ಬಂಡೀಪುರದಲ್ಲಿ ಸಫಾರಿ ಬಂದ್
ಬಂಡೀಪುರದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಇದರಿಂದ ಇಲ್ಲಿ ಸದ್ಯ ಟೈಗರ್ ಸಫಾರಿ ಬಂದ್ ಮಾಡಲಾಗಿದೆ. ಒಂದು ವಾರಗಳ ಕಾಲ ಸಫಾರಿ ಬಂದ್ ಆಗಲಿದೆ.
ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು ಹಿನ್ನೆಲೆ ಒಂದು ವಾರಗಳ ಕಾಲ ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿ ಝೋನ್ ಬೆಂಕಿಯಿಂದ ನಾಶವಾಗಿದ್ದು, ಈ ನಿಟ್ಟಿನಲ್ಲಿ ಸಫಾರಿ ಬಂದ್ ಮಾಡಲಾಗಿದೆ.
ಬಂಡೀಪುರ, ನಾಗರಹೊಳೆ ಕಾಡಿನಲ್ಲಿ 2 ಹುಲಿಗಳ ಸಾವು
ಸಫಾರಿಗಾಗಿ ಪ್ರತಿ ನಿತ್ಯ ಬಂಡೀಪುರಕ್ಕೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇದರಿಂದ ಲಕ್ಷಾಂತರ ರು. ಆದಾಯ ಸಂದಾಯವಾಗುತ್ತಿತ್ತು. ಆದರೆ ಇದೀಗ ಕಾಡ್ಗಿಚ್ಚಿನಿಂದ ಬಂಡಿಪುರದ 5 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಿದೆ.
ಬಂಡೀಪುರ ಅಭಯಾರಣ್ಯ: 4 ದಿನಗಳಾದರೂ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು
ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಹರಸಾಹಸದಿಂದ ಸದ್ಯ ಈ ಪ್ರದೇಶದಲ್ಲೊ ಬೆಂಕಿ ಹತೋಟಿಗೆ ಬಂದಿದೆ.