ಸಂದೀಪ್‌ ವಾಗ್ಲೆ

ಮಂಗಳೂರು(ಜು.19): ಕಡಲನಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಸೋಂಕಿತರ ಜತೆಗೆ ಮರಣ ಪ್ರಮಾಣ (ಡೆತ್‌ರೇಟ್‌) ಕೂಡ ಏರುಗತಿಯಲ್ಲೇ ಸಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿದ್ದರೂ ಡೆತ್‌ರೇಟ್‌ನಲ್ಲಿ ಮಾತ್ರ ಮಂಗಳೂರು ನಗರ ಬೆಂಗಳೂರನ್ನೂ ಮೀರಿಸಿದೆ!

ಆ್ಯಂಟಿಜೆನ್‌ನಲ್ಲಿ ನೆಗೆಟಿವ್‌, ಲ್ಯಾಬ್‌ ಟೆಸ್ಟಲ್ಲಿ ಪಾಸಿಟಿವ್‌!

ಜು.17ರ ರಾಜ್ಯ ಕೋವಿಡ್‌ ಬುಲೆಟಿನ್‌ ಪ್ರಕಾರ ಬೆಂಗಳೂರಿನಲ್ಲಿ 27,496 ಕೊರೋನಾ ಸೋಂಕಿತರ ಪೈಕಿ ಸಾವಿಗೀಡಾದವರ ಸಂಖ್ಯೆ 582. ಅಂದರೆ ಸಾವಿನ ಪ್ರಮಾಣ ಶೇ.2.12. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3074 ಸೋಂಕಿತರಲ್ಲಿ 71 ಮಂದಿ ಸಾವಿಗೀಡಾಗಿ ಡೆತ್‌ ರೇಟ್‌ ಶೇ.2.30ಕ್ಕೇರಿದೆ. ಇಡೀ ಕರ್ನಾಟಕ ರಾಜ್ಯದಲ್ಲಿನ ಕೊರೋನಾ ಸಾವಿನ ಪ್ರಮಾಣ ಇರುವುದೇ ಶೇ.2.091. ಇಡೀ ರಾಜ್ಯದ ಸರಾಸರಿ ಸಾವಿನ ಪ್ರಮಾಣವನ್ನೂ ಮೀರಿ ಮಂಗಳೂರು ದಾಪುಗಾಲಿಡುತ್ತಿದೆ. ಪಕ್ಕದ ಉಡುಪಿ ಜಿಲ್ಲೆಯಲ್ಲೂ 1979 ಸೋಂಕಿತರ ಪೈಕಿ ಜು.17ರವರೆಗೆ ಸಾವಿಗೀಡಾದವರು ಕೇವಲ 7 ಮಂದಿ. ಅಂದರೆ ಮರಣ ಪ್ರಮಾಣ ಶೇ. 0.35ನ್ನೂ ಮೀರಿಲ್ಲ.

ರೋಗಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆಸತ್ರೆಗೆ ಬಾರದೆ ಚಿಕಿತ್ಸೆ ವಿಳಂಬವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

-ಸಿಂಧೂ ರೂಪೇಶ್‌, ದ.ಕ. ಜಿಲ್ಲಾಧಿಕಾರಿ

300 ಕೋಟಿಯ ರಾಮಮಂದಿರ: ಆ.3 ಅಥವಾ 5ಕ್ಕೆ ಭೂಮಿಪೂಜೆ: ಮೋದಿಗೆ ಆಹ್ವಾನ!

ಕೊರೋನಾ ಪರೀಕ್ಷೆಗಳ ಸಂಖ್ಯೆ ಕಡಿಮೆ ಇರುವುದರಿಂದ ಡೆತ್‌ ರೇಟ್‌ ಹೆಚ್ಚಿದಂತೆ ಕಾಣುತ್ತದಷ್ಟೇ. ಇದು ಆತಂಕಪಡುವ ವಿಚಾರ ಅಲ್ಲ. ಮೃತಪಟ್ಟವರಲ್ಲಿ ಹೆಚ್ಚಿನವರು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರೇ ಆಗಿದ್ದಾರೆ.

-ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಹಿರಿಯ ವೈದ್ಯರು