ಬೆಳಗಾವಿ : ಇಬ್ಬರು ಬಿಜೆಪಿ ಶಾಸಕರ ಬೆಂಬಲಿಗರಿಂದ ವ್ಯಕ್ತಿಯೋರ್ವನ ಮೇಲೆ ಗಂಭೀರ ಹಲ್ಲೆ ನಡೆದಿದೆ.  

ಬಿಜೆಪಿ ಶಾಸಕರಾದ ಅನಿಲ ಬೆನಕೆ ಮತ್ತು ಅಭಯ ಪಾಟೀಲ್  ಬೆಂಬಲಿಗರಿಂದ ಹಲ್ಲೆ ಸಹಕಾರಿ ಸೊಸೈಟಿ ಚೇರ್ಮನ್  ಮೇಲೆ ಹಲ್ಲೆ ನಡೆದಿದೆ. 

ಜನತಾ ಕೋ ಆಪರೇಟೀವ್ ಮಲ್ಟಿ ಪರ್ಪಜ್ ಸೊಸೈಟಿಯ ಚೇರ್ಮನ್  ಪ್ರವೀಣ್ ಬಾಂದೆವಾಡೆಕರ್ ಮೇಲೆ ಹಲ್ಲೆ ನಡೆಸಲಾಗಿದೆ. 

ಬಿಜೆಪಿ ಶಾಸಕರ ಬೆಂಬಲಿಗರಾದ ಪ್ರದೀಪ ಶೆಟ್ಟಿ ಮತ್ತು ರಾಹುಲ್ ಮುಚ್ಚಂಡಿಕರ ಎಂಬುವವರಿಂದ ಹಲ್ಲೆ ನಡೆದಿದ್ದು,  ಸೆಟ್ಲ್ ಮೆಂಟ್ ವಿಚಾರವೊಂದರ ಸಂಬಂಧ ಈ ಹಲ್ಲೆ ನಡೆದಿದ್ದು, ಹಲ್ಲೆ ದೃಶ್ಯಗಳು ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.