Asianet Suvarna News Asianet Suvarna News

ಮೈಸೂರಲ್ಲಿ ಮಹಿಷಾ ದಸರಾಗೆ ಸರ್ಕಾರ ಅನುಮತಿ: ಶಾಸಕ ಶ್ರೀವತ್ಸ ಏನು ಹೇಳಿದ್ರು? 

ಜಿಲ್ಲಾಡಳಿತ ಮಹಿಷ ದಸರಾ ಮತ್ತು ಚಾಮುಂಡಿ ಚಲೋ ಎರಡಕ್ಕೂ ಅನುಮತಿ ಕೊಟ್ಟಿಲ್ಲ. ನಮಗೆ ಮೈಸೂರು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಮೇಲೆ ನಂಬಿಕೆ ಇದೆ. ನಾಳೆ ಒಂದು ವೇಳೆ ಕದ್ದುಮುಚ್ಚಿ ಹೋಗಿ ಪುಷ್ಪಾರ್ಚನೆ ಮಾಡಿ ಬಂದರೆ ಏನು ಮಾಡೋಕೆ ಆಗುತ್ತೆ ಎಂದು ಶಾಸಕ ಶ್ರೀವತ್ಸ ಹೇಳಿದರು.

Mahisha dasara celebrate issue MLA Shrivatsa statement at mysuru rav
Author
First Published Oct 12, 2023, 5:56 PM IST

ಮೈಸೂರು (ಅ.12) : ಜಿಲ್ಲಾಡಳಿತ ಮಹಿಷ ದಸರಾ ಮತ್ತು ಚಾಮುಂಡಿ ಚಲೋ ಎರಡಕ್ಕೂ ಅನುಮತಿ ಕೊಟ್ಟಿಲ್ಲ. ನಮಗೆ ಮೈಸೂರು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಮೇಲೆ ನಂಬಿಕೆ ಇದೆ. ನಾಳೆ ಒಂದು ವೇಳೆ ಕದ್ದುಮುಚ್ಚಿ ಹೋಗಿ ಪುಷ್ಪಾರ್ಚನೆ ಮಾಡಿ ಬಂದರೆ ಏನು ಮಾಡೋಕೆ ಆಗುತ್ತೆ ಎಂದು ಶಾಸಕ ಶ್ರೀವತ್ಸ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ನಮಗೆ ಮಹಿಷಾ ದಸರಾವನ್ನ ಚಾಮುಂಡಿ ಬೆಟ್ಟದಲ್ಲಿ ಮಾಡುವುದಕ್ಕೆ ವಿರೋಧವಿದೆ. ಬೆಟ್ಟಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ ಅದನ್ನು ಹಾಳು ಮಾಡಬಾರದು ಎಂದರು.

ಮಹಿಷಾ ದಸರಾಗೆ ಸರ್ಕಾರ ಅನುಮತಿ: ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಏನು ಹೇಳಿದ್ರು?

ನಾನು ಯಾರ ಒತ್ತಡಕ್ಕೂ ಮಣಿದಿಲ್ಲ.ಪಕ್ಷಕ್ಕಾಗಿ ಕಳೆದ 38 ವರ್ಷ ಗಳಿಂದ ದುಡಿಯುತ್ತಿದ್ದೇನೆ. ನಾವು ಒಂದು ಸಿದ್ದಾಂತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಸ್ವತಃ ಸಿಎಂ ಪತ್ನಿಯೇ ಜನ ಸಾಮಾನ್ಯರಂತೆ ಬಂದು ಚಾಮುಂಡಿ ತಾಯಿಯ ದರ್ಶನ ಪಡೆದು ಹೋಗುತ್ತಾರೆ. ಪ್ರಧಾನಿ, ರಾಷ್ಟ್ರಪತಿಗಳು ಬಂದು ಹೋಗಿರುವ ಪವಿತ್ರ ಚಾಮುಂಡಿ ಬೆಟ್ಟ. ಹಾಗಾಗಿ ಅಲ್ಲಿನ ಪಾವಿತ್ರ್ಯತೆ ಹಾಳು ಮಾಡುವ ಕೆಲಸ ಮಾಡಬಾರದು.ಒಂದು ವೇಳೆ ಜಿಲ್ಲಾಡಳಿತದ ಆದೇಶವನ್ನು ಮೀರಿ ಮಹಿಷಾ ದಸರಾವನ್ನು ಆಚರಣೆ ಮಾಡಿದರೆ  ನಾವು ಮುಂದೆ ಏನು ಮಾಡಬೇಕೆಂದು ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು. 

ಮಹಿಷ ದಸರಾಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಸದ ಪ್ರತಾಪ ಸಿಂಹ ವಿರುದ್ಧವೇ ಬಿಜೆಪಿ ಮುಖಂಡರು ಹೇಳಿಕೆ ನೀಡಿರುವ ವಿಚಾರ ಸಂಬಂಧ ಮಾತನಾಡಿದ ಶಾಸಕ, ಮಾಹಿತಿ ಕೊರತೆಯಿಂದ ಕೆಲವರಲ್ಲಿ ಗೊಂದಲ ಇರಬಹುದು. ಅವರನ್ನು ಕರೆಸಿ ಮಾತನಾಡುತ್ತೇವೆ. ಗೊಂದಲ ಇದ್ರೆ ನಿವಾರಣೆ ಮಾಡ್ತೀವಿ. ಸುಖ ಸುಮ್ಮನೆ ಮಹಿಷ ದಸರಾ ವನ್ನು ದಲಿತ ವಿಚಾರಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ನಾವು ಯಾರು ಹರಿಜನರ ವಿರೋಧಿಗಳಲ್ಲ. ನಾವು ಮಹಿಷ ದಸರಾದ ವಿರೋಧಿಗಳು ಎಂದರು. 

ಮಹಿಷಾ ದಸರಾಕ್ಕೆ ಅನುಮತಿ: ಎಸ್‌ಎ ರಾಮದಾಸ್ ಕಿಡಿ

ರಾಜನಾದವನ ಮನಸ್ಥಿತಿ ಹೇಗಿರುತ್ತದೋ ಆ ರೀತಿಯೇ ರಾಜ್ಯದಲ್ಲಿ ನಡೆಯುತ್ತವೆ. ಹಾಗೆಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಆ ತಾಯಿಯ ಸೇವೆ ಮಾಡುವ ವಿಚಾರದಲ್ಲೂ ಅನವಶ್ಯಕ ಗೊಂದಲ‌ ನಿರ್ಮಾಣ ಆಗಿದೆ. ಹಾಗೆಯೇ ಬರಗಾಲವೂ ಬಂದಿದೆ ಎಂದು ಮಾಜಿ ಸಚಿವ ಎಸ್‌ಎ ರಾಮದಾಸ್ ಕಿಡಿಕಾರಿದರು.

ಮಹಿಷಾ ದಸರಾಕ್ಕೆ ರಾಜ್ಯ ಸರ್ಕಾರ ಅನುಮತಿ; ಚಿಂತಕ ಚಕ್ರವರ್ತಿ ಸೂಲಿಬೆಲೆ ಕೆಂಡಾಮಂಡಲ!

ಮಹಿಷಾ ದಸರಾ ವಿಚಾರ ಹೊಸದೇನಲ್ಲ, ನಾನು ಮಂತ್ರಿಯಾಗಿದ್ದಾಗಲೂ ಈ ವಿಚಾರ ಇತ್ತು. ಅವರ ಮನಸ್ಸಿನಲ್ಲೇನೋ ಒಂದು ಭಾವನೆ ಇತ್ತು. ಅರ್ಧಗಂಟೆ ಅಲ್ಲಿ ಬಂದು ಅವರ ಮನಸ್ಸಿನಲ್ಲಿನ ಭಾವನೆಯನ್ನು ಹೇಳಿ ಹೋಗ್ತಿದ್ರು. ಆದರೆ ಅದಕ್ಕೆ ಒಂದು ಬಣ್ಣ ಕೊಡುವ ವ್ಯವಸ್ಥೆ ಸರಿಯಲ್ಲ ಕೆಲವರು, ನಾಲ್ಕಾರು ಜನ ಮಹಿಷಾಸುರನ ಜೊತೆಯಲ್ಲಿ ಬಂದು ನಿಂತು ಫೋಟೊ ತೆಗೆಸಿಕೊಂಡು ಹೋಗುವ ವ್ಯವಸ್ಥೆ ಇತ್ತು. ಅದಕ್ಕೆ ಕಾಂಗ್ರೆಸ್ ಸರ್ಕಾರ ಬಂದ ನಂತರ ವಿಶೇಷವಾದ ಬಣ್ಣವನ್ನು ಕೊಟ್ಟಿದ್ದಾರೆ ಎಂದರು.

Follow Us:
Download App:
  • android
  • ios