ಮಂಡ್ಯ :  ಜಮ್ಮು ಕಾಶ್ಮೀರದ ಪುಲ್ವಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಮಂಡ್ಯದ  ಯೋಧ ಗುರು ವೀರಮರಣವನ್ನಪ್ಪಿದ್ದು, ಈ ವಿಚಾರದಲ್ಲೀಗ ಮಂಡ್ಯ ಸಂಸದ ಶಿವರಾಮೇಗೌಡ ರಾಜಕೀಯದ ನುಸುಳಿಸಿ ಹೇಳಿಕೆ ನೀಡಿದ್ದಾರೆ. 

ಪುಲ್ವಾಮ ಕೃತ್ಯಕ್ಕೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯವೆ ಕಾರಣ ಎಂದು ಮಂಡ್ಯ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ. 

ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ

ಹುತಾತ್ಮ ಯೋಧ ಗುರು ಅವರ ಸ್ವಾಗ್ರಾಮ ಗುಡಿಗೆರೆ ಕಾಲೋನಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಶಿವರಾಮೇಗೌಡ ಸರ್ಜಿಕಲ್ ಸ್ಟ್ರೈಕ್ ಮಾಡಿ ಮೋದಿ ಏನ್ ಮಾಡಿದರು.  ಇದಕ್ಕೆಲ್ಲಾ ಕಾರಣ ಕೇಂದ್ರ ಗುಪ್ತಚರ ಸಂಸ್ಥೆ ವೈಫಲ್ಯ ಎಂದರು. 

ಮೋದಿಯ ಕೇಂದ್ರ ಸರ್ಕಾರದಿಂದ 42 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತ ಯೋಧರ ಸಾವಿಗೆ ನ್ಯಾಯಕೊಡಿಸಲು ಮೋದಿ ವಿಫಲರಾಗಿದ್ದಾರೆ ಎಂದಿದ್ದಾರೆ. 

ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದಿದ್ದ ಪಾತಕಿ

ಅಲ್ಲದೇ ಇದೇ ವೇಳೆ ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.   

ಇನ್ನು ಯೋಧರ ಸ್ಮಶಾನ ಜಾಗಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದೂ ಕೂಡ  ಶಿವರಾಮೇಗೌಡ ಹೇಳಿದ್ದಾರೆ.