Asianet Suvarna News Asianet Suvarna News

ಉಡುಪಿಯಲ್ಲಿ ಮಹಿಷಾ ದಸರಾ ಬದಲಿಗೆ ಮಹಿಶೋತ್ಸವ ಆಚರಣೆ: ಜಯನ್ ಮಲ್ಪೆ

ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಷಾ ದಸರಾ ಆಯೋಜಿಸಲು ಮುಂದಾಗಿದ್ದೆವು. ಆದರೆ ಉಡುಪಿ ಜಿಲ್ಲಾಡಳಿತ ಮೆರವಣಿಗೆ, ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದೆ ಎಂದು ಮಹಿಷಾ ದಸರಾ ಆಯೋಜಕ ಜಯನ್ ಮಲ್ಪೆ ಅಸಮಾಧಾನ ವ್ಯಕ್ತಪಡಿಸಿದರು.

Mahishotsava celebrations instead of Mahisha Dussehra in Udupi: Jayan Malpe rav
Author
First Published Oct 14, 2023, 3:42 PM IST

ಉಡುಪಿ (ಅ.14) : ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಷಾ ದಸರಾ ಆಯೋಜಿಸಲು ಮುಂದಾಗಿದ್ದೆವು. ಆದರೆ ಉಡುಪಿ ಜಿಲ್ಲಾಡಳಿತ ಮೆರವಣಿಗೆ, ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದೆ ಎಂದು ಮಹಿಷಾ ದಸರಾ ಆಯೋಜಕ ಜಯನ್ ಮಲ್ಪೆ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಷಾ ದಸರಾ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಜಯನ್, ಮಹಿಷಾ ದಸರಾ ಆಚರಣೆ ಮಾಡಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಉದ್ದೇಶ ಇತ್ತು. ಆದರೆ ಜಿಲ್ಲಾಡಳಿತ ನಿಷೇಧಾಜ್ಞೆ ಇರುವುದರಿಂದ ಆಚರಣೆಗೆ ಅಡ್ಡಿಯಾಗಿದೆ. ನಾವು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದರು.

ಮೈಸೂರು ದಸರಾಕ್ಕೆ ಆರಂಭದಲ್ಲೇ ವಿಘ್ನ; ಇದ್ದಕ್ಕಿದ್ದಂತೆ ಮುರಿದುಬಿದ್ದ ವಿದ್ಯುತ್ ದೀಪಾಲಂಕಾರದ ಕಮಾನು!

 ಮಹಿಷಾ ದಸರಾ ಬದಲಿಗೆ ಮಹಿಶೋತ್ಸವ ನಡೆಸುತ್ತೇವೆ.ರಾಜ್ಯಮಟ್ಟದ ನಾಯಕರ ಸಲಹೆ ಮೇರೆಗೆ ಬದಲಾವಣೆ ಮಾಡಿದ್ದೇವೆ. ಇಲ್ಲಿ ಮಹಿಷಾಸುರ ಯಾರು ಎಂಬ ವಿಚಾರ ಸಂಕಿರಣ ಆಯೋಜಿಸಿದ್ದೇವೆ. ರಾಜ್ಯಾದ್ಯಂತ ದಲಿತ ಸಮುದಾಯದ ಬಂಧುಗಳು ಭಾಗವಹಿಸುತ್ತಾರೆ. ಈ ಕಾರ್ಯಕ್ರಮದ ಉದ್ದೇಶ ಮಹಿಷಾ ರಾಕ್ಷಸ ಅಲ್ಲ ಎಂದು ಹೇಳುವುದು. ಯಾವುದೇ ಧರ್ಮ ದೇವರ ನಿಂದನೆ ಮಾಡುವುದು ನಮ್ಮ ಉದ್ದೇಶವಲ್ಲ

ಮಹಿಷಾ ದಸರಾ ಆಚರಣೆ: ಎಸ್‌ಪಿ ಹೇಳೋದೇನು?

ಮಹಿಷಾ ದಸರಾ ಪರ ವಿರುದ್ಧ ಮೆರವಣಿಗೆ, ಧರಣಿ, ಸತ್ಯಾಗ್ರಹ, ಪೋಸ್ಟರ್ ಹಾಕುವಂತಿಲ್ಲ. ಹೊರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಉಡುಪಿ ಎಸ್‌ಪಿ ಡಾ.ಅರುಣ್ ತಿಳಿಸಿದರು.

 

ಜೈ ಮಹಿಷಾ ಘೊಷಣೆ ಕೂಗುತ್ತಾ ಮೈಸೂರಿನತ್ತ ಹೊರಟ ದಲಿತ ಸಂಘಟನೆ ಕಾರ್ಯಕರ್ತರು!

ಜಿಲ್ಲಾಧಿಕಾರಿಗಳು 35 ಕೆಪಿ ಆಕ್ಟ್ ಪ್ರಕಾರ ಆದೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಹಿಷಾಸುರ ದಸರಾ ಹೊರಾಂಗಣದಲ್ಲಿ ಆಚರಣೆ ನಿರ್ಬಂಧಿಸಲಾಗಿದೆ. ಸೂಕ್ತ ಪೊಲೀಸ್ ಭದ್ರತೆ ಮಾಡಿದ್ದೇವೆ, ಅಗತ್ಯ ಬಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಒಳಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಅಗತ್ಯವಿಲ್ಲ. ಒಳಾಂಗಣದಲ್ಲಿ ಕಾಯ್ದೆ ಉಲ್ಲಂಘನೆ ಆದರೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios