ್ಬರನ್ನು ರಕ್ಷಿಸಲು ಹೋದ ಮೂರನೇ ಯುವತಿ ಕೂಡ ಮುಳುಗಿ ಮೃತಪಟ್ಟಿದ್ದಾರೆ. ಯುವತಿಯರ ಕೊನೆಯ ಕ್ಷಣದ ವಿಡಿಯೋ ರೆಸಾರ್ಟ್ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮೂವರು ಯುವತಿಯರ ಅಂತಿಮ ಕ್ಷಣದ ವಿಡಿಯೋ ಮನಕಲುಕವಂತಿದೆ. ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಆಟವಾಡತ್ತಿದ್ದ ಮೈಸೂರಿನ ನಿಶ್ಚಿತ, ಪಾರ್ವತಿ ಹಾಗೂ ಕೀರ್ತನಾ ಕೊನೆಯ ಕ್ಷಣದಲ್ಲಿನ ಘಟನೆ ನಿಜಕ್ಕೂ ಬೆಚ್ತಿ ಬೀಳಿಸುತ್ತಿದೆ. ಈಜುಕೊಳದಲ್ಲಿ ಸಾಹಯಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಗಾಳಿ ತುಂಬಿದ ಟ್ಯೂಬ್‌ಗಳನ್ನು ಹಾಕಲಾಗಿತ್ತು. ಆದರೆ ಟ್ಯೂಬ್‌ಗಳು ಆಳ ನೀರಿನ ಮೇಲ್ಬಾಗದಲ್ಲಿತ್ತು. ಟ್ಯೂಬ್ ಮೇಲೆ ವಿಶ್ರಾಂತಿ ಪಡೆಯುವ ಅಥವಾ ಟ್ಯೂಬ್ ಬಳಸಿ ಮತ್ತಷ್ಟು ಆಟವಾಡುವಾ ಆಲೋಚನೆಯಲ್ಲಿ ಒರ್ವ ಯುವತಿ ಟ್ಯೂಬ್ ತರಲು ನೀರಿನಲ್ಲಿ ನಡೆದುಕೊಂಡು ಸಾಗಿದ್ದಾಳೆ.
ಮಂಗಳೂರು: ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು
ಟ್ಯೂಬ್ ಹಿಡಿದು ವಾಪಸ್ ತರಲು ಸಾಧ್ಯವಾಗಿಲ್ಲ. ಹೀಗಾಗಿ ಟ್ಯೂಬನ್ನು ಅಲ್ಲೆ ಬಿಟ್ಟಿದ್ದಾಳೆ. ಇದೇ ವೇಳೆ ಟ್ಯೂಬ್ ತರಲು ಹೋದ ಯುವತಿಯ ಹಿಂಭಾಗದಲ್ಲಿದ್ದ ಓರ್ವ ಯುವತಿ ನೀರಿನಲ್ಲೇ ಆಯ ತಪ್ಪಿದ್ದಾಳೆ. ಕೈಕಾಲು ಬಡಿದುಕೊಳ್ಳಲು ಆರಂಭಿಸಿದ್ದಾಳೆ. ಇದೇ ವೇಳೆ ಪಕ್ಕದಲ್ಲಿದ್ದ ಯುವತಿ ನೆರವಿಗೆ ಧಾವಿಸಿದ್ದಾಳೆ. ಕೈಚಾಚಿ ಯುವತಿಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಆದರೆ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ನೆರವಿಗೆ ಕೈಚಾಚಿದ ಯುವತಿ ಕೂಡ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಈ ವೇಳೆ ಮತ್ತಷ್ಟು ಗಾಬರಿಗೊಂಡ ಮೂರನೇ ಯುವತಿ ಇಬ್ಬರನ್ನು ರಕ್ಷಿಸಲು ಕೈ ನೀಡಿದ್ದಾಳೆ. ಪರಿಣಾಮ ಮೂವರು ನೀರಿನಲ್ಲಿ ಮುಳುಗಿದ್ದಾರೆ. ಬದುಕುಳಿಯಲು ಹಲವು ಪ್ರಯತ್ನ ಮಾಡಿದರೂ ಯುವತಿಯರಿಗೆ ಸಾಧ್ಯವಾಗಿಲ್ಲ. ಸರಿಯಾಗಿ ಈಜು ಬರದ ಕಾರಣ ಮೂವರು ಯುವತಿಯರು ನೀರಿನಲ್ಲೇ ಪ್ರಾಣ ಬಿಟ್ಟಿದ್ದಾರೆ. ಕೊನೆಯ ಕ್ಷಣದ ಮೈಜುಮ್ಮೆನಿಸುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಮಂಗಳೂರಿನ ಉಚ್ಚಿಲ ಬಳಿ ಇರುವ ಸಾಯಿರಾಂ ವಾಝ್ಕೋ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮೈಸೂರಿನ ನಿಶ್ಚಿತ, ಪಾರ್ವತಿ ಹಾಗೂ ಕೀರ್ತನಾ ಎಂಬ ಮೂವರು ಯುವತಿಯರು ರೆಸಾರ್ಟ್ ವೀಕೆಂಡ್ ವಿಶ್ರಾಂತಿ ಬಯಸಿದ್ದಾರೆ. ಆದರೆ ಮೂವರು ಈಜುಕೊಳದಲ್ಲಿ ಅಂತ್ಯಕಂಡಿದ್ದಾರೆ. ಯುವತಿಯರ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ನಡೆಸುತ್ತಿರುವ ಪೊಲೀಸರು ರೆಸಾರ್ಟ್ ಮಾಲೀಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೆಸಾರ್ಟ್ ಸುರಕ್ಷತಾ ನಿಯಮ ಪಾಲಿಸಿಲ್ಲ ಅನ್ನೋ ಆರೋಪಗಳು ಕೇಳಿಬರುತ್ತಿದೆ.
ಬೀಚ್ ರೆಸಾರ್ಟ್ ನಿಯಮ ಉಲ್ಲಂಘಿಸಿರುವ ಕಾರಣ ಪರವಾನಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ತನಿಖೆ ಮುಗಿಯುವ ವರೆಗೂ ರೆಸಾರ್ಟ್‌ಗೆ ಪೊಲೀಸರು ಬೀಗ ಹಾಕಿದ್ದಾರೆ. ರೆಸಾರ್ಟ್ ಸೀಲ್ ಡೌನ್ ಮಾಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೇ ವೇಳೆ ನಿಯಮ ಉಲ್ಲಂಘಿಸಿರುವ ಇತರ ರೆಸಾರ್ಟ್ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ರೆಸಾರ್ಟ್‌ಗಳಿಗೆ ಎಚ್ಚರಿಕೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಹಲವು ರೆಸಾರ್ಟ್‌ಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಇಂತಹ ರೆಸಾರ್ಟ್‌ಗೆ ಬೀಗ ಹಾಕಲು ಪೊಲೀಸರು ಮುಂದಾಗಿದ್ದಾರೆ.