Asianet Suvarna News Asianet Suvarna News

Huvina Hadagali: "ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ

"ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ
ಕಾರ್ಣಿಕ ಕೇಳಲು 5 ಲಕ್ಷ ಜನಸ್ತೋಮ
ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕಾರ್ಣಿಕ

Male Bele Sampatale parak mailaralingeshwara Karnikotswa huvina hadagali in vijayanagara san
Author
Bengaluru, First Published Feb 18, 2022, 8:11 PM IST

ಹೂವಿನಹಡಗಲಿ(ಫೆ.18):  ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯ (Mailaralingeshwara Fair) ಕಾರ್ಣಿಕ ಹೊರಬಿದ್ದಿದ್ದು, "ಮಳೆ ಬೆಳೆ ಸಂಪಾತಲೇ ಪರಾಕ್" ಎನ್ನುವ ಕಾರ್ಣಿಕ ಘೋಷಣೆಯಾಗಿದೆ. ಇದು ಉತ್ತಮ ಕಾರ್ಣಿಕ ನುಡಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಕಾರ್ಣಿಕವನ್ನು ಆಲಿಸಿದವರ ಪ್ರಕಾರ ಇದು ಒಟ್ಟಾರೆ ಉತ್ತಮ ಕಾರ್ಣಿಕ ನುಡಿ ಎಂದು ಹೇಳಲಾಗಿದೆ.

ಕಾರ್ಣಿಕ (Karnikotswa) ನುಡಿ ಆಲಿಸಲು ಪ್ರತಿ ವರ್ಷ ರಾಜ್ಯ, ಅಂತಾರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಈ ಬಾರಿ ಕೋವಿಡ್‌(Covid-19) ನಿಯಂತ್ರಿಸಬೇಕೆಂಬ ಜಿಲ್ಲಾಡಳಿತದ ನಿರ್ದೇಶನದಂತೆ, ಭಕ್ತರ ಆಗಮನಕ್ಕೆ ಅವಕಾಶ ಕಡಿಮೆ ಅವಕಾಶ ಇದ್ದರೂ, 5 ಲಕ್ಷ ಜನರು ಈ ಬಾರಿ ಕಾರ್ಣಿಕವನ್ನು ಆಲಿಸಿದ್ದಾರೆ.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ (PT Parameshwar Naik), ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹಾವೇರಿಯ ಮಾಜಿ ಶಾಸಕ ಬಸವರಾಜ ಶಿವಣ್ಣನವರ್, ವಿಜಯನಗರದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಎಸ್ಪಿ ಡಾ.ಕೆ.ಅರುಣ್ ಸೇರಿದಂತೆ ಇತರರಿದ್ದರು. ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿಯಲ್ಲಿ ದೇಶದ ಭವಿಷ್ಯವೇ ಅಡಗಿದೆ ಎಂಬ ಸತ್ಯಾಂಶ ಕಂಡುಬರುತ್ತದೆ. ಈ ಬಾರಿಯ ಕಾರ್ಣಿಕ ನುಡಿಯಲ್ಲಿ ಏನು ಅಡಗಿದೆ? ಎಂಬ ಕಾತರದಲ್ಲಿ ಸಾಕಷ್ಟು ಭಕ್ತರು ಸೇರಿದ್ದರು.

ಕಾರ್ಣೀಕದ ಅರ್ಥ: ದೈವವಾಣಿಯನ್ನು ಆಲಿಸಲು ನಾಡಿನ ವಿವಿಧ ಭಾಗಗಳಿಂದ ಸಹಸ್ರಾಜ ಸಾವಿರಾರು ಜನ ಭಾಗವಹಿಸಿದ್ದರು. ಈ ಬಾರಿ ಗೊರವಯ್ಯ ನುಡಿದ ಕಾರ್ಣಿಕ ನಾಡಿಗೆ ಒಳಿತು ಎಂಬ ಸಂದೇಶ ನೀಡಿದೆ. ಮಳೆ-ಬೆಳೆ ಉತ್ತಮವಾಗಿ ಆಗುತ್ತದೆ. ಹೊಳೆ-ಹಳ್ಳಗಳು- ಕೆರೆ-ಕಟ್ಟೆಗಳು ತುಂಬುತ್ತವೆ. ಎಲ್ಲವು ಆಶಾದಾಯಕವಾಗಿದೆ ಎಂದು ಅರ್ಥೈಸಿಕೊಂಡ  ಹಿರಿಯರು. ಕಾರ್ಣಿಕ ಕೇಳಲು ವಿವಿಧ ಜಿಲ್ಲೆಯ ಬಹುತೇಕ ಹಿರಿಯರು ಆಗಮಿಸಿದ್ದರು.

Huvina Hadagali: ಇಂದು ಮೈಲಾರಲಿಂಗೇಶ್ವರ ಜಾತ್ರೆ: ಕಾರ್ಣಿಕ ನುಡಿಯಲ್ಲೇ ಅಡಗಿದ ದೇಶದ ಭವಿಷ್ಯ..!
ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣೀಕ ವಾಣಿ ವಿಶ್ಲೇಷಣೆ: ಮೈಲಾರಲಿಂಗೇಶ್ವರ ದೇವಸ್ಥಾನದ (Temple)  ಧರ್ಮದರ್ಶಿ  ವೆಂಕಪ್ಪಯ್ಯ ಒಡೆಯರ್ ಕಾರ್ಣೀಕ ನುಡಿಯನ್ನು ವಿಶ್ಲೇಷಣೆ ಮಾಡಿದ್ದಾರೆ. ಮೈಲಾರದ ಡೆಂಕಣಮರಡಿಯಲ್ಲಿ ವೆಂಕಪ್ಪಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮಳೆ, ಬೆಳೆ ಸಂಪಾಯಿತಲೆ ಪರಾಕ್ ನುಡಿಯ ಅರ್ಥವನ್ನು ತಿಳಿಸಿದರು.
ರೈತರು ಈ ವರ್ಷ ಸಂಪತ್ಭರಿತರಾಗಿ ಇರುತ್ತಾರೆ. ರೈತರ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಮಳೆ ಬೆಳೆಯು ಸಮೃದ್ಧವಾಗುತ್ತವೆ. ಇದರ ಜೊತೆಗೆ ಯಾವ ರೋಗ ರುಜಿನ ಇಲ್ಲದೆ ಸಂತೋಷವಾಗಿ ಜೀವನ ಕಳೆಯುತ್ತೇವೆ ಎಂದು ಹೇಳಿದರು.

Mailaralingeshwara Fair: ನಿಷೇಧದ ನಡುವೆಯೂ ಡೆಂಕಣ ಮರಡಿಗೆ ರಾತ್ರೋರಾತ್ರಿ ಭಕ್ತರ ದಂಡು..!
ಈ ಕಾರ್ಣೀಕವನ್ನು ರಾಜಕೀಯವಾಗಿಯೂ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದಾರೆ. ನೈರುತ್ಯ ಭಾಗದ ಪ್ರಭಾವಿ ಮುಖಂಡ ಮುಂದೆ ರಾಜ್ಯವನ್ನಾಳುತ್ತಾನೆ. ಕುಬೇರನ ಸ್ಥಾನದಲ್ಲಿರುವ ವ್ಯಕ್ತಿ ಮುಂದಿನ ರಾಜಕಾರಣ ಮಾಡ್ತಾನೆ. ಅವರ ಅವಧಿಯಲ್ಲಿ ರಾಜ್ಯದ ಜನರು ಸಂಪನ್ನರಾಗುತ್ತಾರೆ. ಸುಖ ಶಾಂತಿ ಸಂಪತ್ತು ನೀಡುವ ರಾಜಕಾರಣಿ ಬರ್ತಾನೆ. ಮುಂಬರುವ ಸರ್ಕಾರ ಐದು ವರ್ಷಗಳ ಕಾಲ ಸಂಪತ್ಪರಿತವಾಗಿ ಇರುತ್ತದೆ ಎಂದು ಪರೋಕ್ಷವಾಗಿ ವೆಂಕಪ್ಪಯ್ಯ ಹೇಳಿದ್ದಾರೆ.

ಕಾರ್ಣಿಕ ನುಡಿಯ ಘಟನಾವಳಿಗಳು:
ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಶತಮಾನಗಳ ಕಾಲದ ಇತಿಹಾಸವಿದ್ದು, ಅದರಂತೆ 1856ರಲ್ಲಿ ಕೆಂಪು ನೊಣಗಳಿಗೆ ಕಷ್ಟ ಪ್ರಾಪ್ತಿಯಾದೀತಲೇ ಪರಾಕ್‌ ಎಂಬ ಕಾರ್ಣಿಕ ನುಡಿ, ಹಿನ್ನೆಲೆಯಲ್ಲಿ ಭಾರತ(India) ದೇಶವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು, ಆಡಳಿತ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಸಿಪಾಯಿದಂಗೆ ನಡೆಯಿತು. 1984ರಲ್ಲಿ ಇಬ್ಬನಿ ಕರಗಿತಲೇ ಪರಾಕ್‌ ಕಾರ್ಣಿಕ ನುಡಿದಾಗ, ದೇಶದ ಅಂದಿನ ಮಹಿಳಾ ಪ್ರಧಾನಿ ಇಂದಿರಾ ಗಾಂ​ಧಿ(Indira Gandhi) ಅವರ ಹತ್ಯೆ​ಯಾ​ಗಿತ್ತು. ಅದೇ ರೀತಿ 1991ರಲ್ಲಿ ಮುತ್ತು ಒಡೆದು ಮೂರು ಭಾಗ ಆದಿತಲೇ ಪರಾಕ್‌ ಎಂಬ ಕಾರ್ಣಿಕ ನುಡಿದಾಗ, ಪ್ರಧಾನಿ ರಾಜೀವ ಗಾಂ​ಧಿ ಬಾಂಬ್‌ ಸ್ಫೋಟದಿಂದ ನಿಧನ ಹೊಂದಿದ ನಿದರ್ಶನಗಳಿವೆ ಎನ್ನುತ್ತಾರೆ ದೇವಸ್ಥಾನದ ವಂಶ ಪರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌.

Follow Us:
Download App:
  • android
  • ios