Asianet Suvarna News Asianet Suvarna News

Mandya: ಪೊಲೀಸರಿಗೆ ಮಾಹಿತಿ ನೀಡದೆ ವಿದೇಶಕ್ಕೆ ಹಾರಿದ ಹಿಜಾಬ್ ಹುಡುಗಿ ಮುಸ್ಕಾನ್!

ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಐಕಾನ್ ಲೇಡಿ ಆಫ್ ಹಿಜಾಬ್ ಅಂತಲೇ ಪ್ರಖ್ಯಾತಿ ಪಡೆದಿದ್ದ ಮಂಡ್ಯದ ಮುಸ್ಕಾನ್ ಒಂದಲ್ಲ‌ ಒಂದು ವಿಚಾರಕ್ಕೆ ಸುದ್ದಿ ಆಗ್ತಿದ್ದಾರೆ.

mandya based student muskan khan went to foreign says reports gvd
Author
Bangalore, First Published May 11, 2022, 12:57 PM IST

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಮೇ.11): ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಐಕಾನ್ ಲೇಡಿ ಆಫ್ ಹಿಜಾಬ್ (Hijab) ಅಂತಲೇ ಪ್ರಖ್ಯಾತಿ ಪಡೆದಿದ್ದ ಮಂಡ್ಯದ (Mandya) ಮುಸ್ಕಾನ್ ಖಾನ್ (Muskan Khan) ಒಂದಲ್ಲ‌ ಒಂದು ವಿಚಾರಕ್ಕೆ ಸುದ್ದಿ ಆಗ್ತಿದ್ದಾರೆ. ಘೋಷಣೆ ಬಳಿಕ ಮುಸ್ಲಿಂ (Muslim) ನಾಯಕರಿಂದ ಪ್ರಶಂಸೆ, ಉಡುಗೊರೆ ಪಡೆದಿದ್ದ ಮುಸ್ಕಾನ್ ಇದೀಗ ಪೊಲೀಸರಿಗೆ (Police) ಮಾಹಿತಿ ನೀಡದೆ ವಿದೇಶ (Foreign) ಪ್ರವಾಸ ಕೈಗೊಂಡು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಮೆಕ್ಕಾ ಪ್ರವಾಸದಲ್ಲಿ ಮುಸ್ಕಾನ್ ಕುಟುಂಬ: ಕಳೆದ ಏ.25ರಂದೇ ಮುಸ್ಕಾನ್ ಕುಟುಂಬದವರು ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಮೆಕ್ಕಾ (Mekka) ಭೇಟಿಗೆ ಸೌದಿಗೆ (Saudi) ತೆರಳಿರುವ ಕುಟುಂಬಸ್ಥರು ಮೇ 18ರಂದು ವಾಪಾಸ್ಸಾಗುವ ಮಾಹಿತಿ ಇದೆ. ಆದ್ರೆ ಮುಸ್ಕಾನ್ ಕುಟುಂಬದ ವಿದೇಶ ಪ್ರವಾಸ ಈಗ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ ಅಲ್ಲಾ ಹು ಅಕ್ಬರ್ ಘೋಷಣೆ ಬಳಿಕ ದೇಶದಾದ್ಯಂತ ಚರ್ಚೆಗೆ ಬಂದಿದ್ದ ಮುಸ್ಕಾನ್ ಹಲವು ಮುಸ್ಲಿಂ ನಾಯಕರಿಂದ ಪ್ರಶಂಸೆ, ಉಡುಗೊರೆ ಸ್ವೀಕರಿಸಿದ್ದರು. 

'ಅಲ್ಲಾ ಹು ಅಕ್ಬರ್' ಕೂಗಿದ್ಧ ಮುಸ್ಕಾನ್ ವಿರುದ್ಧ ತನಿಖೆ ಮಾಡಿ: ಸಿಎಂಗೆ ಅನಂತ್ ಕುಮಾರ್ ಹೆಗಡೆ ಪತ್ರ

ಮಹಾರಾಷ್ಟ್ರ ಶಾಸಕ ಸಿದ್ದಿಕ್ಕಿ ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಸೇರಿದಂತೆ ಹಲವು ಗಿಫ್ಟ್‌ಗಳು ಮುಸ್ಕಾನ್ ಕೈ ಸೇರಿದ್ದವು. ಅದಲ್ಲದೆ ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಕೂಡ ಮುಸ್ಕಾನ್ ಹಾಡಿ ಹೊಗಳಿ ಆಕೆಯ ಬಗ್ಗೆ ಕವನ ಕೂಡ ರಚಿಸಿದ್ದನು. ಈ ಬೆಳವಣಿಗೆ ರಾಜ್ಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಮುಸ್ಕಾನ್‌ ಮತ್ತು ಆಕೆಯ ಕುಟುಂಬವನ್ನ ವಿಚಾರಣೆ ನಡೆಸುವಂತೆ ಆಗ್ರಹ ಕೇಳಿಬಂದಿತ್ತು. ಕೆಲ ಹಿಂದೂ ಮುಖಂಡರು ಮುಸ್ಕಾನ್ ತನಿಖೆಗೆ ಒತ್ತಾಯಿಸಿ ದೂರು ನೀಡಿದ್ದರು. 

ಪೊಲೀಸರಿಗೆ ಮಾಹಿತಿ ನೀಡದೆ ವಿದೇಶ ಪ್ರವಾಸ: ಮುಸ್ಕಾನ್ ತನಿಖೆಗೆ ಒತ್ತಾಯಿಸಿ ಹಲವು ದೂರುಗಳು ದಾಖಲಾದ ಬಳಿಕ ಮಂಡ್ಯ ಪೊಲೀಸ್ ಇಲಾಖೆ ಮುಸ್ಕಾನ್ ಮೇಲೆ ನಿಗಾ ವಹಿಸಿದ್ದರು. ಆಕೆಯ ಮನೆಗೆ ಯಾರೆಲ್ಲಾ ಭೇಟಿ ನೀಡ್ತಾರೆ ಎನ್ನುವುದರ ಬಗ್ಗೆಯೂ ಕಣ್ಣಿಟ್ಟಿದ್ದರು. ಜೊತೆಗೆ ಎಲ್ಲೇ ಹೋಗುವುದಾದರು ಮಾಹಿತಿ ನೀಡಿ ತೆರಳುವಂತೆಯೂ ಕೂಡ ಪೊಲೀಸರು ಮುಸ್ಕಾನ್ ಕುಟುಂಬಕ್ಕೆ ಮೌಖಿಕ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದ್ರೆ ಏ.25ರಂದೇ ಸೌದಿ ಪ್ರವಾಸ ಕೈಗೊಂಡಿರುವ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿ ಕೊಡದೆ ವಿದೇಶಕ್ಕೆ ತೆರಳಿದೆ. ಇದು ವೈಯಕ್ತಿಕ ಪ್ರವಾಸವೇ ಆದರೂ ಪೊಲೀಸರಿಗೆ ಮಾಹಿತಿ ನೀಡಿ ಹೋಗಬೇಕಿತ್ತು ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ.

ಅಲ್‌ ಜವಾಹಿರಿ ಯಾರೋ ಗೊತ್ತಿಲ್ಲ, ಇಂತಹ ಹೊಗಳಿಕೆ ಬೇಕಿರಲಿಲ್ಲ: ಮುಸ್ಕಾನ್‌ ಖಾನ್‌ ತಂದೆ ಆತಂಕ

ಮುಸ್ಕಾನ್‌ಗೆ ಉಡುಗೊರೆಯಾಗಿ ಸಿಕ್ಕಿದ್ದ ಮೊಬೈಲ್ ತನಿಖೆಗೆ ಒತ್ತಾಯ: ಈ‌ ಹಿಂದೆ ಮುಸ್ಕಾನ್ ವಿರುದ್ಧ ತನಿಖೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಒತ್ತಾಯಿಸಿದ್ದರು. ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಮುಸ್ಕಾನ್ ಹೊಗಳಿ ವಿಡಿಯೋ ಬಿಡುಗಡೆ ಮಾಡಿದ್ದ ಬಳಿಕ ಮುತಾಲಿಕ್ ತನಿಖೆಗೆ ಒತ್ತಾಯಿಸಿದ್ದರು. ಮುಸ್ಕಾನ್ ಕೂಗಿದ್ದರ ಹಿಂದೆ ಸಂಘಟನೆಗಳ ಕೈವಾಡವಿದೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಎಲ್ಲೋ ಕೂತು ಉಗ್ರ ಮುಸ್ಕಾನ್‌ಗೆ ಅಭಿನಂದನೆ ಹೇಳ್ತಾನೆ. ಅಭಿನಂದನೆ ಹೇಳುವ ಹಿಂದೆ ಏನ್ ಇದೆ ಎಂದು ತನಿಖೆ ಮಾಡಬೇಕು. ತನಿಖೆ ಮಾಡಿ ಎಂದರು ತನಿಖೆ ಮಾಡುತ್ತಿಲ್ಲ. ಮಹಾರಾಷ್ಟ್ರದ ಶಾಸಕನೊಬ್ಬ ಫೋನ್ ಕೊಟ್ಟು ಹೋಗಿದ್ದಾನೆ. ಆ ಫೋನಿನಲ್ಲಿ ಅಲ್ ಖೈದಾದ ಗುಟ್ಟು ಇದೆ. ಅದನ್ನು ಪೊಲೀಸರು ತನಿಖೆ ಮಾಡುತ್ತಿಲ್ಲ. ಈ ಬಗ್ಗೆ ತನಿಖೆಯಾಗಬೇಕು ಎಂದಿದ್ದರು.

Follow Us:
Download App:
  • android
  • ios