ಬೆಂಗಳೂರು(ಡಿ.29): ವೈವಾಹಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ವಿವಾಹವಾಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 98 ಲಕ್ಷ ರುಪಾಯಿ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದದೆ.

ಈ ಸಂಬಂಧ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಕಾರ್ತಿಕ್‌ ಎಂಬಾತನ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೌಟುಂಬಿಕ ಕಲಹದಿಂದ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ.

ಚಿನ್ನ, ನಗದು ಹೊತ್ತೊಯ್ದ ನವವಧು, ಹೆಂಡತಿಯೂ ಇಲ್ಲ.. ಹಣವೂ ಇಲ್ಲ!

13 ವರ್ಷದ ಮಗಳ ಜೊತೆ ಪ್ರತ್ಯೇಕವಾಗಿ ವಾಸವಿದ್ದಾರೆ. ಎರಡನೇ ಮದುವೆಯಾಗಲು ಮಹಿಳೆ ಮುಂದಾಗಿದ್ದು, ವೈವಾಹಿಕ ಜಾಲತಾಣದಲ್ಲಿ ತಮ್ಮ ಸ್ವ ವಿವರ ಹಾಕಿದ್ದರು. ಆರೋಪಿ ಕಾರ್ತಿಕ್‌ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದು, ಮದುವೆಯಾಗುವುದಾಗಿ ಹೇಳಿದ್ದ.

ಇಬ್ಬರು ಪರಸ್ಪರ ಆತ್ಮೀಯತೆ ಬೆಳೆದಿತ್ತು. ಮದುವೆಗೂ ಮುನ್ನವೇ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ ಖರೀದಿಸೋಣವೆಂದು ಆರೋಪಿಯು ಮಹಿಳೆ ಬಳಿ ಹೇಳಿದ್ದ. ಇದಕ್ಕೆ .70 ಲಕ್ಷ ತಗುಲುತ್ತದೆ ಎಂದು ಹೇಳಿ ಹಣ ಪಡೆದುಕೊಂಡಿದ್ದ. ಆದರೆ ಫ್ಲ್ಯಾಟ್‌ ಖರೀದಿ ಮಾಡದೆ ಸಬೂಬು ಹೇಳುತ್ತಿದ್ದ.

ರಕ್ಷಿತ್ ಶಟ್ಟಿ ಬೆಳೆಯುತ್ತಿರು ಹುಡುಗಿ ಅಂತ ರಶ್ಮಿಕಾಗೆ ಟೀಸ್ ಮಾಡಿದ್ದಾ!

 ಇತ್ತೀಚೆಗೆ ಮತ್ತೊಮ್ಮೆ ಹಣಕ್ಕೆ ಆರೋಪಿ ಬೇಡಿಕೆ ಇಟ್ಟಿದ್ದ. ಹಣ ನೀಡಲು ನಿರಾಕರಿಸಿದಾಗ 13 ವರ್ಷದ ಮಹಿಳೆಯ ಪುತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಹೆದರಿದ ಮಹಿಳೆ .28 ಲಕ್ಷ ನೀಡಿದ್ದರು. ಇದಾದ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.